
ಗಂಗಾವತಿಯಲ್ಲಿ ಶನಿವಾರ ಜರಗಿದ 91ನೇ ಐಎಂಎ ರಾಜ್ಯ ಸಮ್ಮೇಳನದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಡಾ.ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರು ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.



ರಾಷ್ಟ್ರ ಅಧ್ಯಕ್ಷರಾಗಿ ಡಾ. ಭಾನುಶಾಲಿ, ರಾಷ್ಟ್ರ ಉಪಾಧ್ಯಕ್ಷರಾಗಿ ಡಾ.ಬಿದ್ದಾಳ್, ರಾಜ್ಯ ನಿರ್ಗಮನ ಹಾಗೂ ಆಗಮನ ಅಧ್ಯಕ್ಷರುಗಳಾದ ಡಾ.ಚಿನಿವಾಳ, ಡಾ.ವೀರಭದ್ರಯ್ಯ ಹಾಗೂ ಇನ್ನಿತರ ಹಿರಿಯ ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ಉಪಸ್ಥಿತರಿದ್ದು ಪ್ರತಿಜ್ಞಾ ವಿಧಿ ಭೋದಿಸಿದರು.

ಕರಾವಳಿ ಮಲೆನಾಡು ಹಾಗೂ ಮೈಸೂರು ವಿಭಾಗದಲ್ಲಿ ಪರಿಣಾಮಕಾರಿ ಸಂಘಟನಾ ಸೇವೆ ಸಲ್ಲಿಸಿದ ಡಾ.ಕುಲಾಲ್ ಅವರಿಗೆ ಬೆಳಗಾವಿ ವಿಭಾಗದ ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ವೈದ್ಯರನ್ನ ಸಂಘಟಿಸಿ ಸಂಘಟನೆಯನ್ನ ಮತ್ತಷ್ಟು ಬಲಪಡಿಸುವ ಜವಾಬ್ದಾರಿ ಹಾಗೂ ಉಸ್ತುವಾರಿಗಳನ್ನ ನೀಡಲಾಗಿದೆ, ಜೊತೆಗೆ ಅವರ ಪ್ರಧಾನ ಸಂಪಾದಕೀಯದಲ್ಲಿ ಹೊರತಂದ ಸಿರಿಂಜ್ ಹಿಡಿಯುವ ಕೈ ಪೆನ್ನು ಹಿಡಿದಾಗ ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು.



