ಹಿಂದೂ ಹುಡುಗಿಯರ ಬಗ್ಗೆ ಅವಹೇಳನ ಹೇಳಿಕೆ: ಮತ್ತೆ ನಾಲಿಗೆ ಹರಿಯಬಿಟ್ಟ ಅರಣ್ಯಾಧಿಕಾರಿ ಸಂಜೀವ ಪೂಜಾರಿ- ದೂರು ದಾಖಲು

0 0
Read Time:2 Minute, 19 Second

ಮಂಗಳೂರು: ಬಿಲ್ಲವ ಸಮಾಜದ 1ಲಕ್ಷ ಹುಡುಗಿಯರು ವೇಶ್ಯೆಯಾಗಲು ಹಿಂದೂ ಸಂಘಟನೆಯ ಯುವಕರು ಕಾರಣ ಮತ್ತು ಭಜನೆ ಮಾಡಿದ ಹಿಂದು ಹುಡುಗಿಯರನ್ನು ಮರದ ಅಡಿಯಲ್ಲಿ ಮಲಗಿಸಿದವರು ಹಿಂದು ಹುಡುಗರು ಎಂದು ಹೇಳಿಕೆ ನೀಡಿರುವ ಕಾಣಿಯೂರಿನ ಉಪವಲಯ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ದ ಹಿಂದೂ ಜಾಗರಣ ವೇದಿಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಅರಣ್ಯಧಿಕಾರಿಯಾಗಿ ಪಂಜದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂಜೀವ ಪೂಜಾರಿ ಹಿಂದೂ ಸಮಾಜದ ಹೆಣ್ಣುಮಕ್ಕಳ ಬಗ್ಗೆ ತೀರ ಅವಹೇಳನಕಾರಿಯಾಗಿ ಮಾತನಾಡಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಈ ಹಿನ್ನಲೆ ಹಿಂದು ಜಾಗರಣ ವೇದಿಕೆಯ ಗಮನಕ್ಕೆ ಬಂದ ಕೂಡಲೇ ಬೆಳ್ಳಾರೆ ಠಾಣೆಯಲ್ಲಿ ಮತ್ತು ಮಂಗಳೂರು ಅರಣ್ಯ ಅಧಿಕಾರಿ ಅಂತೋಣಿ ಮರಿಯಪ್ಪ ಇವರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಲಕ್ಷ ಪೂಜಾರಿ ಹುಡುಗಿಯರು ಸೂಳೆಯರಿದ್ದಾರೆ. ನನ್ನ ಬಳಿ ಇದಕ್ಕೆ ಹತ್ತು ಸಾವಿರ ದಾಖಲೆ ಇದೆ. ಹಿಂದುತ್ವದ ಹುಡುಗರು ಇವರನ್ನು ಸೂಳೆಯರಾಗಿ ಮಾಡಿದ್ದಾರೆ. ಭಜನೆ ಮಾಡಿ ರಾತ್ರಿ ವೇಳೆ ಅವರನ್ನು ಮರದಡಿಯಲ್ಲಿ ಮಲಗಿಸುತ್ತಾರೆ ಎಂದು ಹೇಳಿ ಅವಮಾನ ಮಾಡಿದ್ದಾರೆ. ಅಪಘಾತವಾದಲ್ಲಿ ಮುಸ್ಲಿಂ ಯುವಕರು ಸಹಾಯಕ್ಕೆ ಬರುತ್ತಾರೆ. ಹಿಂದು ಹುಡುಗರು ಫೋಟೊ ತೆಗೆದು ಹಂಚುತ್ತಾರೆ ಇತ್ಯಾದಿಯಾಗಿ ಹಿಂದು ಧರ್ಮದವರನ್ನು ಅವಾಚ್ಯವಾಗಿ ಮಾತನಾಡಿದ್ದಾರೆ.

ಈತ ಈ ಹಿಂದೆಯೂ ಇಂತಹ ವಿಕೃತ ಮನಸ್ಥಿತಿಯಿಂದ ಹಿಂದುಗಳ ಭಜನೆ ಬಗ್ಗೆ ಟೀಕೆ ಮಾಡಿ ಸೇವೆಯಿಂದ ಅಮಾನತು ಆಗಿದ್ದರು. ಅನಂತರ, ಸೇವೆಗೆ ಸೇರಿದ್ದ ಸಂಜೀವ ಪೂಜಾರಿ ಸಮಯದಲ್ಲಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾರೆ. ಇವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಹಿಂ.ಜಾ.ವೇ ಸುಳ್ಯ ತಾಲೂಕು ಸಂಯೋಜಕ ಸಚಿನ್ ವಳಲಂಬೆ ಮತ್ತಿತರರು ಬೆಳ್ಳಾರೆ ಠಾಣೆಗೆ ದೂರು ನೀಡಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *