
Read Time:1 Minute, 13 Second
ಪುತ್ತೂರು : : ಕಾರ್ಯನಿರ್ವಹಿಸುತ್ತಿದ್ದ ಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು, ಆತನ ಮನೆಯ ಹತ್ತಿರದ ರಸ್ತೆಯ ಬದಿಯಲ್ಲಿ ಇಟ್ಟುಹೋದ ಅಮಾನುಷ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ.


ಮೃತ ವ್ಯಕ್ತಿಯು ಸಾಲ್ಮರ ತಾರಿಗುಡ್ಡೆಯ ನಿವಾಸಿಯಾದ ಶಿವಪ್ಪ (69) ಎಂದು ತಿಳಿದುಬಂದಿದೆ, ಇವರು ಸಾಲ್ಮರ ಕೆರೆಮೂಲೆಯ ನಿವಾಸಿಯಾದ ವುಡ್ ಸಂಸ್ಥೆಯೊಂದರ ಮಾಲೀಕನಾದ ಹೆನ್ರಿ ತಾವ್ರೋ ಎಂಬುವರ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು.
ಶಿವಪ್ಪರನ್ನು ಶನಿವಾರ ಬೆಳಗ್ಗೆ ಸ್ಟಾನಿ ಎಂಬುವವರು ಕರೆದುಕೊಂಡು ಹೋಗಿದ್ದರು. ಆದರೆ ಸಂಜೆಯ ವೇಳೆ ಶಿವಪ್ಪ ಅವರ ಮೃತದೇಹವನ್ನು ಪಿಕಪ್ ವಾಹನದಲ್ಲಿ ತಂದು ಮನೆ ಮುಂಭಾಗದ ರಸ್ತೆಯಲ್ಲಿ ಬಿಟ್ಟು ಹೋಗಿದ್ದಾರೆಂದು ಮನೆ ಮಂದಿ ಮತ್ತು ಸ್ಥಳೀಯರು ಆರೋಪಿಸಿದ್ದಾರೆ.


