
Read Time:48 Second
ಕಾರ್ಕಳ : ಮನೆಯ ಎದುರು ಮಲಗಿದ್ದ ಮೂರು ದನಗಳನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಕದ್ದೋಯ್ದ ಘಟನೆ ಕಾರ್ಕಳ ತಾಲೂಕಿನ ಸಾಣೂರು ಪಡ್ಡಾಯಿ ಗುಡ್ಡೆಯಲ್ಲಿ ಮುಂಜಾನೆ 3.30ರ ಸಮಯದಲ್ಲಿ ನಡೆದಿದೆ.



ಈ ಕುರಿತು ಮನೆಯವರು ನೀಡಿದ ಮಾಹಿತಿಯಂತೆ ಹಾಗೂ ಸಿಸಿ ಟಿವಿ ದೃಶ್ಯಗಳ ನ್ನು ಪೊಲೀಸ್ ಇಲಾಖೆಗೆ ನೀಡಿ ಸದ್ರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಕಾರ್ಕಳ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮನವಿ ಮಾಡುತ್ತದೆ. ಕಾರ್ಕಳ ಭಾಗದಲ್ಲಿ ದನ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಬಲವಾಗಿ ಖಂಡಿಸುತ್ತದೆ.

