ಸುಹಾಸ್ ಭೀಕರ ಹತ್ಯೆ ಪ್ರಕರಣ : ಈ ಕೃತ್ಯದಲ್ಲಿ ಬಜಪೆ ಠಾಣೆಯ ಹೆಡ್ ಕಾನ್ಸ್ಟೇಬಲ್ ರಶೀದ್ ನ ಬಗ್ಗೆ VHP ಅನುಮಾನ..!

0 0
Read Time:1 Minute, 53 Second

ಮಂಗಳೂರು : ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ಸಂಘಟನೆ ಮೇಲೆ ನೇರ ಅನುಮಾನವಿದೆ ಇದರಲ್ಲಿ ಬಜ್ಪೆ ಪೋಲೀಸರ ಕೈವಾಡವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕೃತ್ಯಕ್ಕಾಗಿ 50 ಲಕ್ಷಕ್ಕೂ ಹೆಚ್ಚು ಮೊತ್ತದ ಹಣ ಹೂಡಿಕೆಯಾಗಿದ್ದು, ಇದರ ಹಿಂದೆ ದೊಡ್ಡ ಶಕ್ತಿ ಕೆಲಸ ಮಾಡಿದೆ ಹಿಂದೂ ಜಾಗರಣ ವೇದಿಕೆ ಪ್ರಾಂತ ಪ್ರಮುಖ್ ಕೆ.ಟಿ. ಉಲ್ಲಾಸ್ ಆರೋಪಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಉಲ್ಲಾಸ್ ಪಿಎಫ್‌ಐನ ಟಾರ್ಗೆಟೆಡ್ ಕಿಲ್ಲಿಂಗ್ ಈ ಪ್ರಕರಣದಲ್ಲೂ ನಡೆದಿದೆ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ನೌಷಾದ್ ಈ ಪ್ರಕರಣಕ್ಕೆ ಫಂಡಿಂಗ್ ಮಾಡಿದ್ದಾನೆ ಘಟನಾ ಸ್ಥಳದಲ್ಲಿ ಪಿಎಫ್‌ಐ ಕಾರ್ಯಕರ್ತರು ಇದ್ದರು ಎನ್ನುವ ಬಲವಾದ ಮಾಹಿತಿ ಇದೆ ಆದ್ದರಿಂದ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಬೇಕು ಬಜಪೆ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಕೂಡಾ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವಿದೆ.


ಒಂದು ತಿಂಗಳಿಂದ ಅವರು ಸುಹಾಸ್‌ಗೆ ಕರೆ ಮಾಡಿ ಹಿಂಸೆ ಕೊಡುತ್ತಿದ್ದರು. ಅವರನ್ನ್ನೂ ತನಿಖೆಗೆ ಒಳಪಡಿಸಬೇಕು. ಕಳಸದ ರಂಜಿತ್ ಮತ್ತು ನಾಗರಾಜ್‌ನನ್ನು ಸುಳ್ಳು ಹೇಳಿ ಕರೆಸಿ ಕೃತ್ಯದಲ್ಲಿ ಶಾಮೀಲು ಮಾಡಿಸಿದ್ದಾರೆ ಹಿಂದೂಗಳು ಇರುವ ಕಾರಣ ಪ್ರಕರಣಕ್ಕೆ ಎನ್‌ಐಎ ಆ್ಯಂಗಲ್ ಬರಬಾರದು ಎಂದು ಈ ಉಪಾಯ ಮಾಡಿದ್ದಾರೆ ನಮಗೆ ರಾಜ್ಯ ಪೊಲೀಸರ ಸಾಮರ್ಥ್ಯದ ಬಗ್ಗೆ ಅನುಮಾನ ಇಲ್ಲ ಆದರೆ ಸಿಎಂ, ಡಿಸಿಎಂ ಗೃಹ ಸಚಿವರ ಬಗ್ಗೆ ನಂಬಿಕೆ ಇಲ್ಲ ಎಂದು ಹೇಳಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *