
Read Time:54 Second
ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಭೂಕುಸಿತ ಉಂಟಾಗಿ ಜೀವಹಾನಿ ಸಂಭವಿಸಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಜಿಲ್ಲೆಯ ಜಲಪಾತ, ಚಾರಣ ಪ್ರದೇಶಗಳಿಗೆ ನಿಷೇಧಿಸಲಾಗಿದೆ.


ಬೆಳ್ತಂಗಡಿಯ ನರಸಿಂಹಗಡ ಕೋಟೆ, ಬೊಳ್ಳೆ, ಬಂಡಾಜೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮುಂದಿನ ಆದೇಶದವರೆಗೆ ಪ್ರವೇಶ ನಿಷೇಧಿಸಿ ಬೆಳ್ತಂಗಡಿ ವನ್ಯಜೀವಿ ವಿಭಾಗ ಆದೇಶ ನೀಡಿದೆ. ಗಡಾಯಿಕಲ್ಲಿಗೆ ಕೂಡಾ ಪ್ರವೇಶ ನಿರ್ಬಂಧವಾಗಿದೆ.
ಪ್ರವಾಸಿಗರು ಮೋಜು ಮಸ್ತಿಯಲ್ಲಿ ಮೈಮರೆತು ಯಾವುದೇ ಅಪಾಯ ಸಂಭವಿಸದಂತೆ ಈ ಕ್ರಮ ಜರುಗಿಸಲಾಗಿದೆ.

