ದಿಗಂತ್ ನಾಪತ್ತೆ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ನೀಡಲಿ : ಶರಣ್ ಪಂಪ್ ವೆಲ್

0 0
Read Time:1 Minute, 59 Second

ಮಂಗಳೂರು: ಪಿಯುಸಿ ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣವನ್ನು ಪೊಲೀಸರು ಭೇದಿಸಲು ಆಗದ ಕಾರಣ ಅದನ್ನು ಸಿಬಿಐ ಅಥವಾ ಸಿಐಡಿಗೆ ನೀಡಿ ಎಂದು ವಿಶ್ವಿ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ವೆಲ್ ರಾಜ್ಯಸರಕಾರವನ್ನು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು ವಿಧ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ತು ದಿನಗಳಾಗಿದೆ ಅಲ್ಲದೆ ಫರಂಗಿಪೇಟೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಆಗಿದೆ. ಇದು ಪೋಲಿಸರ ವೈಫಲ್ಯವೋ ಗೊತ್ತಿಲ್ಲ. ಇದು ಬಹಳ ಗಂಭೀರ ಮತ್ತು ಆಘಾತಕಾರಿ ವಿಚಾರ ಆಗಿದೆ ಎಂದರು. ಸದ್ಯ ಈ ಪ್ರಕರಣವನ್ನು ಪೊಲೀಸರಿಗೆ ಭೇದಿಸಲು ಆಗಿಲ್ಲ ಹೀಗಾಗಿ ಈ ಪ್ರಕರಣವನ್ನು ಸಿಐಡಿ, ಸಿಬಿಐ ತನಿಖೆಗೆ ನೀಡಲಿ ಎಂದರು.

ಎಸ್ ಇಝೆಡ್ ಅಧಿಕಾರಿಗಳು ನೆಲ್ಲಿದಡಿ‌ಗುತ್ತು ದೈವದ ಆಚರಣೆ ಅಡ್ಡಿ‌ ಪಡಿಸುತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬದ ಆರಾಧನೆಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಎಂದರು. ಆ ದೈವಸ್ಥಾನಕ್ಕೆ ಸೇರಿದ ಐದುವರೆ ಎಕರೆ ಭೂಮಿ ಕುಟುಂಬಕ್ಕೆ ನೀಡಬೇಕು. ಕೇಂದ್ರ ಸರ್ಕಾರಕ್ಕೆ ಇದಕ್ಕೆ ಸಂಬಂಧಪಟ್ಟವರಿಗೆ ಮನವಿ ಮಾಡ್ತೇವೆ ಎಂದರು. ಅಲ್ಲದೆ ನೆಲ್ಲಿದಡಿ ಗುತ್ತು ಹೋರಾಟ ಸಮಿತಿಯೊಂದಿಗೆ ವಿಎಚ್ ಪಿ ಇರಲಿದೆ ಎಂದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಎಸ್ಇಝಡ್ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಲಿ. ಅದು ಬಿಟ್ಟು ಸಂಘರ್ಷಕ್ಕೆ ಅವಕಾಶ ಮಾಡಿ ಕೊಡಬೇಡಿ ಎಂದರು. ತುಳುವರ ಮೂಲ ಶಕ್ತಿಯಾಗಿದೆ ದೈವಾರಾದನೆ. ತುಳುವರ ನಂಬಿಕೆಗೆ ನೋವು‌ ಉಂಟು ಮಾಡಿದ್ರೆ ತುಳುನಾಡಿನ ಜನತೆ ಮಾತ್ರ ಸುಮ್ಮನಿರಲ್ಲ ಎಂದು ಎಚ್ಚರಿಸಿದರು.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *