CSK: ಧೋನಿ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ನೀಡಿದ ಸಿಎಸ್‌ಕೆ ಬ್ಯಾಟಿಂಗ್ ಕೋಚ್‌

0 0
Read Time:4 Minute, 3 Second

ಟೀಮ್ ಇಂಡಿಯಾ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದೇ ಕೊನೆಯ ಐಪಿಎಲ್ ಆಗಬಹುದು ಎಂದು ಲೆಕ್ಕಾಚಾರ ನಡೆದಿದೆ. ಈ ಬಗ್ಗೆ ಧೋನಿ ಯಾವುದೇ ಸ್ಪಷ್ಟನೇ ನೀಡಿಲ್ಲ. ಆದರೆ, ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್‌ ಮೈಕಲ್ ಹಸ್ಸಿ ನೀಡಿರುವ ಹೇಳಿಕೆ ಸಂಚಲ ಮೂಡಿಸಿದೆ.

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಧೋನಿ ಆಡುತ್ತಿದ್ದಾರೆ. ಅವರ ಕೀಪಿಂಗ್ ಅವರ ವಯಸ್ಸಿನ ಪರಿಣಾಮ ಬೀರಿಲ್ಲ ಎಂಬುದು ಸ್ಪಷ್ಟವಾಗಿ ತೋರುತ್ತದೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ವಯಸ್ಸು ಪರಿಣಾಮ ಬೀರಿರುವುದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ ಎಂಎಸ್‌ಡಿ ಈ ಬಾರಿಯ ಐಪಿಎಲ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದಾರೆ. ಇದರಿಂದ ಅವರ ಫಿಟ್ನೆಸ್‌ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.

ಮೈಕಲ್‌ ಹಸ್ಸಿ ಹೇಳಿದ್ದೇನು?

ಧೋನಿ ವಯಸ್ಸು 42 ವರ್ಷ. ಅವರ ವಯಸ್ಸನ್ನು ಪರಿಗಣಿಸಿ ಅವರು ಶೀಘ್ರದಲ್ಲೇ ಐಪಿಎಲ್‌ಗೆ ವಿದಾಯ ಹೇಳಬಹುದು ಎಂದು ಹೇಳಲಾಗುತ್ತಿದೆ. ನಿವೃತ್ತಿಯ ಈ ಊಹಾಪೋಹಗಳ ನಡುವೆಯೇ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹೇಳಿಕೆ ಭಾರೀ ಸುದ್ದಿ ಮಾಡುತ್ತಿದೆ. ಇಎಸ್‌ಪಿಎನ್‌ ಕ್ರಿಕ್‌ಇನ್‌ಫೋ ಶೋನಲ್ಲಿ ಮಾತನಾಡಿರುವ ಮೈಕಲ್ ಹಸ್ಸಿ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಈ ವೇಳೆ ಇದು ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಿರಬಹುದಾ ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಹಸ್ಸಿ -ಈ ಬಗ್ಗೆ ನನಗೆ ಬಹಳ ಕಡಿಮೆ ತಿಳಿದಿದೆ. ಆದರೆ ಮುಂದಿನ ಕೆಲವು ವರ್ಷದವರೆಗೆ ಅವರು CSK ಯಲ್ಲಿ ಉಳಿಯುತ್ತಾರೆ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.

ಧೋನಿ ಅಭ್ಯಾಸದ ವೇಳೆ ಚುರುಕಿನಿಂದ ಇರುತ್ತಾರೆ. ಅಲ್ಲದೆ ಪಂದ್ಯಕ್ಕಾಗಿ ಚೆನ್ನಾಗಿ ತಯಾರಿ ಸಹ ಮಾಡುತ್ತಾರೆ. ಅಭ್ಯಾಸದ ವೇಳೆ ಉತ್ತಮ ಲಯದಲ್ಲಿರುವತ್ತ ಗಮನ ಹರಿಸುತ್ತಾರೆ ಎಂದು ಕೋಚ್ ತಿಳಿಸಿದ್ದಾರೆ.

ಧೋನಿ ಬಗ್ಗೆ ಏನನ್ನು ಹೇಳಲು ಆಗದು

ಧೋನಿ ತಮ್ಮ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ. ಅವರು ಅದನ್ನು ಸಿಕ್ರೇಟ್ ಆಗಿ ಇಡುತ್ತಾರೆ. ಆದ್ದರಿಂದ, ಅದರ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಮುಂದಿನ ಕೆಲವು ವರ್ಷಗಳವರೆಗೆ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಬಹುದು ಎಂದು ಮಾತ್ರ ಹೇಳಬಹುದು. ಧೋನಿ ತಮ್ಮ ನಿರ್ಧಾರಗಳ ಬಗ್ಗೆ ಸ್ವಲ್ಪ ಗೊಂದಲ ಸೃಷ್ಟಿಸಲು ಇಷ್ಟಪಡುತ್ತಾರೆ. ಹೀಗಾಗಿ ಶೀಘ್ರದಲ್ಲಿ ನಿರ್ಧಾರವನ್ನು ನಿರೀಕ್ಷಿಸುವಂತಿಲ್ಲ ಎಂದು ಸಿಎಸ್‌ಕೆ ತಂಡದ ಬ್ಯಾಟಿಂಗ್ ಕೋಚ್ ಮೈಕಲ್ ಹಸ್ಸಿ ಹೇಳಿದ್ದಾರೆ.

ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವುದು ಏಕೆ?

ಎಂಎಸ್‌ಡಿ ಅವರಿಗೆ ಗಾಯ ಬಹುವಾಗಿ ಕಾಡುತ್ತಿದೆ ಎಂಬುದಕ್ಕೆ ಕೋಚ್‌ ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ಅವರಿಗೆ ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಸೂಚಿಸಲಾಗುತ್ತಿದೆ. ಹೀಗಾದರೂ ಅವರು ಬಿಗ್ ಹಿಟ್‌ ಬಾರಿಸುವುದನ್ನು ಬಿಟ್ಟಿಲ್ಲ ಎಂದು ಹೇಳಿದ್ದಾರೆ.ಮಾಹಿ ಪಂದ್ಯಾವಳಿಯ ಮೊದಲು ನಾಯಕರ ಸಭೆಗೆ ಹಾಜರಾಗುವುದಿಲ್ಲ. ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ರುತುರಾಜ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದರು. ಅವರು ಕಳೆದ ಕೆಲವು ವರ್ಷಗಳಿಂದ ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಹಸ್ಸಿ ತಿಳಿಸಿದ್ದಾರೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *