
Read Time:1 Minute, 18 Second
ಮಂಗಳೂರು: ಪಾನ್ ಶಾಪ್ ನಲ್ಲಿ ವ್ಯಕ್ತಿಯೊಬ್ಬ ಚಾಕಲೇಟ್ ಮಾದರಿಯ ಮಾದಕ ದ್ರವ್ಯದ ಸುವಾಸನೆಯುಳ್ಳ ಚಾಕಲೇಟ್ ಮಾರಾಟ ನಡೆಸುತ್ತಿದ್ದ ವೇಳೆ ಮಂಗಳೂರು ಉಪವಿಭಾಗದ ಅಬಕಾರಿ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ನಡೆದಿದೆ.


ಉತ್ತರ ಪ್ರದೇಶ ಮೂಲದ ಸುಜಿತ್ ಕುಮಾರ್ ಬಂಧಿತ ವ್ಯಕ್ತಿ.
ಮಂಗಳೂರು ಪಂಪೈಲ್ ಹತ್ತಿರದಲ್ಲಿರುವ ಕೆನರಾ ಬ್ಯಾಂಕ್ ಮುಂದುಗಡೆ ಪಾನ್ ಶಾಪ್ ಹೊಂದಿದ್ದು, ಆತನಿಂದ 303 ಗ್ರಾಂ. ಬಮ್ ಬಮ್ ಚಾರ್ ಮಿನಾರ್ ಹೆಸರಿನ ಮಾದಕ ದ್ರವ್ಯ ಸುವಾಸನೆಯುಳ್ಳ ಚಾಕಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಮಂಗಳೂರು ಉಪ ವಿಭಾಗದ ಅಬಕಾರಿ ಉಪಾಧೀಕ್ಷರಾಗಿರುವ ಗಾಯತ್ರಿ ಸಿ.ಹೆಚ್. ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಮಂಗಳೂರು ಉಪ ವಿಭಾಗ ಉಪನೀರಿಕ್ಷಕರಾದ ಸುಧೀರ್ ಕುಮಾರ್ ಪ್ರಕರಣ ದಾಖಲಿಸಿದ್ದಾರೆ. ಉಪನಿರೀಕ್ಷಕ ಹರೀಶ್ ಪಿ, ಹೆಡ್ ಕಾಸ್ಟೇಬಲ್ ಸಂಧ್ಯಾ ಭಟ್, ಕಾನ್ಸಬಲ್ ಮಾರುತಿ ಡಿ.ಜಿ. ಮತ್ತು ವಾಹನ ಚಾಲಕ ಹರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

