
ಮಂಗಳೂರು: ಅಖಿಲ ಭಾರತ ಹೇರ್ & ಬ್ಯೂಟಿ ಅಸೋಸಿಯೇಷನ್, ಇದರ ವಾರ್ಷಿಕೋತ್ಸವ ಹಾಗೂ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮವನ್ನು ಮಂಗಳೂರಿನ ಲಯನ್ಸ್ ಅಶೋಕ್ ಭವನ ಕದ್ರಿ ಯಲ್ಲಿ ನಡೆಸಿದರು.


ಅಧ್ಯಕ್ಷರಾದ ಲತಾ ಹರೀಶ್ ಇವರು ಬಂದಿರುವಂತಹ ಎಲ್ಲಾ ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿದರು.

ಮುಖ್ಯ ಅತಿಥಿ . ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಇದರ ಫೌಂಡರ್ ಟ್ರಸ್ಟಿ ಲಯನ್ ಅನಿಲ್ ದಾಸ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.. ಬಳಿಕ ಸಂಸ್ಥೆಯ ಬಗ್ಗೆ ಸಂಘಟನಾ ವಿಚಾರಗಳ ಬಗ್ಗೆ ಮತ್ತು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಶುಭವನ್ನು ಆರಿಸಿದರು ಹಾರೈಸಿದರು.. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಿದರು


ಐಬ ಸಂಸ್ಥೆ (ಆಲ್ ಇಂಡಿಯಾ ಹ್ಯಾರ್ ಅಂಡ್ ಬ್ಯೂಟಿ ಅಸೋಸಿಯೇಷನ್ ) ಎಲ್ಲಾ ಬ್ಯೂಟಿಷಿಯನ್ ವೃತ್ತಿ ಅವರಿಗೂ ಪ್ರೊಫೆಷನಲ್ ಕ್ಲಾಸ್ ನ ತರಬೇತು ನೀಡುವಲ್ಲಿ ಯಶಸ್ವಿಯಾಗಿದೆ .


ಈ ದಿನದ ವಿಶೇಷ ಆಕರ್ಷಣೆಯಾಗಿ ಅನಿಲ್ ಕುಮಾರ್ ಅವರು ನ್ಯೂ ಸ್ಟೈಲ್ ಹೇರ್ ಕಟ್ಟಿಂಗ್ ನ ತರಬೇತು ನೀಡಿದರು. ಇವರು 20 ವರ್ಷಗಳ ಅನುಭವ ಹೊಂದಿರುವ ಕೌಶಲ್ಯಪೂರ್ಣ ವೃತ್ತಿಪರರಾಗಿದ್ದಾರೆ. ಅವರು ಬೆಂಗಳೂರು ನಗರದಲ್ಲಿರುವ ಪ್ರಸಿದ್ಧ ಫಿಲಿಪೈನ್ಸ್ ಆಧಾರಿತ ಸಂಸ್ಥೆಯಲ್ಲಿ ತಜ್ಞ ತರಬೇತಿಯನ್ನು ಪಡೆದು ಚರ್ಮ, ಕೂದಲು ಹಾಗೂ ಮೇಕಪ್ ಕ್ಷೇತ್ರಗಳಲ್ಲಿ ಆಳವಾದ ಜ್ಞಾನವನ್ನು ಸಂಪಾದಿಸಿದ್ದಾರೆ. ತಮ್ಮ ಉನ್ನತ ಮಟ್ಟದ ಜ್ಞಾನ ಮತ್ತು ಅನುಭವವನ್ನು ಮುಂದಿನ ಪೀಳಿಗೆಯ ವೃತ್ತಿಪರರೊಂದಿಗೆ ಹಂಚಿಕೊಂಡಿದ್ದಾರೆ.

ಮಹತ್ವದ ಸಾಧನೆಗಳನ್ನು ಮಾಡಿದ ಮೂವರು ಮಹಿಳಾ ಗಣ್ಯರನ್ನು ಸನ್ಮಾನಿಸಲಾಯಿತು
ರೆಮೊನಾ ಇವೆಟ್ ಪೆರೆರಾ ಮಂಗಳೂರು ಮೂಲದ ಭರತನಾಟ್ಯ ಕಲಾವಿದೆ. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಲಂಡನ್ (2025) – 170 ಗಂಟೆಗಳ ನಿರಂತರ ನೃತ್ಯ ಮ್ಯಾರಥಾನ್ನ್ ಹಾಗೂ ಭಾರತದ ಗೋಲ್ಡನ್ ಗರ್ಲ್ ಎನ್ನುವ ಹೆಸರನ್ನು ಪಡೆದಿದ್ದಾರೆ.
ಸಂತ ಅಲೋಶಿಯಸ್ ವಿಶ್ವವಿದ್ಯಾಲಯದಲ್ಲಿ ಬಿಎ ಅಂತಿಮ ವರ್ಷ ಓದುತ್ತಿದ್ದಾರೆ. ರೆಮೊನಾ ಕಳೆದ 17 ವರ್ಷಗಳಿಂದ ಭರತನಾಟ್ಯಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ವೇದಿಕೆ ಸಾಧನೆಗಳ ಹೊರತಾಗಿಯೂ, ರೆಮೊನಾ ನೃತ್ಯವನ್ನು ಸಮಾಜದ ಸಬಲೀಕರಣದ ಸಾಧನವಾಗಿ ಬಳಸುತ್ತಿದ್ದಾರೆ. ವಿಶೇಷ ಮಕ್ಕಳಿಗೆ ಮತ್ತು ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರಿಗೆ ಭರತನಾಟ್ಯ ಕಲಿಸುತ್ತಿದ್ದು, ಕಲೆ ಮೂಲಕ ಆತ್ಮವಿಶ್ವಾಸ ಮತ್ತು ಅಭಿವ್ಯಕ್ತಿ ಬೆಳೆಸುತ್ತಿದ್ದಾರೆ.

ಹಂಶಿತಾ ಹರೀಶ್ ಕುಮಾರ್
2025ರ ಮೇ ತಿಂಗಳಲ್ಲಿ ಸಿಎ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ಪ್ರಸ್ತುತ ಬಿಜೈ, ಮಂಗಳೂರು ಶಾಂತರಾಮ ಶೆಟ್ಟಿ & ಕಂಪನಿಯಲ್ಲಿ ಆರ್ಟಿಕಲ್‌ಶಿಪ್ ಮಾಡುತ್ತಿದ್ದಾರೆ.
ಶ್ರೀಮತಿ ಲಿಸಾ ಡಿಸೋಜಾ ಮುಂಬೈನ ಪ್ರಸಿದ್ಧ ಬ್ಯುಟಿಕ್ ಇನ್ಸ್‌ಟಿಟ್ಯೂಟ್‌ನಲ್ಲಿ ಅಲಂಕಾರಶಾಸ್ತ್ರ ಮತ್ತು ಕೂದಲು ಶಿಲ್ಪದ ಕೋರ್ಸ್ ಪೂರೈಸಿದರು. ತರಬೇತಿ ಪೂರ್ಣಗೊಳಿಸಿದ ನಂತರ, ಅವರು ಯಶಸ್ವಿ ವ್ಯವಹಾರ 24 ವರ್ಷಗಳ ಕಾಲ ಯಶಸ್ವಿಯಾಗಿ ನಡೆಸಿದರು. ಬೋಧನೆಗೆ ಅಪಾರ ಆಸಕ್ತಿ ಹೊಂದಿದ ಅವರು ಚಾತುರ್ಯವಂತ ವ್ಯಾಪಾರಿಣಿಯರೂ ಆಗಿದ್ದಾರೆ. ಅವರು ತರಬೇತಿ ನೀಡಿದ ಅನೇಕ ವಿದ್ಯಾರ್ಥಿಗಳು ಇದೀಗ ತಮ್ಮದೇ ಸ್ವತಂತ್ರ ವ್ಯವಹಾರಗಳನ್ನು ಸಕ್ರೀಯ ವ್ಯವಹಾರದಿಂದ ನಿವೃತ್ತಿಯಾದ ನಂತರವೂ, ಅವರು ಲಯನ್ಸ್ ಕ್ಲಬ್ ಬಾಲ್ಮಟ್ಟಾ ಮೂಲಕ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ

ಐಬ ಚೆರ್ ಪರ್ಸನ್ ಮರ್ಸಿ ವೀಣಾ ಡಿಸೋಜಾ ಇವರು ಮಹತ್ವದ ಸಾಧನೆಗಳನ್ನು ಮಾಡಿದ ಮೂವರು ಮಹಿಳಾ ಸಾಧಕಿಯರ ಕಿರು ಪರಿಚಯ ಮಾಡಿದರು ಹಾಗೂ ನಮ್ಮ ಸಂಸ್ಥೆಯು ಮುಂಬರುವ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡುವ ಆಕಾಂಕ್ಷೆಯನ್ನು ವ್ಯಕ್ತಪಡಿಸಿದರು.
ಡೆಪ್ಯೂಟಿ ಚೇರ್ ಪರ್ಸನ್ ಆದ ಜಗದೀಶ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು
ಐಬದ ಕಾರ್ಯಕ್ರಮ ವಿವರವನ್ನು ಕಾರ್ಯದರ್ಶಿ ಭವಾನಿ ರೈ ಹಾಗೂ ಕೃತಜ್ಞತೆ ಸಮರ್ಪಣೆಯನ್ನು ಖಜಾಂಚಿ ಮೀನ ಡಿ ಸೋಜ ನಡೆಸಿದ್ದರು .
ನಂತರ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮನರಂಜನೆಗಾಗಿ ಆಟಗಳನ್ನು ನಮ್ಮ ಸಂಸ್ಥೆಯ ಡೆಪ್ಯೂಟಿ ಚೇರ್ ಪರ್ಸನ್ ಸೋನಿಯ ಅವರು ನಡೆಸಿದರು
ರಜನಿ, ಶ್ವೇತಾ, ಸ್ನೇಹ, ರೂಪ, ಶಾರದಾ, ಸಹನಾ, ಮಾನಸ ಡಯಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು