
Read Time:1 Minute, 22 Second
ಮಂಗಳೂರು: ಹಿಜಾಬ್ ಬ್ಯಾನ್ ಮಾಡಿರುವ ಕುಂದಾಪುರದ ಪ್ರಾಂಶುಪಾಲರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ ತಡೆ ಹಿಡಿದಿರುವ ವಿಚಾರದಲ್ಲಿ ಶಿಕ್ಷಕರಿಗೆ ಅವಮಾನ ಮಾಡಿದಂತೆ ಎಂದು ಮಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹಿಜಾಬ್ ಶಕ್ತಿಗಳು ಇನ್ನು ಕೆಲಸ ಮಾಡುತ್ತಿದೆ. ದೇಶದ್ರೋಹಿ ಶಕ್ತಿ ಇನ್ನೂ ಕೆಲಸ ಮಾಡುತ್ತಿದೆ. ಅಂದು ಪ್ರಾಂಶುಪಾಲರು ತಮ್ಮ ಕರ್ತವ್ಯ ಮಾತ್ರ ಮಾಡಿದ್ದರು. ಹೈಕೋರ್ಟ್ ಕೂಡ ಮಾಡಿದ್ದು ಸರಿಯೆಂದು ಹೇಳಿದೆ. ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಪೆಂಡಿಂಗ್ ಇದೆ. ಇಂತಹ ಸಂದರ್ಭದಲ್ಲಿ ಅವರೇ ಆಯ್ಕೆ ಮಾಡಿದವರನ್ನು ಅವರೇ ಕೊನೆಗಳಿಗೆ ಅವಾರ್ಡ್ ಹಿಂದೆ ತೆಗೆದದ್ದು ಸರಿಯಲ್ಲ ಎಂದರು. ಎಲ್ಲೋ ಒಂದು ಕಡೆ ಶಕ್ತಿಗಳು ಮತ್ತು ಓಲೈಕೆ ರಾಜಕಾರಣ ಹಿನ್ನೆಲೆ ಕೆಲಸ ಮಾಡಿದ್ದಾರೆ. ಜಗತ್ತಿನಲ್ಲಿ ಬದಲಾವಣೆ ಆಗುತ್ತಿರುವ ಸಂದರ್ಭದಲ್ಲಿ ಈ ಕೆಲಸ ಮಾಡಿದ್ದಾರೆ. ಸಿಎಂ ಮಧ್ಯೆ ಪ್ರವೇಶಿಸಿ ಪ್ರಶಸ್ತಿ ಕೊಡಿಸಬೇಕು. ಇಲ್ಲೇ ಇದ್ದರೆ ಜನ ತಿರುಗಿ ಬೀಳುತ್ತಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.




