
ಮಂಗಳೂರು: ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ವತಿಯಿಂದ ಪ್ರವರ್ತಿಸುವ ಓಲ್ಡ್ ಏಜ್ ಹೆಲ್ತ್ ಕೇರ್ ಹೋಂ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಮೆನ್ಶ್ಯಾ ಕಾಯಿಲೆ ಯಿಂದ ಬಳಲುತ್ತಿದ್ದ ಕೇರಳ ಮೂಲದ ವಸಂತಿ ನಾಯರ್ (ವಯಸ್ಸು.88 )ಇಂದು ಬೆಳಿಗ್ಗೆ ತೀವ್ರ ಅಸೌಖ್ಯ ಗೊಂಡು . ಆಸ್ಪತ್ರೆಗೆ ದಾಖಲಾದರು ತಕ್ಷಣದಲ್ಲಿ ಅವರ ಮಗ ಮುಂಬೈಯಿಂದ ಬರಲು ಅನಾನುಕೂಲವಾದ ಕಾರಣ. ದಾಸ್ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಲಯನ್ ಅನಿಲ್ ದಾಸ್ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಿದರು.



ಗೆಳೆಯರಾದ ಫೈಝಲ್ ಕೆನಡಾ ಹಾಗೂ ಅರುಣ್ ಕಟೀಲು ರವರಿಗೆ ವಿಷಯ ತಿಳಿಸಿ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು ಚಿಕಿತ್ಸೆಗೆ ಸ್ಪಂದಿಸದೆ ಇಂದು ನಿಧನರಾದರು. ಅವರ ಮಗ ದೂರದ ಮುಂಬೈಯಲ್ಲಿ ಇರುವುದರಿಂದ ಇಂದು ಮಂಗಳೂರಿಗೆ ಆಗಮಿಸಿದಾಗ ಆಸ್ಪತ್ರೆ ಯಿಂದ ಡಿಸ್ಚಾರ್ಜ್ ಮಾಡಿ ಅಂತ್ಯಕ್ರಿಯೆಗೆ ಬೇಕಾದ ಸಕಲ ವ್ಯವಸ್ಥೆಯನ್ನು ಮಾಡಿ ಸಹಕರಿಸಿದರು.
ಸುಮಾರು ಎಂಟು ತಿಂಗಳಿಂದ ನಮ್ಮ ಓಲ್ಡ್ ಏಜ್ ಸೆಂಟರ್ ನಲ್ಲಿ ನಮ್ಮ ಆರೈಕೆಯಿಂದ ಚೇತರಿಸಿಕೊಂಡು ನಮ್ಮೆಲ್ಲರೊಂದಿಗೆ ಮರೆಯದ ಅನುಭವಗಳನ್ನು ಬಿಟ್ಟು ಹೋಗಿರುತ್ತಾರೆ. ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲಿ ಎಂದು. ಹಾರೈಸುವ ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಓಲ್ಡ್ ಏಜ್ ಸೆಂಟರ್ ಮಂಗಳೂರು ಸರ್ವ ಸಿಬ್ಬಂದಿ ವರ್ಗ ಹಾಗೆ ನಮ್ಮೊಂದಿಗೆ ಸಹಕರಿಸಿದ ಫೈಝಲ್ ಕೆನಡಾ ಹಾಗೂ ಅರುಣ್ ಕಟೀಲುರವರಿಗೂ ಧನ್ಯವಾದಗಳು.

