
Read Time:1 Minute, 18 Second
ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಮತ್ತು ಗಾಂಧೀವಾದಿ, ಬಡವರು ಮತ್ತು ದೀನದಲಿತರ ಪರವಾಗಿ ಚಿಂತನೆಗಳನ್ನು ಹೊಂದಿದ್ದು ಸಮಾಜದಲ್ಲಿ ಅವರ ಅಭಿವೃದ್ಧಿಗಾಗಿ ಕೆಲಸ ಮಾಡಿದ ಕುಲಾಲ ಸಮಾಜದ ಗರಿಮೆ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರನ್ನು ಮಂಗಳೂರಿನ ರಸ್ತೆಗೆ ನಾಮಕರಣ ಮಾಡಲಾಗಿದೆ.


ಮಂಗಳೂರಿನ ಪುರಭವನ ಕಡೆಯಿಂದ ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆಗೆ ಡಾ. ಅಮ್ಮೆಂಬಳ ಬಾಳಪ್ಪ ಅವರ ನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ.
ಈ ರಸ್ತೆಗೆ ಬಾಳಪ್ಪ ಅವರ ನಾಮಕರಣ ಮಾಡಲು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ವತಿಯಿಂದ ಮಂಗಳೂರಿನ ಶಾಸಕರಾದ ಮಾನ್ಯ ವೇದವಾಸ್ ಕಾಮತ್ ಹಾಗೂ ಕಾರ್ಪೊರೇಟರ್ ದಿವಾಕರ್ ರವರ ಬಳಿ ವಿನಂತಿಸಲಾಗಿತ್ತು. ಆ ಪ್ರಕಾರ ವಿಧಾನಸಭಾಧ್ಯಕ್ಷರಾದ ಯು ಟಿ ಖಾದರ್ ಅವರ ಶಿಫಾರಸಿನಂತೆ ಸರ್ಕಾರ ವು ಈ ರಸ್ತೆಯನ್ನು ಸ್ವಾತಂತ್ರ್ಯ ಹೋರಾಟಗಾರ ಡಾ. ಅಮ್ಮೆಂಬಳ ಬಾಲಪ್ಪ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಮಾಡಿದೆ.

