ಗೋವಂಶ ಸುರಕ್ಷೆಗಾಗಿ ಜ.25ಕ್ಕೆ ಉಪವಾಸ ವ್ರತ, ಒಂದು ವಾರ ಪಾರಾಯಣ, ಜಪ ಅಭಿಯಾನ: ಪೇಜಾವರ ಶ್ರೀ

0 0
Read Time:3 Minute, 16 Second

ಉಡುಪಿ: ರಾಜ್ಯದ ರಾಜಧಾನಿ ಬೆಂಗಳೂರು, ನಂಜನಗೂಡು ಸೇರಿದಂತೆ ಇತರೆಡೆ ನಡೆಯುತ್ತಿರುವ ಗೋವುಗಳ ಮೇಲಿನ ಕ್ರೌರ್ಯ, ದೌರ್ಜನ್ಯ ಖಂಡಿಸಿ ಎಲ್ಲರೂ ಜ.25ರಂದು ಒಂದು ದಿನದ ಉಪವಾಸ ವ್ರತ ಹಾಗೂ ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಕೈಗೊಳ್ಳುವಂತೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.

ಪ್ರಕಟಣೆ ನೀಡಿರುವ ಶ್ರೀಮಠವು ” ಹಿಂದೂಗಳ ಶ್ರದ್ಧೆಯಂತೆ ಗೋವುಗಳ ಮೇಲಿನ ಹಿಂಸೆ, ಗೋವಧೆ, ದುರಾಕ್ರಮಣಗಳು, ಗೋವಿನ ಆರ್ತನಾದಗಳು ಯಾವ ಕಾರಣಕ್ಕೂ ಶ್ರೇಯಸ್ಸು ಉಂಟು ಮಾಡದು ಬದಲಾಗಿ ನೆಲದ ದುರ್ಭಿಕ್ಷೆ, ಅಶಾಂತಿ, ಕ್ಷಾಮಗಳಿಗೆ ಕಾರಣವಾಗುತ್ತವೆ. ಈ ಬೆಳವಣಿಗೆಗಳಿಂದ ಅಕ್ಷರಶಃ ಆಘಾತಗೊಂಡಿರುವ ಹಿಂದೂ ಸಮಾಜವು ಗೋವಂಶದ ರಕ್ಷಣೆಗೆ ತಕ್ಷಣ ಧಾವಿಸಬೇಕಿದೆ ಎಂದು ಹೇಳಿದರು.

ಗೋ ಹತ್ಯೆ, ಗೋವುಗಳ ಮೇಲಿನ ಪೈಶಾಚಿಕ ಕೃತ್ಯಗಳು ಅಂತ್ಯವಾಗಲೇಬೇಕು. ಈ ಉದ್ದೇಶಕ್ಕಾಗಿ ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಸಂಕಲ್ಪಿಸಲಾಗುತ್ತಿದ್ದು, ಜ. 25ರಂದು ಎಲ್ಲರೂ ಉಪವಾಸ ವ್ರತ ಕೈಗೊಳ್ಳಬೇಕು. ಅದಕ್ಕಾಗಿ ಯಾವುದೇ ಜಾತಿ, ಮತ ಬೇಧವಿಲ್ಲದೇ ಪುರುಷರು, ಮಹಿಳೆಯರು, ಯುವಕ, ಯುವತಿಯರು, ಸನಾತನ ಧರ್ಮಶ್ರದ್ಧೆ, ಗೋವುಗಳ ಮೇಲೆ ಪ್ರೀತಿ, ಭಕ್ತಿ, ಗೋವಿನ ಹಾಲು ಕುಡಿದ ಋಣಕ್ಕಾಗಿ ಪ್ರತಿಯೊಬ್ಬರು ಈ ಅಭಿಯಾನದಲ್ಲಿ ಭಾಗಿಯಾಗಲು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

ಪ್ರತಿ ಮನೆಗಳಲ್ಲಿ ಒಂದು ವಾರ ಪರ್ಯಂತ ಎಲ್ಲರೂ ಒಟ್ಟಾಗಿ ದೇವರ ಮುಂದೆ ದೀಪವಿರಿಸಿ ಗೋವುಗಳ ಮೇಲೆ ಹಿಂಸಾಚಾರ, ಗೋಹತ್ಯೆಯಂತಹ ದುಷ್ಕೃತ್ಯಗಳ ಅಂತ್ಯ, ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಸದ್ಬುದ್ಧಿ, ಗೋವುಗಳಿಗೆ ನೆಮ್ಮದಿ, ಸುರಕ್ಷಿತ ಬದುಕು ಒದಗುವಂತಾಗಬೇಕು ಅದಕ್ಕಾಗಿ ದಿನಕ್ಕೆ ಅರ್ಧಗಂಟೆ ಮೀಸಲಿಟ್ಟು ಪಾರಾಯಣ ನಡೆಸಿ, ಸಂಘ-ಸಂಸ್ಥೆಗಳು ದೇವಾಲಯಗಳಲ್ಲಿ ಸಾಮೂಹಿಕವಾಗಿ ಪಾರಾಯಣ ನಡೆಸಬಹುದು ಎಂದಿದ್ದಾರೆ.

ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಅಭಿಯಾನ ನಡೆಸಿ ಕೊನೆಯ ದಿನ (ಜ.29) ಆಯಾ ಊರಿನ ಮಠ, ಮಂದಿರ, ದೇವಸ್ಥಾನಗಳಲ್ಲಿ ವಿಷ್ಣು ಸಹಸ್ರನಾಮ ಯಜ್ಞ ಅಥವಾ ಪಂಚಾಕ್ಷರ ಯಜ್ಞ ನಡೆಸಿ ಅಭಿಯಾನ ಸಂಪನ್ನಗೊಳಿಸುವುದು. ಈ ಅಭಿಯಾನಕ್ಕೆ ನಾಡಿನ ಸಾಧು, ಸಂತರು, ಭಜನಾ ಮಂದಿರಗಳು, ಪಾರಾಯಣ ಮಂಡಳಿಗಳು,ವಿವಿಧ ಜಾತಿ ಸಂಘಟನೆಗಳು,ಹಿಂದೂ ಸಂಘಟನೆಗಳು ಸಹಭಾಗಿಗಳಾಗಬೇಕು ಎಲ್ಲ ಮಠಾಧೀಶರು ಶಿಷ್ಯರ, ಅಭಿಮಾನಿಗಳ, ಭಕ್ತರಿಗೆ ಕರೆಕೊಡಬೇಕು ಎಂದು ಮನವಿ ಮಾಡಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *