
Read Time:41 Second
ಉಡುಪಿ: ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಿಕ್ಷಾ ಚಾಲಕ ಕಟಪಾಡಿ ಪಳ್ಳಿಗುಡ್ಡೆಯ ದೀಪಕ್ ಆರ್. (34) ಎಂಬವರು ಜೀವನದಲ್ಲಿ ಜಿಗುಪ್ಪೆಗೊಂಡು ರೂಂನ ಟಾರಸಿಯ ಕಬ್ಬಿಣದ ಹುಕ್ಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಇವರು ಉಡುಪಿಯ ಕಲ್ಸಂಕ ಆಟೋ ನಿಲ್ದಾಣದಲ್ಲಿ ಚಾಲಕರಾಗಿ ದುಡಿಯುತ್ತಿದ್ದರು. ಅವಿವಾಹಿತರಾಗಿದ್ದ ದೀಪಕ್ ಸರಳ ಸ್ವಭಾವ ಹಾಗೂ ಸ್ನೇಹ ಜೀವಿಯಾಗಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.