
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ, ಮಂಗಳೂರು ಮತ್ತು ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ ಜಂಟಿ ಆಶ್ರಯದಲ್ಲಿ ಉಚಿತ ಪುಟ್ಬಾಲ್ ಬೇಸಿಗೆ ಶಿಬಿರ 2024ರ ಸಮಾರೋಪ ಸಮಾರಂಭ ಉಳ್ಳಾಲ ಭಾರತ್ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಕ್ರೀಡಾ ಇಲಾಖೆಯ ಉಪನಿರ್ದೇಶಕ ಹಾಗೂ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ರೀ ಪ್ರದೀಪ್ ಡಿಸೋಜ ಮಾತನಾಡಿ ಸೌಹಾರ್ದಯುತವಾದ ಯಶಸ್ಸು ಜೀವನ ನಡೆಸಲು ಕ್ರೀಡೆಪೂರಕವಾಗಿರುತ್ತದೆ, ಕ್ರೀಡೆಯಲ್ಲಿ ಎಲ್ಲರೂ ಭಾಗವಹಿಸುವುದರಿಂದ ಜಾತಿ ಮತ ಬೇಧ ಬರುವುದಿಲ್ಲ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಏಕಾಗ್ರತೆ ಬರುತ್ತದೆ ಎಂದರು.



ಯೂತ್ ಸ್ಪೋರ್ಟ್ಸ್ ಅಕಾಡೆಮಿ ಉಳ್ಳಾಲ ಅಧ್ಯಕ್ಷ ಸಾಜಿದ್ ಉಳ್ಳಾಲ್ ಮಾತನಾಡಿ ವರ್ಷಂಪ್ರತಿ ಉಚಿತ ಫುಟ್ಬಾಲ್ ಶಿಬಿರವನ್ನು ನಿರಂತರವಾಗಿ ಮಾಡುತ್ತಾ ಬಂದಿರುತ್ತೇನೆ, ಭಾರತ್ ಹೈಸ್ಕೂಲ್ ಶಾಲಾ ಆಡಳಿತ ನಮ್ಮ ಮೇಲೆ ಪ್ರೀತಿ ವಿಶ್ವಾಸ ಇಟ್ಟು ಕ್ರೀಡಾಂಗಣವನ್ನು ನೀಡಿದ್ದರಿಂದ ಈ ಫುಟ್ಬಾಲ್ ಶಿಬಿರವನ್ನು ಏರ್ಪಡಿಸಲು ಸಾಧ್ಯವಾಗಿದೆ, ಮಕ್ಕಳು ಕೆಟ್ಟ ಚಟಕ್ಕೆಹೋಗದೆ ವಿಧ್ಯೆಯಲ್ಲಿ ಮುಂದುವರೆಸಬೇಕೆಂಬ ಉದ್ದೇಶದಿಂದ ವರ್ಷಂಪ್ರತೀ ಶಿಬಿರವನ್ನು ಮಾಡುತ್ತಾ ಬಂದಿರುತ್ತೇನೆ ಎಂದರು.
ಬೆಳ್ತಂಗಡಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಮುಖ್ಯ ಶಿಕ್ಷಕರು ಶಕ್ತಿ ಭಾರತ್ ವ್ಯಾಯಾಮ ಶಾಲೆ ತೊಕ್ಕೊಟ್ಟು ಶ್ರೀ ಹೇಮಚಂದ್ರ ಬಬ್ಬುಕಟ್ಟೆ ಇವರು ಉಪಸ್ಥಿತರಿದ್ದರು.
ಉಳ್ಳಾಲ ತಾಲೂಕು ಅಮೆಚೂರು ಕಬಡ್ಡಿ ಅಸೋಶಿಯೇಶನ್ ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿಸೋಜ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.