ವೇಣೂರು: ಶ್ರೀಗುರು ಚೈತನ್ಯ ಸೇವಾಶ್ರಮ ದಲ್ಲಿ ಅಭಿನಂದನಾ ಕಾರ್ಯಕ್ರಮ

0 0
Read Time:2 Minute, 55 Second

ವೇಣೂರು: ಯಾವ ಕೆಲಸವೇ ಸರಿ ಅದರಲ್ಲಿ ಶ್ರದ್ದೆ, ಭಕ್ತಿ, ನಿಷ್ಠೆ ಇದ್ದಲ್ಲಿ ವ್ಯಕ್ತಿ ಗುರಿ ಮುಟ್ಟಿ ಸಮಾಜಕ್ಕೆ ಬೆಳಕಾಗಲು ಸಾಧ್ಯ ಎಂದು ಬೆಳ್ತಂಗಡಿಯ ಗುಂಡೂರಿ ಗ್ರಾಮದ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ತಾರೀಕು 15/12/2024 ರಂದು “ಅಭಿನಂದನಾ ಕಾರ್ಯಕ್ರಮ”ದಲ್ಲಿ ಮೂಡಬಿದರೆಯ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಯ ಚೇರ್ಮನ್ ಶ್ರೀ ಯುವರಾಜ್ ಜೈನ್ ಸಂದೇಶ ನೀಡಿದರು.

ಹಾಗೆಯೇ ಈ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀಮತಿ ರಶ್ಮಿತಾ ಯುವರಾಜ್ ಜೈನ್ ರವರು ನಮ್ಮ ಪರಿಸರದಲ್ಲಿ ಅದೆಷ್ಟೋ ನಮಗೆ ಕಲಿಸಲಾಗದಂತಹ ಪಾಠಗಳು ಇವೆ. ಅದನ್ನು ನಾವು ಹುಡುಕಬೇಕಷ್ಟೇ ಉದಾಹರಣೆಗೆ ಈ ಶ್ರೀ ಗುರು ಚೈತನ್ಯ ಸೇವಾಶ್ರಮ ಇಲ್ಲಿ ವಾಸಿಸುವ ಆಶ್ರಮವಾಸಿಗಳ ಕಳೆದ ತೆರೆಯ ಮೆರೆಯ ಜೀವನ ಕಥೆಗಳು ಯುವ ಪೀಳಿಗೆಗೆ ಜೀವನ ಪಾಠವಿದು.

ಇಂತಹ ಮನುಕುಲದ ಸೇವೆಮಾಡಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪ್ರಯತ್ನ ಪಡುವ ಸೇವಾಶ್ರಮದ ಮುಖ್ಯಸ್ಥ ಹೊನ್ನಯ್ಯ ರವರು ಸಮಾಜಸೇವಕರಲ್ಲಿ ಉದಾಹರಣೆ ಆಗಿದ್ದಾರೆ ಎಂದು ಅಭಿನಂದನಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಹಾಗು ನೆರೆದ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.

ಮೂಡುಬಿದಿರೆಯ ಈ ಎಕ್ಸಲೆಂಟ್ ಪಿ.ಯು.ಕಾಲೇಜಿನ ಆರ್ಮಿ ವಿಂಗ್ N.C.C.ನ ಆಪೀಸರ್ ಲೆಪ್ಟೆನೆಂಟ್ ಮಹೇಂದ್ರ ಜೈನ್ ಇವರ ಮಾರ್ಗದರ್ಶನದಲ್ಲಿ ತನ್ನ N.C.C.ಕ್ರೆಡೆಸ್ಟ್ ನವರಿಂದ ಆಶ್ರಮವಾಸಿಗಳಿಗೆ ಮನೋರಂಜನೆಗಾಗಿ ಕಾರ್ಯಕ್ರಮ ವನ್ನು ಸೇವಾಶ್ರಮ ಆಯೋಜಿಸಿದರು. ಮತ್ತು ಈ N.C.C ಕ್ರೆಡೆಸ್ಟ್ ರವರಿಂದ ಸೇವಾಶ್ರಮಕ್ಕೆ ಅಗತ್ಯ ಸಾಮಾಗ್ರಿಗಳ ಜತೆ ತಿಂಗಳಿಗೆ ಆಗುವಷ್ಟು ಜೀನಸಿ ಸಾಮಾಗ್ರಿಗಳ ಕೊಡುಗೆ ನೀಡಿದರು. ಕಾರ್ಯಕ್ರಮವನ್ನು ಸೇವಾಶ್ರಮದ ಹೊನ್ನಯ್ಯರವರು ನಿರೂಪಿಸಿದರು.

ಹಾಗೆ ಈ ಸಂದರ್ಭದಲ್ಲಿ ಈ ಎಕ್ಸಲೆಂಟ್ ಶಿಕ್ಷಣ ಸಮೂಹ ಸಂಸ್ಥೆಗೆ 2024 ರ ಸಾಲಿನ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಡಳಿತ‌ ನೀಡಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರದ ನೆನಪನ್ನು ಮರುಕಳಿಸಿ ಅಭಿನಂದನೆ ಸಲ್ಲಿಸಿದರು. ಕುಮಾರಿ ಕ್ಷಿತಿಕ್ಷಾ ಕಾರ್ಯಕ್ರಮದಲ್ಲಿ ಸ್ವಾಗತಿಸಿ ಧನ್ಯವಾದ ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸೌಜನ್ಯ ಸಜ್ಜನ್ ಜೈನ್, ಶ್ರೀಮತಿ ರೇಣುಕಾ, ಶ್ರೀ ರಂಜಿತ್ ನಡ್ತಿಕಲ್,ಮತ್ತಿತ್ತರು ಉಪಸ್ಥಿತರಿದ್ದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *