
Read Time:1 Minute, 10 Second
ಧರ್ಮಸ್ಥಳ: ಅನುದಾನಿತ ಶಾಲೆಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವ ಶಿಕ್ಷಕಿಯ ಶವ ಬಾವಿಯಲ್ಲಿ ಪತ್ತೆಯಾದ ಘಟನೆ ಅ.23ರಂದು ಬೆಳಕಿಗೆ ಬಂದಿದೆ.ಅರಸಿನಮಕ್ಕಿ ಗ್ರಾಮದ ಬೂಡುಮುಗೇರು ನಿವಾಸಿ, ಪ್ರಸ್ತುತ ಅರಸಿನಮಕ್ಕಿ ಗೋಪಾಲಕೃಷ್ಣ ಅನುದಾನಿತ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕಿ ತೇಜಸ್ವಿನಿ (23) ಮೃತಪಟ್ಟವರು.


ಕಳೆದ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಲಾಗುತ್ತಿದೆ. ಶವ ಬಾವಿಯಲ್ಲಿ ಪತ್ತೆಯಾದ ಕಾರಣ ಕಾಲು ಜಾರಿ ಬಾವಿಗೆ ಬಿದ್ದರೋ ಅಥವಾ ಆತ್ಮಹತ್ಯೆ ಮಾಡಿಕೊಂಡರೋ ಎಂಬ ಶಂಕೆ ವ್ಯಕ್ತವಾಗಿದೆ.ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆ ಮುಂದುವರಿದಿದೆ. ಮೃತ ತೇಜಸ್ವಿನಿ ಅವರು ತಂದೆ, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

