ಮಂಗಳೂರು: ವಿದೇಶಿ ಉದ್ಯೋಗಕ್ಕೆ ಅನಧಿಕೃತ ನೇಮಕಾತಿ – ಎಸ್ಸೆಲ್ ವಿಲ್ಕನ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲು

0 0
Read Time:1 Minute, 31 Second

ಮಂಗಳೂರು: ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೆ, ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡಿ ನೇಮಕಾತಿಯಲ್ಲಿ ತೊಡಗಿಸಿಕೊಂಡ ಮಂಗಳೂರಿನ ಎಸ್ಸೆಲ್ ವಿಲ್ಕನ್ ಎಂಬ ಸಂಸ್ಥೆಯ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ Protector of Emigrants, Ministry of External Affairs ಬೆಂಗಳೂರಿನಿಂದ ದೂರು‌ ಬಂದಿತ್ತು. ಮಂಗಳೂರಿನ ಬೆಂದೂರುವೆಲ್‌ನ Essel Willcon ಎಂಬ ಸಂಸ್ಥೆಯ M/S Hireglow Elegant Overseas International (OPC) Pvt, Mangaluru ಎಂಬ ಏಜನ್ಸಿಯಿಂದ ಈ ಕೃತ್ಯ ಎಸಗಿದೆ. ಎಮಿಗ್ರೇಷನ್ ಆ್ಯಕ್ಟ್ 1983ರಡಿಯಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ನೋಂದಣಿಯಾಗದೆ, ಅನಧಿಕೃತವಾಗಿ ಸಾಗರೋತ್ತರ ಉದ್ಯೋಗಗಳಿಗೆ ಜಾಹೀರಾತು ನೀಡುವ ಮೂಲಕ ಸಾಗರೋತ್ತರ ನೇಮಕಾತಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು.

ನೇಮಕಗೊಂಡ ಅಭ್ಯರ್ಥಿಗಳಿಂದ ಅನಧಿಕೃತವಾಗಿ ನಿಯಮ ಬಾಹಿರವಾಗಿ ಪಾಸ್‌ಪೋರ್ಟ್‌ಗಳನ್ನು ಸಂಗ್ರಹಿಸಿದ್ದಾರೆ. ಈ ಏಜೆನ್ಸಿ ವಿದೇಶಾಂಗ ಸಚಿವಾಲಯದಲ್ಲಿ ನಿಯಮದ ಪ್ರಕಾರ ನೋಂದಣಿಯಾಗಿಲ್ಲ. ಆದ್ದರಿಂದ ಇಮಿಗ್ರೇಷನ್ ಆಕ್ಟ್ 1983ನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *