‘CD ಶಿವು’ ಪೆನ್ ಡ್ರೈವ್ ಪಟಿಂಗರ ಪಟಾಲಂನ ‘ಕ್ಯಾಪ್ಟನ್’: JDS

0 0
Read Time:3 Minute, 23 Second

ಬೆಂಗಳೂರು: CD ಶಿವು ಸಾರಥ್ಯದ, ಪೆನ್ ಡ್ರೈವ್ ಪಟಾಲಂ ಪಟಿಂಗರ ಪಾರ್ಟಿ ಕಾಂಗ್ರೆಸ್ಸಿಗೆ ಜಾತ್ಯತೀತತೆ ಎನ್ನುವುದು ವೋಟಿಗಾಗಿ ಹಾಕುವ ಮುಖವಾಡವಷ್ಟೇ. ಅದನ್ನು ಕಾಶಿ ಗಂಗೆಯಲ್ಲಿ ವಿಸರ್ಜಿಸಿ, ಸಂಚುಕೋರ ಕಾಂಗ್ರೆಸ್ ಪಕ್ಷವಾಗಿ ಹೊರಹೊಮ್ಮಿ ಬಹಳ ದಿನವೇ ಕಳೆದಿದೆ. ಅದು ಗಾಂಧಿ ಕಾಂಗ್ರೆಸ್ ಅಲ್ಲ, ನೆಹರು ಕಾಂಗ್ರೆಸ್ ಅಲ್ಲ..

CD ವಿದ್ಯಾಪಾರಂಗತನ ಕಪಿಮುಷ್ಟಿಗೆ ಸಿಕ್ಕಿ ಪೆನ್ ಡ್ರೈವ್ ಹಂಚಿಕೊಂಡು ವಿಕೃತಾನಂದ ಅನುಭವಿಸುತ್ತಿರುವ ಅಶ್ಲೀಲ ವಿಡಿಯೋ ಬಿಸ್ನೆಸ್ ಪಾರ್ಟಿ ಎಂಬುದಾಗಿ ಜೆಡಿಎಸ್ ವಾಗ್ಧಾಳಿ ನಡೆಸಿದೆ.

ಇಂದು ಮತ್ತೊಂದು ಎಕ್ಸ್ ಪೋಸ್ಟ್ ಮಾಡಿದ್ದು, ಪೆನ್ ಡ್ರೈವ್ ಪಟಿಂಗರನ್ನು ಅಕ್ಕಪಕ್ಕ ಇರಿಸಿಕೊಂಡು SITಗೆ ಟೋಪಿ ಹಾಕುತ್ತಿರುವ CD ಶಿವು ನೇತೃತ್ವದ ಪಕ್ಷ, ಅವರ ಸರಕಾರ ಆ ಪಟಿಂಗರ ರಕ್ಷಣೆಗೆ ನಾಚಿಕೆ, ಲಜ್ಜೆ ಇಲ್ಲದೆ ನಿಂತಿದೆ! ಲಜ್ಜೆ ಇಲ್ಲದವನಿಗೆ ಲಫಂಗರೆಲ್ಲ ನೆಂಟರು ಎನ್ನುವಂತಿದೆ ಕಪಟಿ ಕಾಂಗ್ರೆಸ್ ಪರಿಸ್ಥಿತಿ. CD ಶಿವು ಸೀಡಿ ಸೃಷ್ಟಿಕರ್ತ, ಪ್ರದರ್ಶಕ. ಬಿಚ್ಚಿದರೆ ಬಣ್ಣಗೇಡು, ಸಿಎಂ ಆಗಬೇಕೆನ್ನುವ ಆ ವ್ಯಕ್ತಿಯ ಕನಸು ಮಣ್ಣುಗೇಡು.. ಕಪಟಿ ಕಾಂಗ್ರೆಸ್ ಎಚ್ಚೆತ್ತುಕೊಂಡರೆ ಕ್ಷೇಮ ಎಂದು ಎಚ್ಚರಿಸಿದೆ.

ಕಪಟಿ ಕಾಂಗಿಗಳೇ, ಟೆಂಟ್ ಇಟ್ಟುಕೊಂಡು ನೀಲಿಚಿತ್ರ ಪ್ರದರ್ಶನ ಮಾಡಿದ್ದು ಯಾರು? ನೀಲಿಚಿತ್ರ ನೋಡುತ್ತಲೇ ಪೊಲೀಸ್ ಅಧಿಕಾರಿ ಕೈಗೆ ಸಿಕ್ಕಿಬಿದ್ದು ಇಕ್ಕಿಸಿಕೊಂಡ ಹಸ್ತನಾಧಿಪತಿ ಯಾರು? ವಕೀಲ ದೇವರಾಜೇಗೌಡ ಜತೆ Broker ಶಿವರಾಮೇಗೌಡನನ್ನು ಬಿಟ್ಟು ಡೀಲ್ ಕುದುರಿಸಲು ವಿಫಲಯತ್ನ ನಡೆಸಿದ್ದು ಯಾರು? ಮೊಬೈಲ್ ಸಂಭಾಷಣೆ ಮೂಲಕ ಉಡುದಾರವೇ ಉದುರಿ ಜಂಘಾಬಲವೇ ಉಡುಗಿ ಹೋಗಿ ರಾಜ್ಯದ ಜನತೆಯ ಮುಂದೆ ನಿರ್ಲಜ್ಜವಾಗಿ ನಿಂತಿದ್ದು ಯಾರು? ಪೂರ್ವಾಶ್ರಮದಲ್ಲಿ ಟೆಂಟ್ ನಲ್ಲಿ ಡರ್ಟಿ ಪಿಕ್ಚರ್ ಹಾಕಿಕೊಂಡು, ಕಂಡೋರ ಗಲಾಸಿಗೆ ಎಣ್ಣೆ ಬಿಟ್ಟುಕೊಂಡು ಉಬ್ಬಿ ಕೊಬ್ಬಿದ್ದು ಯಾರು? ಕುಮಾರಣ್ಣ ಪೆನ್ ಡ್ರೈವ್ ಬಿಟ್ಟರೆ ಉದುರುವುದೇ ನಿಮ್ಮ CD ಶಿವು ಕಚ್ಚೆ, ಗೊತ್ತಿರಲಿ ಕಾಂಗಿಗಳೇ ಎಂದು ಕಿಡಿಕಾರಿದೆ.

ಮಾಡಿದವನ ಪಾಪ.. ಪೆನ್ ಡ್ರೈವ್ ಹಂಚಿದವನ ಕೈಯ್ಯಲ್ಲಿ… ಹೌದೋ ಅಲ್ಲವೋ ಕಾಂಗಿಗಳೇ.. ನಾಲ್ಕು ಗೋಡೆ ನಡುವೆ ನಡೆದದ್ದನ್ನು ಮಕ್ಕಳು ಓದುವ ಶಾಲೆಯಲ್ಲಿ ಪೆನ್ ಡ್ರೈವುಗಳಿಗೆ ತುಂಬಿ ಹಂಚಿದಿರಲ್ಲಾ.. ಆ ಹೆಣ್ಮಕ್ಕಳು ಏನಾಗಬೇಕು? ಅವರು ಸತ್ತರೂ ನಿಮಗೆ ಅಧಿಕಾರ ಸಿಕ್ಕಬೇಕು.. ಅಲ್ಲವೇ? ಹಾಸನದಿಂದ ಹೊರಟ ಮೊದಲ ಪೆನ್ ಡ್ರೈವ್ ಯಾರ ಮನೆ ಬಾಗಿಲಿಗೆ ಬಂತು? ನಿಮ್ಮ ಸತ್ಯವಂತ CD ಶಿವು ಸತ್ಯ ಹೇಳುತ್ತಾರೆಯೇ? ಮನೆಯಲ್ಲಿ ಮುಸುಕು ಹಾಕಿಕೊಂಡು ಕೂರಬೇಕಾಗಿದ್ದು ಯಾರು? ಕಾಂಗ್ರೆಸ್ ಕೈಗೆ ಕೊಳಕು ಅಂಟಿಸಿದ್ದು ಯಾರು? CD ಶಿವು.. ಅಲ್ಲವೇ..? ಎಂದು ಪ್ರಶ್ನಿಸಿದೆ.

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *