
Read Time:49 Second
ಹಳೇ ವಾಹನಗಳಿಗೆ ಹೈ ಸೆಕ್ಯೂರಿಟಿ ನೋಂದಣಿ ಫಲಕ ಅಳವಡಿಕೆ ಕುರಿತ ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆಗೆ ಬರಲಿದ್ದು ಹೈಕೋರ್ಟ್ ನೀಡುವ ನಿರ್ದೇಶನ ಧರಿಸಿ HSRP ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಿಸಬೇಕೆ, ಬೇಡವೇ ಎಂಬ ಬಗ್ಗೆ ಸಾರಿಗೆ ಇಲಾಖೆ ನಿರ್ಧರಿಸಲಿದೆ.


2019ರ ಏಪ್ರಿಲ್ ಮೊದಲು ನೋಂದಣಿಯಾದ ವಾಹನಗಳು HSRP ಅಳವಡಿಕೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. ಈವರೆಗೆ 35-40ಲಕ್ಷ ವಾಹನ ಮಾತ್ರ HSRP ಅಳವಡಿಸಿಕೊಂಡಿವೆ. ಹೈಕೋರ್ಟ್ ನೀಡುವ ನಿರ್ದೇಶನ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.