ರಾಮ ಕ್ಷತ್ರೀಯ ಸೇವಾ ಸಂಘದಿಂದ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರುರವರಿಗೆ “ಪೌರ ಸನ್ಮಾನ”

0 0
Read Time:8 Minute, 16 Second

ಮಂಗಳೂರು: ರಾಮ ಕ್ಷತ್ರೀಯ ಸೇವಾ ಸಂಘದಿಂದ ಸಮಾಜ ಮುಖೀ ವೈದ್ಯಕೀಯ ಸೇವೆ, ಶಿಕ್ಷಣ, ಸಾಹಿತ್ಯ, ಸಂಘಟನೆ, ಬರಹ ಭಾಷಣ ಹೋರಾಟಗಳಿಂದಲೇ ಸಮಾಜ ವಿಜ್ಞಾನಿ ಎಂಬ ಹೆಗ್ಗಳಿಕೆಯಿಂದ ಪ್ರತಿಷ್ಠಿತ ಡಾ ಬಿ ಸಿ ರಾಯ್ ರಾಷ್ಟ್ರ ಪುರಸ್ಕಾರ ಹಾಗು ಪ್ರತಿಷ್ಠಿತ ದೇವರಾಜ ಅರಸು ರಾಜ್ಯ ಪುರಸ್ಕಾರ ಪಡೆದ ಕರ್ನಾಟಕ ರಾಜ್ಯದ ಏಕಮಾತ್ರ ವೈದ್ಯ ಕುಲಾಲ-ಕುಂಬಾರ ಸಮುದಾಯದ ಡಾ ಎಂ ಅಣ್ಣಯ್ಯ ಕುಲಾಲ್ ಉಳ್ತೂರು ಇವರಿಗೆ “ಪೌರ ಸನ್ಮಾನ” ಕಾರ್ಯಕ್ರಮವು ದಿನಾಂಕ ಸೆ. 28 ರಂದು ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್ ಮಂಗಳೂರಿನಲ್ಲಿ ನಡೆಯಲಿದೆ.

ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಕುರಿತು:

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೋಟಾ-ತೆಕ್ಕಟ್ಟೆ ಸಮೀಪದ , ಉಳ್ತೂರಿನಲ್ಲಿ ಜನಿಸಿದ, ಅಣ್ಣಯ್ಯ ಕುಲಾಲರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನ ಹಳೆ ವಿದ್ಯಾರ್ಥಿ.
ಮಂಗಳೂರಿನ ಪ್ರತಿಷ್ಠಿತ KMC ಯಲ್ಲಿ MBBS ಮುಗಿಸಿದರು.ಕಳೆದ ೨೫ ವರ್ಷ ಗಳಿಂದ, ಬೇಗ ಕೆಲಸಕ್ಕೆ ಹೋಗುವವರಿಗೆ, ಕೂಲಿ ಕಾರ್ಮಿಕರಿಗೆ ಸಹಾಯ ಆಗಲೆಂದು, ಬೆಳಿಗ್ಗೆ 7 ಗಂಟೆಗೆ ಕ್ಲಿನಿಕ್ ನಡೆಯಿಸುತ್ತಿರುವವರು ನಮ್ಮ ಡಾಕ್ಟರ್ ಕುಲಾಲ್ ರವರು. ಬಡತನ ಅನುಭವಿಸಿದವರಿಗೆ ಮತ್ತು ಮಾನವೀಯತೆಯ ಅರಿವಿರುವ ಮಹಾನ್ ವ್ಯಕ್ತಿಗಳಿಂದ ಮಾತ್ರ, ಇಂತಹ ಕೈಂಕರ್ಯ ಸಿಗುತ್ತದೆ.
ಸುಮಾರು 16 ವರ್ಷ ದೇವರಾಜ ಅರಸು ಸರಕಾರಿ ಹಾಸ್ಟೆಲ್ ನಲ್ಲಿ ಓದಿ ವೈದ್ಯರಾದವರು. ಪ್ರಸ್ತುತ ಕರ್ನಾಟಕದ ನಿಯೋಜಿತ ರಾಜ್ಯ ಉಪಾಧ್ಯಕ್ಷರು.
ಕುಟುಂಬ ವೈದ್ಯರ ಕರ್ನಾಟಕ ರಾಜ್ಯ ಅಧ್ಯಕ್ಷರು. ಶ್ರೀನಿವಾಸ್ ಯೂನಿವರ್ಸಿಟಿ ಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಬಳಿಕ, ಈಗ 5 ವರ್ಷಗಳಿಂದ ಮಂಗಳೂರು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಮಂಗಳೂರಿನ , ಮಂಗಳಾದೇವಿ ಹಾಗು ಪಡೀಲ್ ಪರಿಸರದಲ್ಲಿ ಕಳೆದ 28 ವರ್ಷಗಳಿಂದ “ಕುಲಾಲ್ ಹೆಲ್ತ್ ಕೇರ್ ಸೆಂಟರ್” ಮತ್ತು “ಸರ್ವಜ್ಞ ಸೆಕೆಂಡ್ ಒಪೀನಿಯನ್ ಸೆಂಟರ್” ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.
ತುಳು, ಕನ್ನಡ ಭಾಷೆ, ನಾಡು, ಸಂಸ್ಕೃತಿಯ ಬಗ್ಗೆ ಸದಾ ತುಡಿಯುವ ಡಾಕ್ಟರ್ ಮನಸ್ಸು, ಮತ್ತು ಆ ನೆಲೆಯಲ್ಲಿ ಅವರ ಹೋರಾಟ ಎಂತವರನ್ನೂ ಬೆರಗುಗೊಳಿಸುತ್ತದೆ. ನಮ್ಮ ಸ್ಥಳೀಯ ಭಾಷೆಗಳ ಉಳಿವಿಗಾಗಿ, ಕುಂದಾಪ್ರ ಕನ್ನಡ, ಅರೆಕನ್ನಡ, ತುಳು, ಹವ್ಯಕ, ಬ್ಯಾರಿ ಭಾಷೆಗಳ ಸಮಾನ ಮನಸ್ಕರ ಹೋರಾಟಗಾರರ ವೇದಿಕೆ “ಕನ್ನಡ ಕಟ್ಟೆ”ಗೆ ಇವರದೇ ನೇತೃತ್ವ.

ಸರ್ವಜ್ಞ ವೃತ್ತ ಮಂಗಳೂರು, ರಾಷ್ಟ್ರ ಕವಿ “ಗೋವಿಂದ ಪೈ ವೃತ್ತ”, ಕಯ್ಯಾರ ಕಿಂಜಣ್ಣ ರೈ ವೃತ್ತ, ಅಂಪಣ್ಣ ಕಟ್ಟೆ ಬಜಾಲ್ ಪಡೀಲ್ ರೈಲ್ವೆ ಬ್ರಿಡ್ಜ್ ಎಲ್ಲವೂ ಡಾಕ್ಟರ್ ಕುಲಾಲ್ ರವರ ಸಮಾನ ಮನಸ್ಕ ತಂಡದ ಹೋರಾಟದ ಫಲಶ್ರುತಿ. ಇವೆಲ್ಲವುಗಳ ಸ್ಥಾಪನೆಯ ಹಿಂದಿನ ಹೋರಾಟದ ಶಕ್ತಿ “ಅಣ್ಣಯ್ಯ ಕುಲಾಲ್”. ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರತಿಷ್ಠಿತ IMA ಮಂಗಳೂರು, ಇದರ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಇವರದ್ದು. , IMA ಕರ್ನಾಟಕ ರಾಜ್ಯದ ಸಕ್ರೀಯ ಸದಸ್ಯರಾಗಿ ಕರಾವಳಿ ಮಲೆನಾಡು ಹಾಗು ಮೈಸೂರು, ಬೆಂಗಳೂರು, ಗುಲ್ಬರ್ಗ ವಿಭಾಗಗಳಲ್ಲಿ ಸಂಘಟನೆಯ ಕಿಚ್ಚು ಹಚ್ಚಿದವರು. ಪ್ರಸ್ತುತ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟ, ಬಿಜಾಪುರ, ಹುಬ್ಬಳ್ಳಿ ಧಾರವಾಡ, ಗದಗ, ಹಾವೇರಿ, ಉತ್ತರಕನ್ನಡ ಭಾಗದಲ್ಲಿ ವೈದ್ಯರನ್ನ ಸಂಘಟಿಸಿ ಸಮಾಜಮುಖಿ ಕೆಲಸಕ್ಕೆ ತೊಡಗಿಸಿ ಕೊಳ್ಳಲು ಉಸ್ತುವಾರಿಯನ್ನ ಅಣ್ಣಯ್ಯ ಕುಲಾಲ್ ಅವರಿಗೆ ವಹಿಸಲಾಗಿದೆ.

ಮಂಗಳೂರಲ್ಲಿ ಕನ್ನಡಕಟ್ಟೆ, ನೇತ್ರಾವತಿ ಹೋರಾಟ, ಬೈರಾಡಿ ಕೆರೆ ಹೋರಾಟ, necf, “ಕುಡ್ಲಂಗಿಪ್ಪ ಕುಂದಾಪ್ರ” ಬಳಗದ ಕ್ರಿಯಾ ಶೀಲ ವ್ಯಕ್ತಿ ಹಾಗೂ ಶಕ್ತಿ. ಮಂಗಳೂರಿನ ಕುಂದಗನ್ನಡಿಗರನ್ನು ಒಗ್ಗೂಡಿಸಿ, ಮಂಗಳೂರಲ್ಲಿ ಸೇವೆ, ಸಹಕಾರ, ಸಾಮರಸ್ಯ ಬೆಸೆಯುವ ಕೊಂಡಿಯೇ ನಮ್ಮ ಕುಲಾಲ್ ಡಾಕ್ಟರ್.
ಡಾಕ್ಟರ್ ಸಮುದಾಯದವರ ಬರವಣಿಗೆಗೆ ಪ್ರೋತ್ಸಾಹ ಕೊಡುತ್ತಾ, ಹತ್ತಾರು ಪುಸ್ತಕಗಳ ಪ್ರಕಟಣೆಯ ಹಿಂದಿನ ಕ್ರಿಯಾಶೀಲ ಶಕ್ತಿ ಇವರೇ.ರಾಜ್ಯ ವೈದ್ಯ ಬರಹಗಾರರನ್ನು ಒಗ್ಗೂಡಿಸಿ, ರಾಜ್ಯ ವೈದ್ಯಬರಹಗಾರರ ಬಳಗ ವನ್ನ ಹುಟ್ಟುಹಾಕಿ,ಪ್ರಥಮ ವೈದ್ಯ ಬರಹಗಾರರ ಸಮ್ಮೇಳನವನ್ನ ಮಂಗಳೂರಲ್ಲಿ ಜರುಗಿಸಿದ ಹೆಗ್ಗಳಿಕೆ ಡಾ ಕುಲಾಲ್ ಅವರದ್ದು. ವೈದ್ಯ ಬರಹಗಾರರ ಬಳಗದ ಮೂಲಕ ನೂರಾರು ಪುಸ್ತಕ ಪ್ರಕಟಿಸುತ್ತಿರುವ ಅವರ ಕೆಲಸ ಸ್ತುತ್ಯರ್ಹ. ಇವರ ಸಂಪಾದಕತ್ವ ದಲ್ಲಿ ಹೊರಬಂದ “ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ” ಎಂಬ ಪುಸ್ತಕ ವೈದ್ಯ ಸಾಹಿತ್ಯ ಲೋಕದಲ್ಲಿ ಸಂಚಲನಮೂಡಿಸಿ, ಹಲವು ಬಾರಿ ಮರು ಮುದ್ರಣ ಕಂಡಿದೆ. ಇವರ ಲೇಖನಗಳು ಕರ್ನಾಟಕದ ಉದ್ದಗಲದಕ್ಕೂ ತಲುಪಿದೆ. ರೇಡಿಯೋ, ದೂರದರ್ಶನಗಳಲ್ಲಿ, ನಾಡು ನುಡಿಯ ಬಗ್ಗೆ ಅವರ ಹೆಮ್ಮೆ ತುಂಬಿದ ಸಾತ್ತ್ವಿಕ ಹೋರಾಟವನ್ನು, ಕನ್ನಡಿಗರು ಗುರುತಿಸಿದ್ದಾರೆ.

ಇವರು ಸ್ಥಾಪಿಸಿದ ಕರ್ನಾಟಕದಲ್ಲಿಯ ಪ್ರಥಮ ಸರ್ವಜ್ಞ ಸೆಕೆಂಡ್ ಅಭಿಪ್ರಾಯ ಸೆಂಟರ್, ರೋಗಿಗಳಿಗೆ ತುಂಬಾ ಉಪಕಾರವಾಗುತ್ತಿದೆ. ತುಳು, ಕನ್ನಡ, ಕೊಂಕಣಿ , ಬ್ಯಾರಿ ಕುಂದಗನ್ನಡಿಗರಿಗೆ, ಅರೆಗನ್ನಡ, ಮಂಗಳೂರಲ್ಲಿ ಸರ್ವ ರೀತಿಯಲ್ಲಿ ಸಹಕಾರಗಳನ್ನು ಕೊಡುತ್ತಾ ಬಂದಿದ್ದಾರೆ.
ಅವರೇ ಹೇಳುವಂತೆ, ಅವರ ತಂದೆಯವರು, ಸಾರಾಯಿ ಅಂಗಡಿಯಲ್ಲಿ ನಡೆಸುತ್ತಿದ್ದ, ಚಕ್ಕುಲಿ ಅಂಗಡಿಯಲ್ಲಿ ಚಕ್ಕುಲಿ ಮಾರಿ, ಕಡು ಬಡತನದಲ್ಲಿ ಬೆಳೆದು , ಆರ್ಥಿಕ ಸಮಸ್ಯೆಗಳಿಂದ ಹಲವಾರು ಬಾರಿ ಶಿಕ್ಷಣ ವನ್ನ ನಿಲ್ಲಿಸುವ ಪರಿಸ್ಥಿತಿ ಬಂದಾಗ ದೃತಿ ಗೆಡದೆ, ಡಾಕ್ಟರ್ ಆದ ಹುಡುಗ, ಇಂದು ತನ್ನ ತನು ಮನಗಳನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡಿದ್ದಾರೆ.
ಅವರ ನೇತ್ರಾವತಿ ಉಳಿಸಿ ಹೋರಾಟ, ಪರಿಸರ ಹೋರಾಟ, ಕನ್ನಡ ಪ್ರೀತಿ, ಬರಹ ಗಾರ ವೇದಿಕೆ, ಬರವಣಿಗೆ, ಸಮಾಜಮುಖಿ ಚಿಂತನೆ, ಅವರನ್ನು ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಗೊಳಿಸಿದೆ.
ಇವರು, ಪ್ರತಿಷ್ಠಿತ “ದೇವರಾಜು ಅರಸು” ಪ್ರಶಸ್ತಿ ಪಡೆದ ಕರಾವಳಿಯ ಏಕಮೇವ ವೈದ್ಯ.
2025ರ ಮೇ 4 ರಂದು, ಕೋಟಾದ “ಕಾರಂತ ಥೀಮ್ ಪಾರ್ಕ್” ನಲ್ಲಿ ನಡೆಯುವ, “ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ” ದ ಅಧ್ಯಕ್ಷ ಪಟ್ಟ, ನಮ್ಮೂರ “ಕುಂದಾಪ್ರ ಕನ್ನಡ”ದ ನೈಜ ಪ್ರತಿಭೆ, ಹೋರಾಟಗಾರರಾದ ಡಾಕ್ಟರ್ ಅಣ್ಣಯ್ಯ ಕುಲಾಲ್ ರವರಿಗೆ ಸಿಕ್ಕಿರುವುದು ಹೆಮ್ಮೆ. ಈ ಬಾರಿ ವೈದ್ಯಕೀಯ ಹಾಗು ಸಮಾಜ ಸೇವೆಗೆ ಪ್ರತಿಷ್ಠಿತ ಡಾ ಬಿ ಸಿ ರಾಯ್ ರಾಷ್ಟ್ರೀಯ ಪುರಸ್ಕಾರ ಪಡೆದ ಕರಾವಳಿಯ ಅತಿ ಕಿರಿಯ ವೈದ್ಯ. ಜೊತೆಗೆ ಜಿಲ್ಲಾ ರಾಜ್ಯ ಮಟ್ಟದ ಡಾ ಬಿ ಸಿ ರಾಯ್ ಪುರಸ್ಕಾರ, ಜಿಲ್ಲಾ ರಾಜ್ಯೋತ್ಸವ,ಸಹಿತ ವೈದ್ಯಕೀಯ ಸೇವೆ, ಶಿಕ್ಷಣ, ಸಂಘಟನೆಗೆ ನೂರಾರು ಗೌರವ ಪುರಸ್ಕಾರ ಪಡೆದ ಸಮಾಜ ವಿಜ್ಞಾನಿ.ಮದ್ದಲ್ಲ ಕಷಾಯ, ಮುಗುಳ್ನಕ್ಕು ಮುಂದೆ ಸಾಗು, ಸದ್ದಿಲ್ಲದೇ ಸುದ್ದಿಯಾಗು ಎಂಬ ಬರಹಗಳಿಂದ ಸಾಹಿತ್ಯ ವಲಯದಲ್ಲಿ ಚಿರಪರಿಚಿತರಾಗಿರುವ ಡಾ ಕುಲಾಲ್ ಸಮಾಜಕ್ಕೆ ಒಂದು ಆಸ್ತಿ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *