7 ವರ್ಷಗಳ ಬಳಿಕ ಭಾರತದಲ್ಲಿ ಇಂದು ಅಪರೂಪದ ರಕ್ತ ಚಂದ್ರ ಗ್ರಹಣ

0 0
Read Time:1 Minute, 58 Second

ಬೆಂಗಳೂರು: ಇಂದು ರಾತ್ರಿ ನಭೋ ಮಂಡಲದಲ್ಲಿ  ಅಪರೂಪದ ಕೌತುಕದ ರಕ್ತ ಚಂದನ ಚಂದ್ರಗ್ರಹಣ ಸಂಭವಿಸಲಿದೆ. ಸುದೀರ್ಘ 3 ಗಂಟೆ 28 ನಿಮಿಷಗಳ ಕಾಲ ನಡೆಯುವ ಭೂಮಿ, ಸೂರ್ಯ ಹಾಗೂ ಚಂದ್ರನ ನಡುವಿನ ನೆರಳಿನಾಟಕ್ಕೆ ಭಾರತ ಕೂಡ ಸಾಕ್ಷಿಯಾಗಲಿದೆ.

ಭಾರತವಲ್ಲದೇ , ಏಷ್ಯಾ, ಆಫ್ರಿಕಾ,  ಆಸ್ಟ್ರೇಲಿಯಾ, ಯೂರೋಪ್ ಸೇರಿ ಬಹುತೇಕ ವಿಶ್ವದ ಶೇ .85ರಷ್ಟು ಮಂದಿ ಸೆ. 7ರ ರವಿವಾರ ತಡರಾತ್ರಿ ಸಂಭವಿಸಲಿರುವ ಅತೀ ಅಪರೂಪದ ರಕ್ತ ಚಂದ್ರಗ್ರಹಣವನ್ನು ವೀಕ್ಷಿಸಬಹುದಾಗಿದೆ.

ಏಷ್ಯಾ ಹಾಗೂ ಆಸ್ಟ್ರೇಲಿಯಾದಲ್ಲಿ ಆರಂಭದಿಂದ ಅಂತ್ಯದವರೆಗೂ ಉತ್ತಮವಾಗಿ ಗ್ರಹಣ ಗೋಚರವಾಗಲಿದೆ. ಆದರೆ ಉತ್ತರ ಹಾಗೂ ದಕ್ಷಿಣ ಅಮೆರಿಕದಲ್ಲಿ ಗ್ರಹಣದ ವೇಳೆ ಹಗಲಾಗಿರುವ ಕಾರಣ ಅಲ್ಲಿ ಗೋಚರಿಸುವುದಿಲ್ಲ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ವೀಕ್ಷಿಸಬಹುದಾಗಿದೆ.

ಸುಮಾರು 82 ನಿಮಿಷಗಳ ಕಾಲ ಅಂದರೆ ಸಾಮಾನ್ಯ ಗ್ರಹಣಗಳ ಸಮಯವನ್ನೂ ಮೀರಿ ಈ ಸಂಪೂರ್ಣ ಗ್ರಹಣ ಸಂಭವಿಸುವ ಕಾರಣ ಇದು ಈ ವರ್ಷದ ಮಾತ್ರವಲ್ಲದೇ ಇಡೀ ದಶಕದ ಸುದೀರ್ಘ ಗ್ರಹಣ ಎಂದು ಗುರುತಿಸಲಾಗಿದೆ. ಅಲ್ಲದೇ 7 ವರ್ಷಗಳ ಬಳಿಕ ಭಾರತದಲ್ಲಿ ಗೋಚರವಾಗುತ್ತಿರುವ ಕಾರಣ ಭಾರತೀಯರಿಗೆ ಇನ್ನಷ್ಟು ವಿಶೇಷವಾಗಿದೆ.

ಗ್ರಹಣ ಆರಂಭ: ಸೆ.7ರ ರಾತ್ರಿ ಗಂಟೆ 9.57ಕ್ಕೆ (ಭಾರತೀಯ ಕಾಲಮಾನ), ಸಂಪೂರ್ಣ ಗ್ರಹಣ: ರಾತ್ರಿ ಗಂಟೆ 11ರಿಂದ 12.22ರ ವರೆಗೆ, ಗ್ರಹಣ ಅಂತ್ಯ : ತಡರಾತ್ರಿ ಗಂಟೆ 2.25ಕ್ಕೆ, ಗ್ರಹಣ ಉಚ್ಚಸ್ಥಾನದಲ್ಲಿರುವ ಕಾಲ: ರಾತ್ರಿ ಗಂಟೆ 11.42, ಗ್ರಹಣ ಸಂಭವಿಸುವ ಒಟ್ಟು ಸಮಯ: 5 ಗಂಟೆ 7 ನಿಮಿಷ , ಸಂಪೂರ್ಣ ಗ್ರಹಣದ ಅವಧಿ 82 ನಿಮಿಷ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *