
Read Time:55 Second
ಮಂಗಳೂರು : ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಾವೂರು ಪೊಲೀಸರು ಮೂವರನ್ನು ಮಂಗಳವಾರ ಬಂಧಿಸಿದ್ದಾರೆ.


ಬಂಧಿತ ಆರೋಪಿಗಳು ಕಾಸರಗೋಡಿನ ಮೇಘನಾಥ ಟಿ. (19), ಕೇರಳ ಕಯ್ಯೂರಿನ ಶ್ರೀಶಾಂತ್(18) ಮತ್ತು ಸಯೂಜ್ ಎಂ(20) ಎಂದು ಗುರುತಿಸಲಾಗಿದೆ.
ಇವರಿಂದ ಮಾದಕ ವಸ್ತು ವಶಪಡಿಸಲಾಗಿದೆ. ಪೊಲೀಸರು ಮಾಲಾಡಿ ಕೋರ್ಟ್ ರಸ್ತೆ ಕಡೆಯಿಂದ ಗೋಲ್ಡ್‌ಫಿಂಚ್ ಮೈದಾನದ ಕಡೆಗೆ ಹೋಗುತ್ತಿದ್ದಾಗ ಅನುಮಾನಾಸ್ಪದವಾಗಿ ನಿಂತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಿಸಿದರು.


ಈ ವೇಳೆ ಆರೋಪಿಗಳು ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
