
Read Time:51 Second
ಬೆಳ್ತಂಗಡಿ: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯ ಪೊದಿಂಬಿಲ ನಿವಾಸಿ ಆನಂದ ಆಚಾರ್ಯ ಅವರ ಪುತ್ರ ರಾಜೇಶ್ ಆಚಾರ್ಯ (38) ಡಿ. 23 ರಂದು ಮಾಲ್ಯಳ ಕಾಡಿಗೆ ಮದ್ದಿನ ಸೊಪ್ಪು ತರಲು ಹೋದವರು ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.


ಮನೆಯಿಂದ ಹೋದವರು ಮನೆಗೆ ವಾಪಸಾಗದೆ ಇದ್ದಾಗ ಮನೆಯವರು ಮತ್ತು ಸಾರ್ವಜನಿಕರು ಹುಡುಕಾಟದ ನಡೆಸುವ ವೇಳೆ ಕಲ್ಲಿನ ಸೆರೆಯಲ್ಲಿ ಸಿಲುಕಿದ ರೀತಿಯಲ್ಲಿ ಪೃತದೇಹ ಪತ್ತೆಯಾಗಿದೆ.
ಘಟನ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರು ಬೆಳ್ತಂಗಡಿಯ ಬೆಳ್ಳಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

