
Read Time:47 Second
ಪುತ್ತೂರು: ಪುತ್ತೂರಿನ ಅರಿಯಡ್ಕ ಗ್ರಾಮದ ಬೇಂಗತ್ತಡ್ಕದಲ್ಲಿ ವಿದ್ಯುತ್ ಶಾಕ್‌ನಿಂದ ಮಹಿಳೆ ಮೃತಪಟ್ಟ ಘಟನೆ ಎ. 30ರಂದು ಸಂಭವಿಸಿದೆ.


ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ (59) ಸಾವನ್ನಪ್ಪಿದವರು. ಏಪ್ರಿಲ್ 30ರಂದು ಮನೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ. ಮಧ್ಯಾಹ್ನ ವೇಳೆ ಮನೆಯ ಟೇರಸ್ ಮೇಲೆ ತೆರಳಿದ್ದ ಸಂದರ್ಭದಲ್ಲಿ ಪಂಪ್‌ಗೆ ಅಳವಡಿಸಿದ್ದ ವಯರ್ ಮೇಲೆ ಕಾಲಿಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶಿಸಿದ್ದು ಘಟನೆಗೆ ಕಾರಣ ಎನ್ನಲಾಗಿದೆ. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.