ಕುಟುಂಬ ವೈದ್ಯ ಪದ್ಧತಿ ಅಂದು ಇಂದು ಮುಂದೂ.. ಈ ಬಾರಿಯ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನ ಮಂಗಳೂರಲ್ಲಿ- ಡಾ.ಕುಲಾಲ್.

0 0
Read Time:4 Minute, 28 Second

ಹತ್ತು ವರ್ಷಗಳ ಬಳಿಕ ಮತ್ತೊಮ್ಮೆ ಕುಟುಂಬ ವೈದ್ಯರ ರಾಜ್ಯ ಸಮ್ಮೇಳನವನ್ನ ಮಾಡುವ ಅವಕಾಶ ಮಂಗಳೂರಿಗೆ ದೊರೆತಿದೆ. ಭಾರತೀಯ ವೈದ್ಯಕೀಯ ಸಂಘದ ಕುಟುಂಬ ವೈದ್ಯರ ವಿಭಾಗ ಮತ್ತು ಇಪ್ಪತ್ತನೇ ವರ್ಷದ ಸಂಭ್ರಮದಲ್ಲಿ ಇರುವ ಮಂಗಳೂರಿನ ಕುಟುಂಬ ವೈದ್ಯರಸಂಘ ಆಶ್ರಯದಲ್ಲಿ ಈ ಬಾರಿ ರಾಜ್ಯಕುಟುಂಬವೈದ್ಯರ ಸಮ್ಮೇಳನ ಜರುಗಲಿದೆ ಎಂದು ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ತಿಳಿಸಿದರು.

ನಗರದಲ್ಲಿ ಕುಟುಂಬ ವೈದ್ಯರ ಸಂಘಟನೆಯಲ್ಲಿ ನ್ಯೂಮೋನಿಯಾ ಬಗ್ಗೆ ಜರುಗಿದ ವೈದ್ಯಕೀಯ ಕಾರ್ಯಾಗಾರದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು. 2024 ರ october ತಿಂಗಳ 20 ರಂದು ಮಂಗಳೂರಲ್ಲಿ ಜರುಗುವ ರಾಜ್ಯ ಕುಟುಂಬ ವೈದ್ಯರ ಸಮ್ಮೇಳನಕ್ಕೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಐಎಂಎ ಹಾಗೂ ಕುಟುಂಬ ವೈದ್ಯರ ಸಂಘಟನೆಯ ಹಿರಿಯ ಹಾಗೂ ತಜ್ಞ ನಾಯಕರುಗಳು ಭಾಗವಹಿಸುತ್ತಿದ್ದಾರೆ. ನಶಿಸುತ್ತಿರುವ ಕುಟುಂಬ ವೈದ್ಯಪದ್ಧತಿ( ಫ್ಯಾಮಿಲಿ ಮೆಡಿಸಿನ್) ಉಳಿಯಬೇಕಾದರೆ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳ ಹಾಗೂ ಇಂಟರ್ನ್ ಗಳ ಗಮನ ಸೆಳೆದು ಅವರಿಗೆ ಫ್ಯಾಮಿಲಿ ಮೆಡಿಸಿನ್ ಅಗತ್ಯ ಬಗ್ಗೆ ತಿಳಿಹೇಳಲು ಸಿದ್ಧತೆ ಮಾಡಿಕೊಂಡಿದ್ದು. ಕಳೆದ ಹತ್ತು ವರ್ಷಗಳಲ್ಲಿ ಕುಟುಂಬ ವೈದ್ಯರ ಅಂದರೆ ಎಂಬಿಬಿಎಸ್ ಮಾಡಿ ಪ್ರಾಕ್ಟೀಸ್ ಮಾಡುವವರ ಸಂಕ್ಯೆ ತುಂಬಾ ಕ್ಷೀಣಿಸಿದೆ. ಅದಕ್ಕೆ ಈ ಬಾರಿ ಕುಟುಂಬ ವೈದ್ಯ ಪದ್ದತಿ ಅಂದು ಇಂದು ಹಾಗೂ ಮುಂದು. ಎಂಬ ಶೀರ್ಷಿಕೆ ಯ ಮೂಲಕ ಒಂದು ದಿನದ ಚಿಂತನ ಮಂಥನದ ಗೋಷ್ಠಿಗಳು ಜರುಗಲಿದ್ದು ಹಿರಿಯ ತಜ್ಞ ಕುಟುಂಬ ವೈದ್ಯರ ಜೊತೆ ಜಿಲ್ಲಾ ಆರೋಗ್ಯ ವಿಭಾಗ, ಮೆಡಿಕಲ್ ಕಾಲೇಜ್ ಶಿಕ್ಷಕರು, ಜಿಲ್ಲಾಡಳಿತ, ಪೊಲೀಸ್ ವಿಭಾಗ, ಕಾನೂನುವಿಭಾಗ, ಮಾಧ್ಯಮ ಮಂದಿ, ಪ್ರಜ್ಞಾವಂತ ನಾಗರಿಕರನ್ನ ಚರ್ಚೆಯಲ್ಲಿ ಭಾಗವಹಿಸುವಂತೆ ಮಾಡಿ ಕುಟುಂಬ ವೈದ್ಯಪದ್ಧತಿಯಬಗ್ಗೆ ಜನಜಾಗೃತಿಯ ಮೂಡಿಸಿ ಒಂದು ಶ್ರೇಷ್ಠ ಹಾಗೂ ಅವಶ್ಯ ವೈದ್ಯಪದ್ಧತಿಯನ್ನ ಉಳಿಸುವ ಪ್ರಯತ್ನ ಮಾಡಲಾಗುವುದು. ಐಎಂಎ ಕುಟುಂಬ ವೈದ್ಯರ ವಿಭಾಗದ ರಾಜ್ಯ ಅದ್ಯಕ್ಷರೂ, ವಿಂಷತಿ ಸಂಭ್ರಮದಲ್ಲಿ ಇರುವ ಮಂಗಳೂರು ಕುಟುಂಬ ವೈದ್ಯರ ಸಂಘಟನೆಯ ಅಧ್ಯಕ್ಷರಾಗಿರುವ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಅವರ ಅದ್ಯಕ್ಷತೆಯಲ್ಲಿ ಜರುಗುವ ಈ ಸಮ್ಮೇಳನ ಹಾಗೂ ಗೋಷ್ಠಿಗೆ ಹಿರಿಯ ತಜ್ಞ ಕುಟುಂಬ ವೈದ್ಯರಾದ ಡಾ ಸದಾಶಿವ ಪೊಳನಾಯ ಗೌರವ ಅಧ್ಯಕ್ಷರಾಗಿ, ಇನ್ನೊಬ್ಬ ಹಿರಿಯ ಕುಟುಂಬ ವೈದ್ಯರಾದ ಡಾ ಜಿಕೆ ಭಟ್ ಸಂಕಬಿತ್ತಿಲು ಸಂಘಟನಾ ಕಾರ್ಯದರ್ಶಿಆಗಿ, ಡಾ ಜೆ ಎನ್ ಭಟ್ ಗೋಷ್ಠಿಗಳ ಸಂಚಾಲಕರಾಗಿ, ಡಾ ಶೇಖರ್ ಪೂಜಾರಿ ಅವರನ್ನು ಸಮ್ಮೇಳನದ ಕೋಶಾದಿಕಾರಿಯನ್ನಾಗಿ ಆರಿಸಲಾಯಿತು. ಎಲ್ಲಾ ಮಾಜಿ ಅದ್ಯಕ್ಷರುಗಳು ಹಾಗೂ ಕಾರ್ಯದರ್ಶಿಗಳ ಸಹಯೋಗದೊಂಡಿದೆ ಸ್ವಾಗತ ಹಾಗೂ ಪ್ರಚಾರ ಸಮಿತಿಯನ್ನ ರಚಿಸಲಾಯಿತು. ಸಮ್ಮೇಳನದಲ್ಲಿ ಮಂಗಳೂರಿನ ಕುಟುಂಬ ವೈದ್ಯರ ಸಂಘಟನೆಯ ಸ್ಥಾಪಕರಲ್ಲಿ ಪ್ರಮುಖರಾದ ಈಗ ನಮ್ಮ ಜೊತೆ ಇಲ್ಲದಿದ್ದರೂ ಸಂಘಟನೆಗೆ ಪ್ರೇರಣೆಆಗಿದ್ದ ಡಾ ಕೆ ಮೋಹನದಾಸ್ ಭಂಡಾರಿ, ಡಾ ಎಂ ಎ ಅರ್ ಕುಡ್ವಾ, ಹಾಗೂ ಡಾ ಜಯಪ್ರಕಾಶ್ ಖಂಡಿಗೆ ಯವರ ಹೆಸರಲ್ಲಿ ಗೋಷ್ಠಿಗಳನ್ನು ಏರ್ಪಡಿಸಲು ಚರ್ಚಿಸಲಾಯಿತು.


ಶೈಕ್ಷಣಿಕ ಕಾರ್ಯಾಗಾರದಲ್ಲಿ ನ್ಯೂಮೋನಿಯಾ ಕಾಯಿಲೆಬಗ್ಗೆ ಪರಿಣಾಮಕಾರಿಯಾಗಿ ಉಪನ್ಯಾಸನೀಡಿದ ಡಾ ಅಲ್ಕಾ ಭಟ್ ಅವರನ್ನು ಗೌರವಿಸಲಾಯಿತು. ನಗರದ ಯುನಿಟಿ ಆಸ್ಪತ್ರೆಯವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಡಾ ಎಂ ಅಣ್ಣಯ್ಯ ಕುಲಾಲ್ ಉಲ್ತೂರು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಡಾ ಶೇಖರ್ ಪೂಜಾರಿ ನಿರ್ವಹಿಸಿ ವಂದಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *