
Read Time:1 Minute, 25 Second
ಡಿ.6ರಂದು ಮಂಗಳೂರಿನಿಂದ ನಾಪತ್ತೆಯಾಗಿದ್ದ ಯುವಕ ಚೆನ್ನೈಯಲ್ಲಿ ಪತ್ತೆಯಾಗಿದ್ದಾರೆ.



ರಕ್ಷಣ್ ಜೆ.ಕೆ ಪತ್ತೆಯಾದ ಯುವಕ. ಈತನಿಗೆ ಮದುವೆ ನಿಶ್ಚಯವಾಗಿದ್ದು, ಮದುವೆ ಆಮಂತ್ರಣ ಪತ್ರಿಕೆ ನೀಡಲು ತೆರಳುವುದಾಗಿ ಹೇಳಿ ಡಿ.6ರಂದು ಮನೆಯಿಂದ ಹೊರ ಹೋದವರು ಬಳಿಕ ನಾಪತ್ತೆಯಾಗಿದ್ದರು.
ಇವರ ಕಾರಿ ಮಂಗಳೂರು ಟೌನ್ ಹಾಲ್ ಬಳಿ ಪತ್ತೆಯಾಗಿತ್ತು. ಯುವಕ ನಾಪತ್ತೆಯಾಗಿರುವ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಲೊಕೇಶನ್ ಸರ್ಚ್ ಮಾಡಿದ್ದು, ಚೆನ್ನೈಯಲ್ಲಿ ಇರುವ ಬಗ್ಗೆ ತಿಳಿದಿದೆ.

ಯುವಕ ಮಂಗಳೂರಿನಿಂದ ಚೆನ್ನೈ ರೈಲಿನಲ್ಲಿ ಪ್ರಯಾಣಿಸಿದ್ದು, ಸೋಮವಾರ ಮನೆಯವರೊಂದಿಗೆ ಮಾತನಾಡಿದ್ದು, ತಾನು ಚೆನ್ನೈಯಲ್ಲಿ ಇರುವುದಾಗಿ ತಿಳಿಸಿದ್ದರು.

ಅಲ್ಲದೇ ತನಗೆ ಮದುವೆ ಇಷ್ಟವಿಲ್ಲದಿದ್ದರೂ ಮನೆಯವರು ಮದುವೆ ಸಿದ್ದತೆ ಮಾಡಿಕೊಂಡಿದ್ದರಿಂದ ಮನೆ ಬಿಟು ಹೋಗಿರುವುದಾಗಿ ತಿಳಿದು ಬಂದಿದೆ. ಪೊಲೀಸರು ಇದೀಗ ಚೆನ್ನೈಗೆ ತೆರಳಿದ್ದು, ಯುವಕನನ್ನು ಮಂಗಳೂರಿಗೆ ಕರೆ ತರುತ್ತಿದ್ದಾರೆ ಎಂದು ತಿಳಿದು ಬಂದಿದೆ.

