
ದಕ್ಷಿಣ ಕನ್ನಡ: ಸ್ವ ಉದ್ಯೋಗ ಕೈಗೊಳ್ಳೋ ಆಸಕ್ತಿ ಇರುವವರಿಗೆ ಗುಡ್ ನ್ಯೂಸ್ ಎನ್ನುವಂತೆ ಉಚಿತವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ತರಬೇತಿ ನೀಡಲು ಉಜಿರೆಯ ರುಡ್ ಸೆಟ್ ಸಂಸ್ಥೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.


ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ರುಡ್ ಸೆಟ್ ಸಂಸ್ಥೆ ಮಾಹಿತಿ ನೀಡಿದ್ದು, ದಿನಾಂಕ 05-08-2024ರಿಂದ 17-08-2024ರವರೆಗೆ ಸಿಸಿ ಕ್ಯಾಮೆರಾ ಅಳವಡಿಸುವಿಕೆ ಮತ್ತು ದುರಸ್ಥಿಯ ಉಚಿತ ತರಬೇತಿ ನೀಡಲಾಗುತ್ತಿದೆ ಅಂತ ತಿಳಿಸಿದೆ.
ಧರ್ಮಸ್ಥಳ ಸಮೀಪದ ಉಜಿರೆಯ ರುಡ್ ಸೆಟ್ ಸಂಸ್ಥೆಯಲ್ಲಿ ಸ್ವ ಉದ್ಯೋಗದ ಈ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ. 18 ರಿಂದ 45 ವರ್ಷದೊಳಗಿನ ಯಾರು ಬೇಕಾದ್ರೂ ಅರ್ಜಿಯನ್ನು ಸಲ್ಲಿಸಬಹುದು ಅಂತ ಹೇಳಿದೆ.


ಅರ್ಜಿಯನ್ನು ವಾಟ್ಸ್ ಆಪ್ ಮೂಲಕ ಸಲ್ಲಿಸುವುದಾದರೇ 6364561982ಗೆ ಕಳುಹಿಸಬಹುದು. ಇಲ್ಲದೇ ಆನ್ ಲೈನ್ ಮೂಲಕ ಸಲ್ಲಿಸುವುದಾದರೇwww.rudsetitraining.orgವೆಬ್ ಸೈಟ್ ಗೆ ಭೇಟಿ ನೀಡಿ ಸಲ್ಲಿಸಬಹುದಾಗಿ ಅಂತ ತಿಳಿಸಿದೆ.

ಇನ್ನೂ ಸ್ವ ಉದ್ಯೋಗಾಕಾಂಕ್ಷಿಗಳು ಹೆಚ್ಚಿನ ಮಾಹಿತಿಗಾಗಿ 9591044014, 9900793675, 9980885900, 9448484237ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಂತ ಹೇಳಿದೆ.
ಅಂದಹಾಗೇ ತರಬೇತಿ ಅವಧಿಯಲ್ಲಿ ವಸತಿ ಸಹಿತ ಊಟದ ವ್ಯವಸ್ಥೆ ಉಚಿತವಾಗಿರುತ್ತದೆ. ಈ ತರಬೇತಿಯನ್ನು ಸ್ವ ಉದ್ಯೋಗ ಆಕಾಂಕ್ಷಿಗಳು ಸಹದುಪಯೋಗ ಪಡಿಸಿಕೊಳ್ಳುವಂತೆ ಕೋರಿದೆ.