
Read Time:45 Second
ಧರ್ಮಸ್ಥಳದಲ್ಲಿ ಸರಣಿ ಶವ ಹೂತಿರುವ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಸ್‌ಐಟಿ ತಂಡವು ಮಹೇಶ್ ಶೆಟ್ಟಿ ತಿಮರೋಡಿ ಸಹಿತ ನಾಲ್ಕು ಮಂದಿಗೆ ನೋಟೀಸ್ ನೀಡಿದೆ.


ಅ. 27ರಂದು ವಿಚಾರಣೆಗೆ ಹಾಜರಾಗುವಂತೆ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ಸೌಜನ್ಯ ಮಾವ ವಿಠಲ ಗೌಡ ಎಂಬವರಿಗೆ ನೋಟೀಸ್ ಜಾರಿ ಮಾಡಿದೆ. ಈ ನಡುವೆ ಅ. 25ರಂದು ಎಸ್‌ಐಟಿ ಮುಖ್ಯಸ್ಥಪ್ರಣಬ್ ಮೊಹಾಂತಿ ಅವರು ಬೆಳ್ತಂಗಡಿ ಕಚೇರಿಗೆ ಆಗಮಿಸಿ, ತನಿಖೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.

