
ಬೆಂಗಳೂರು: ಸಿವಿಲ್ ವ್ಯಾಜ್ಯಗಳಲ್ಲಿ ಮೊದಲಿಂದಲೂ ಪೊಲೀಸರು ಸುಖಾ ಸುಮ್ನೆ ತಲೆ ಹಾಕುತ್ತಿದ್ದಾರೆ ಎನ್ನುವ ಆರೋಪ ಇದ್ದೇ, ತಮ್ಮ ವ್ಯಾಪ್ತಿಯನ್ನು ಹಲವು ಸಾರಿ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ತಲೆ ಹಾಕಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇದೆ.


ಇದಲ್ಲದೇ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್‌ಗಳು ಸಿವಿಲ್ ವ್ಯಾಜ್ಯಗಳಲ್ಲಿ ಪೋಲಿಸರ ಕೆಲಸ ಮತ್ತು ಕಾರ್ಯ ವ್ಯಾಪ್ತಿಗಳ ಬಗ್ಗೆ ತಿಳಿಸುತ್ತಲೇ ಬಂದಿದ್ದು, ಯಾವುದೇ ಕಾರಣಕ್ಕೂ ಕೂಡ ಸಿವಿಲ್ ವ್ಯಾಜ್ಯದಲ್ಲಿ ಪೊಲೀಸರು ತಲೆ ಹಾಕುವ ಹಾಗೇ ಇಲ್ಲ ಅಂತ ಖಡಕ್ ಆಗಿ ಹೇಳಿದೆ.
ಆದರೆ ಸುಪ್ರಿಂಕೋರ್ಟ್ ಮತ್ತು ಹೈಕೋರ್ಟ್ ಏನು ಹೇಳಿದರು ಕೂಡ ಪೊಲೀಸರು ಸಿವಿಲ್ ವ್ಯಾಜ್ಯಗಳಲ್ಲಿ ತಲೆ ಹಾಕುತ್ತಾರೆ ಎನ್ನಲಾಗುತ್ತಿದೆ. ಇದಲ್ಲದೇ ನ್ಯಾಯಾಲಗಳು ಕೂಡ ಅಂತಹ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡಿದೆ. ಕೂಡ ಈಗ ಮತ್ತೆ ಪೊಲೀಸ್ ಮಹಾ ನಿರ್ದೇಶಕ ಸಲೀಂ ಅವರು ತಮ್ಮ ಇಲಾಖೆ ಅಧೀನದ ಪೊಲೀಸರಿಗೆ ತಿಳಿ ಹೇಳುವ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು ಅದರ ವಿವರ ಈ ಕೆಳಕಂಡತಿದೆ.


CRM-3/105/2018, Dated 14.11.2018. 2) ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ರಿಟ್ ಅರ್ಜಿ ಸಂ. 52846/2016, ದಿನಾಂಕ 16.06.2023)ರಲ್ಲಿ ನೀಡಿದ ತೀರ್ಪು, 3) ಲಲಿತಾ ಕುಮಾರಿ ವಿರುದ್ಧ ಉತ್ತರ ಪ್ರದೇಶ ರಾಜ್ಯ ಮತ್ತು ಇತರರ ಪ್ರಕರಣದಲ್ಲಿ ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ದಿನಾಂಕ: 12.11.2013. ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಕಛೇರಿಯ ಉಲ್ಲೇಖ-1ರ ಸುತ್ತೋಲೆ ಅನುಸಾರ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿವಾದಗಳು ಮತ್ತು ವಿಷಯಗಳನ್ನು ನಿರ್ವಹಿಸುವ ಕುರಿತಂತೆ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ಒದಗಿಸಿ ಸುತ್ತೊಲೆಯನ್ನು ಈಗಾಗಲೇ ಹೊರಡಿಸಲಾಗಿತ್ತು.
ಆದರೆ, ಕರ್ನಾಟಕ ಗೌರವಾನ್ವಿತ ಉಚ್ಛ ನ್ಯಾಯಾಯಲಯವು, ಎ.ಎನ್. ವಸಂತ ಮಾಧವ ರಾವ್ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರ (ಡಬ್ಲ್ಯೂಪಿ ಸಂಖ್ಯೆ: 52846/2016, ದಿನಾಂಕ: 16/06/2023) ಪ್ರಕರಣದಲ್ಲಿ ಕಂಡಿಕೆ ಸಂಖ್ಯೆ: 19 ರಲ್ಲಿ ಈ ಕೆಳಗಿನಂತೆ ಅಭಿಪ್ರಾಯ ಮತ್ತು ನಿರ್ದೇಶನವನ್ನು ನೀಡಿರುತ್ತದೆ.

“19. Therefore, it is appropriate to remind the Police Department/Officers that, when any dispute arise between two parties with regard to the Civil Rights, i.e., either for declaration of title or possession over the properties or any other rights, which is of a civil nature, the police have no right to ask for documents from the parties in the name of adjudication and the police have no power to decide the civil rights of the parties and it is only the jurisdictional Civil Court, who is the Competent Adjudicating Authority to decide the same and not the police. It is the duty of the Department of Home Affairs to ensure that the police officers shall not interfere with the civil disputes and the Department of Home Affairs shall circulate the instruction/circular in this regard.”
ಈ ಹಿನ್ನೆಲೆಯಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನದನ್ವಯ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವ ಕುರಿತಂತೆ ಮಾರ್ಗದರ್ಶಿ ಸೂಚಿಗಳನ್ನು ಈ ಸುತ್ತೋಲೆ ಅಡಿಯಲ್ಲಿ ನೀಡಲಾಗಿದ್ದು, ಕಾರಣ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳು ಈ ಸುತ್ತೋಲೆಯನ್ವಯ ಹಾಗೂ ಮಾರ್ಗಸೂಚಿ ಅನುಸಾರ ಸಿವಿಲ್ ಸ್ವರೂಪದ ವಿವಾದಗಳನ್ನು ನಿರ್ವಹಿಸುವುದು.
ಮೊದಲು ಪೊಲೀಸ್ ಅಧಿಕಾರಿಗಳು ಸಿವಿಲ್ ಸ್ವರೂಪದ ವ್ಯಾಜ್ಯ ಅಥವಾ ಮೊಕದ್ದಮೆಗಳು ಎಂತಹ ವಿಷಯಗಳಿಗೆ ಸಂಬಂಧಪಡುತ್ತವೆ? ಎಂಬುದರ ಬಗ್ಗೆ ಕಂಡುಕೊಳ್ಳುವುದು ಅಗತ್ಯ ಈಗಾಗಲೇ ಸರ್ವೋಚ್ಛ ನ್ಯಾಯಾಲಯವು ಮತ್ತು ಉಚ್ಚ ನ್ಯಾಯಾಲಯಗಳು ಅಭಿಪ್ರಾಯ ಮತ್ತು ತೀರ್ಪುಗಳನ್ನು ನೀಡಿದಂತೆ ಯಾವ ವ್ಯಾಜ್ಯದಲ್ಲಿ ಅಪರಾಧಿಕತ್ವ ಅಥವಾ ಅಪರಾಧವೆಸಗಿದ ಮನೋಭಾವ ಮತ್ತು ಕೃತ್ಯಗಳು ಕಂಡುಬರದೆ ಹೋದಲ್ಲಿ ಅಂತಹ ಸ್ವರೂಪದ ವ್ಯಾಜ್ಯಗಳನ್ನು ಸಿವಿಲ್ ಸ್ವರೂಪದ ವ್ಯಾಜ್ಯಗಳೆಂದು ಪರಿಗಣಿಸಬಹುದಾಗಿರುತ್ತದೆ. ಉದಾಹರಣೆಗೆ, ಯಾವುದೇ ಅಪರಾಧಿಕತ್ವ ಇಲ್ಲದ-
i. ಕರಾರು ಅಥವಾ ಒಪ್ಪಂದಗಳ ಉಲ್ಲಂಘನೆ,
ii. ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ವ್ಯಾಜ್ಯಗಳು,
iii. ಸ್ಥಿರಾಸ್ತಿಯ ಮೇಲಿನ ಮಾಲೀಕತ್ವ ಅಥವಾ ಹಿತಾಸಕ್ತಿಯ ಘೋಷಣೆಗೆ ಸಂಬಂಧಿಸಿದ ವ್ಯಾಜ್ಯಗಳು, iv. ಸ್ಥಿರಾಸ್ತಿಯ ಮೇಲಿನ ಸ್ವಾಧೀನಕ್ಕೆ ಸಂಬಂಧಿಸಿದ ವ್ಯಾಜ್ಯಗಳು, ಪೂಜಾ ಹಕ್ಕುಗಳು ಮತ್ತು ಪೂಜಾ ಸ್ಥಳಗಳ ನಿರ್ವಹಣೆಗೆ ಸಂಬಂಧಿಸಿದ ವ್ಯಾಜ್ಯಗಳು,
vi, ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಾದಗಳು,
vii, ಮೇಲ್ನೋಟಕ್ಕೆ ಕ್ರಿಮಿನಲ್ ಹೊಣೆಗಾರಿಕೆ ಸ್ಪಷ್ಟವಾಗಿಲ್ಲದ, ಆದರೆ ಸಿವಿಲ್ ಸ್ವರೂಪದ ವ್ಯಾಜ್ಯಗಳು ಮೇಲ್ನೋಟಕ್ಕೆ ಕಂಡುಬರುವಂತಹ ಪ್ರಕರಣಗಳು.
20.(1) ದೂರುದಾರರು ಸಿವಿಲ್ ವ್ಯಾಜ್ಯವಿರುವ ಮಾಹಿತಿಯುಳ್ಳ ದೂರನ್ನು ಠಾಣಾಧಿಕಾರಿಗೆ ಸಲ್ಲಿಸಿದಾಗ, ಅಂತಹ ಸಂದರ್ಭದಲ್ಲಿ ಠಾಣಾಧಿಕಾರಿಯು ಆ ದೂರು ಅಥವಾ ಮಾಹಿತಿಯನ್ನು ಪರಿಶೀಲಿಸಿದಾಗ, ಮೇಲ್ನೋಟಕ್ಕೆ ಸಿವಿಲ್ ವ್ಯಾಜ್ಯವೆಂದು ಕಂಡುಬಂದಾಗ, ಈ ವಿಷಯವನ್ನು ಠಾಣಾ ದಿನಚರಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು. ಹಾಜರಿರುವ ದೂರುದಾರ ಅಥವಾ ಆತನ ಪ್ರತಿನಿಧಿಗೆ ದೂರಿನಲ್ಲಿ ಸಿವಿಲ್ ಸ್ವರೂಪದ ವ್ಯಾಜ್ಯ ಕಂಡುಬಂದಿರುವುದರಿಂದ ಪರಿಹಾರಕ್ಕಾಗಿ ಸಕ್ಷಮ ಸಿವಿಲ್ ನ್ಯಾಯಾಲಯಕ್ಕೆ ದಾವೆ ದಾಖಲಿಸುವುದು ಸೂಕ್ತವೆಂದು ತಿಳಿಸುವ ಹಿಂಬರಹವನ್ನು ನೀಡುವುದು.