
Read Time:1 Minute, 23 Second
ಮಂಗಳೂರು: ಕುಲಾಲ ಸಂಘ (ರಿ) ಕುಳಾಯಿ ಇದರ ನೂತನ ಅಧ್ಯಕ್ಷರಾಗಿ ಗಂಗಾಧರ್ ಬಂಜನ್ ಆಯ್ಕೆಯಾಗಿದ್ದಾರೆ. ಸಂಘದ ನೂತನ ಪದಾಧಿಕಾರಿಗಳ ಸಭೆಯು ಕರಾವಳಿ ಕುಲಾಲ ಕುಂಬಾರರ ಯುವವೇದಿಕೆ ದ ಕ ಜಿಲ್ಲಾ ಅಧ್ಯಕ್ಷ ಜಯೇಶ್ ಜಿ ಅವರ ಉಸ್ತುವಾರಿಯಲ್ಲಿ ನಡೆಯಿತು.


ಗೌರವ ಅಧ್ಯಕ್ಷರಾಗಿ ಗಂಗಾಧರ್ ಕೆ ಅಧ್ಯಕ್ಷರಾಗಿ ಗಂಗಾಧರ್ ಬಂಜನ್, ಉಪಾಧ್ಯಕ್ಷರಾಗಿ ಉಮೇಶ್ ಕೆ ಏನ್ ಮತ್ತು ಮೀರಾ ಮೋಹನ್ ಕಾರ್ಯದರ್ಶಿಯಾಗಿ ಗಣೇಶ್ ಎಸ್ ಕುಲಾಲ್ , ಕೋಶಾಧಿಕಾರಿಯಾಗಿ ಹರ್ಷಿತ್ ಕುಲಾಲ್, ಜತೆ ಕಾರ್ಯದರ್ಶಿಯಾಗಿ ಹರೀಶ್ ಕಾವಿನಕಲ್ಲು, ಕ್ರೀಡಾ ಕಾರ್ಯದರ್ಶಿ ಯಾಗಿ ಯೋಗೀಶ್ ಡಿ ಕುಲಾಲ್. ಜತೆ ಕ್ರೀಡಾ ಕಾರ್ಯದರ್ಶಿ ಪುಷ್ಪರಾಜ್ ಕೋಡಿಕೆರೆ , ಸಂಘಟನ ಕಾರ್ಯದರ್ಶಿ ಯಾಗಿ ನಾರಾಯಣ್ ಎಸ್ ಮೂಲ್ಯ, ಆಂತರಿಕ ಲೆಕ್ಕ ಪರಿಶೋಧಕರಾಗಿ ನಾಗೇಶ್ ಕುಲಾಲ್ , ಗೌರವ ಸಲಹೆಗಾರರಾಗಿ ಮೋಹನ್ ಐ ಮೂಲ್ಯ, ಜಯೇಶ್ ಗೋವಿಂದ್, ಲಿಂಗಪ್ಪ ಕುಲಾಲ್ , ಲಿಂಗಪ್ಪ ಎಂ ಡಿ, ಶಂಭು ಮೂಲ್ಯ , ಗಣೇಶ್ NMPT , ಗಣೇಶ್ ಕುಲಾಲ್ ಹೊಸಬೆಟ್ಟು , ಶಂಕರ್ ಐ ಮೂಲ್ಯ ನೂತನ ಪದಾಧಿಕಾರಿಗಳಾಗಿ ಆಯ್ಕೆ ಆಗಿದ್ದಾರೆ.