
Read Time:1 Minute, 23 Second
ಪುತ್ತೂರು : ಡಿ.5 ರಂದು ಸೊಸೈಟಿಯಿಂದ ಹಣ ವಿಡ್ರಾ ಮಾಡಿ ತೆರಳಿದ್ದ ಪುತ್ತೂರಿನ ಪಡ್ಡಾಯೂರಿನ ನಿವಾಸಿಯಾಗಿರುವ ನಂದಕುಮಾರ್(61) ಶವವಾಗಿ ಪತ್ತೆಯಾಗಿದ್ದಾರೆ.


ನಂದಕುಮಾರ್ ಅವರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ಸಂದರ್ಭ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ವಿಡ್ರಾ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇಂದು ಪುತ್ತೂರಿನ ಸಾಲ್ಮರ ಬಳಿ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃತದೇಹವು ಪತ್ತೆಯಾಗಿದೆ.
ನಂದಕುಮಾರ್ ಅವರು ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ತಿಳಿದಿದೆಯಾದರೂ ಮೃತದೇಹದ ಬಳಿ ಸಿಕ್ಕಿರುವ ಚೀಲದಲ್ಲಿ ಹಣ ಕಂಡು ಬಂದಿಲ್ಲ. ಹಾಗಾಗಿ ಹಣಕ್ಕಾಗಿ ನಂದಕುಮಾರ್ ಅವರನ್ನು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.


ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದಾರೆ.
