ಈ ಸೊಪ್ಪು ತಿನ್ನುವುದರಿಂದ ಹಲವಾರು ಸಮಸ್ಯೆಗಳಿಗೆ ಉತ್ತಮ ಪರಿಹಾರ

0 0
Read Time:2 Minute, 17 Second

ನಾವು ನಮ್ಮ ಆರೋಗ್ಯವನ್ನು ಉತ್ತಮವಾಗಿಡಲು ದವಸ, ಧಾನ್ಯ, ಹಣ್ಣುಗಳ ಜೊತೆಗೆ ಹಸಿರು ತರಕಾರಿಗಳನ್ನು ಸಹ ಸೇರಿಸಬೇಕಾಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ (winter) ಹೆಚ್ಚಾಗಿ ದೊರಕುವ ಮೆಂತ್ಯೆ ಸೊಪ್ಪನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಮೆಂತ್ಯ ಸೊಪ್ಪಿನಲ್ಲಿ ಪೊಟಾಷಿಯಂ, ಮ್ಯಾಂಗನೀಸ್, ಕ್ಯಾಲ್ಸಿಯಂ (Calcium), ವಿಟಮಿನ್ ಎ, ವಿಟಮಿನ್ ಸಿ, ಸೆಲೆನಿಯಂ, ವಿಟಮಿನ್ ಸಿ ಯಂತಹ ಪೋಷಕಾಂಶಗಳು ಕಂಡುಬರುತ್ತವೆ.

ಕೂದಲನ್ನು ಆರೋಗ್ಯಕರವಾಗಿಡಲು ಮೆಂತ್ಯ ಸೊಪ್ಪು (Fenugreek) ಸಹಾಯ ಮಾಡುವುದು. ಮೆಂತ್ಯದಲ್ಲಿರುವ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಸಾರಜನಕವು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇನ್ನೂ ಈ ಸೊಪ್ಪನ್ನು ಜಗಿದು ತಿನ್ನುವುದರಿಂದ (By chewing and eating) ಕೂದಲುಗಳು ಬಲಗೊಳ್ಳುತ್ತವೆ.

ಚಳಿಗಾಲ ಬಂತೆಂದರೆ ಸಾಕು ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ (Digestive problem) ಪೀಡಿಸಲು‌ ಶುರುವಾಗುತ್ತದೆ. ಅಂಥವರಿಗೆ ಮೆಂತ್ಯ ಸೊಪ್ಪು ಪ್ರಯೋಜನಕಾರಿ. ಮೆಂತ್ಯ ಸೊಪ್ಪು ಉತ್ತಮ ಪ್ರಮಾಣದ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು (Fiber and antioxidants) ಹೊಂದಿದೆ. ಗ್ಯಾಸ್, ಮಲಬದ್ಧತೆ ಮತ್ತು ಅಜೀರ್ಣದಿಂದ ಬಳಲುತ್ತಿರುವ ಜನರಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ಕಡಿಮೆ ಮಾಡಲು ಈ ಸೊಪ್ಪು ಸಹಾಯ ಮಾಡುತ್ತದೆ. ಅನಾದಿ ಕಾಲದಿಂದಲೂ ನಮ್ಮ ಹಿರಿಯರು, ಪಂಡಿತರು ಮೆಂತ್ಯ ಎಲೆಗಳನ್ನು ಮಧುಮೇಹ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ (Kidney disease) ಚಿಕಿತ್ಸೆ ನೀಡಲು ಬಳಸುತ್ತಿದ್ದಾರೆ.

ಈ ಸೊಪ್ಪನ್ನು ನಿಯಮಿತವಾಗಿ ಸೇವಿಸುತ್ತಾ ಬಂದ್ರೆ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ.ಇದರಿಂದಾಗಿ ನೆಗಡಿ, ಶೀತದಂತಹ ಅಪಾಯ ಕಡಿಮೆಯಾಗುತ್ತದೆ.

ಮೆಂತ್ಯ ಸೊಪ್ಪು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಮೆಂತ್ಯ ಸೊಪ್ಪಿನಲ್ಲಿ ಅಮೈನೋ ಆಮ್ಲಗಳಿದ್ದು (Amino acid), ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *