ಪುತ್ತೂರು: ಪಿಲಿ ರಾಧಣ್ಣ ಖ್ಯಾತಿಯ ರಾಧಾಕೃಷ್ಣ ಶೆಟ್ಟಿ ನಿಧನ

ಪುತ್ತೂರು: ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಶೈಲಿಯ ಹೆಜ್ಜೆಯ ಹೆಗ್ಗುರುತಿನ ಬ್ರ‍್ಯಾಂಡ್ ತಂದುಕೊಟ್ಟ ಪಿಲಿ ರಾಧಣ್ಣ ಅವರು ಅನಾರೋಗ್ಯದ ಹಿನ್ನೆಲೆ ಶನಿವಾರ ನಸುಕಿನ ಜಾವ ಕೊನೆಯುಸಿರೆಳೆದಿದ್ದಾರೆ. ಕೆಮ್ಮಾಯಿ ನಿವಾಸಿ ರಾಧಾಕೃಷ್ಣ ಶೆಟ್ಟಿ (59) ಅವರನ್ನು ಅನಾರೋಗ್ಯದ ಹಿನ್ನಲೆ ಸೆ.5 ರಂದು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.ಪುತ್ತೂರಿನಲ್ಲಿ ಪಿಲಿ ರಾಧಣ್ಣ ಎಂದೇ ಹೆಸರಾದ ರಾಧಾಕೃಷ್ಣ ಶೆಟ್ಟಿಯವರು ಹುಲಿ ಆಚರಣೆಯ ಸಂಪ್ರದಾಯಕ್ಕೆ ಎಳ್ಳಷ್ಟು ಚ್ಯುತಿ ಬಾರದ…

Read More

ಮಗು ಮಾರಾಟ : ಮಂಗಳೂರಿನ ಡಾಕ್ಟರ್ ಸೇರಿದಂತೆ ಮೂವರು ಅರೆಸ್ಟ್

ಉಡುಪಿ: ಮಂಗಳೂರಿನ ಕೊಲಾಸೋ ಆಸ್ಪತ್ರೆಯಲ್ಲಿ ಅತ್ಯಾಚಾರ ಸಂತ್ರಸ್ಥೆಯ ಮಗುವನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾಕ್ಟರ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಿಸಿ ರೋಡ್‌ನ‌ ವೈದ್ಯ ಡಾ| ಸೋಮೇಶ್‌ ಸೊಲೊಮನ್‌, ಮಂಗಳೂರಿನ ಪಿಜಿ ಮಾಲಕಿ ವಿಜಯಲಕ್ಷ್ಮಿ ಆಲಿಯಾಸ್‌ ವಿಜಯ ಮತ್ತು ಅತ್ಯಾಚಾರ ಆರೋಪಿ ನವನೀತ್‌ ನಾರಾಯಣ ಎಂದು ಗುರುತಿಸಲಾಗಿದೆ. ಕಾಪು ತಾಲ್ಲೂಕು ಕಲ್ಲುಗುಡ್ಡೆಯ ನಿವಾಸಿ ಪ್ರಭಾವತಿ– ರಮೇಶ್ ಮೂಲ್ಯ ದಂಪತಿ ಅಂಗನವಾಡಿಗೆ ಶಿಶುವನ್ನು ಕರೆದುಕೊಂಡು ಬಂದಿದ್ದರು. ಈ ವೇಳೆ ಅಂಗನವಾಡಿ ಕಾರ್ಯಕರ್ತೆಗೆ ಇದು ಇವರ ಮಗುವಲ್ಲ ಎಂದು…

Read More

ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಆರೋಪ: ಬೆಳ್ತಂಗಡಿ, ವೇಣೂರು ಠಾಣೆಯಲ್ಲಿ 6 ಪ್ರತ್ಯೇಕ ಪ್ರಕರಣಗಳು ದಾಖಲು

ಬೆಳ್ತಂಗಡಿ; ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿರುವ ಬಗ್ಗೆ ಬೆಳ್ತಂಗಡಿ ಹಾಗೂ ವೇಣೂರು ಪೊಲೀಸ್ ಠಾಣೆಗಳಲ್ಲಿ ಆರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಹುಬ್ಬಳ್ಳಿ ನಿವಾಸಿ ಅಜಿತ್ ನಾಗಪ್ಪ ಬಸಾಪುರ್ ಎಂಬವರು ದೂರು ನೀಡಿದ್ದು, ಗಿರೀಶ್ ಮಟ್ಟಣ್ಣನವರ್ ಕುಡ್ಲ ರಾಂ ಪೇಜ್ ಗೆ ನೀಡಿದ ಸಂದರ್ಶನದಲ್ಲಿ ಜೈನರ ಬಗ್ಗೆ ತುಚ್ಚವಾಗಿ ಮಾತನಾಡಿರುವುದಾಗಿ ಗಿರೀಶ್ ಮಟ್ಟಣ್ಣನವರ್ ಹಾಗೂ ಕುಡ್ಲ ರಾಂ ಪೇಜ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅದೇ ರೀತಿ ಬೆಳ್ತಂಗಡಿ ನಿವಾಸಿ ವಿಜಯ ಎಂಬವರ ದೂರಿನಂತೆ ವಿಕಾಸ್ ವಿಕ್ಕಿ ಹಿಂದು ಎಂಬ ಫೇಸ್…

Read More

ಧರ್ಮಸ್ಥಳ ಕೇಸ್: ಮಾಧ್ಯಮಗಳ ಮೇಲಿನ ನಿರ್ಬಂಧ ರದ್ದುಗೊಳಿಸಿದ ಹೈಕೋರ್ಟ್

ಧರ್ಮಸ್ಥಳ: ನೂರಾರು ಶವಗಳನ್ನು ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಹರ್ಷೇಂದ್ರ ಕುಮಾರ್ ಅವರ ಬಗ್ಗೆ ಯಾವುದೇ ಸುದ್ದಿ ಪ್ರಸಾರ/ಪ್ರಕಟ ಮಾಡದಂತೆ ಮಾಧ್ಯಮಗಳನ್ನು ನಿರ್ಬಂಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನು ಹೈಕೋರ್ಟ್‌ ವಜಾಗೊಳಿಸಿದೆ. ಮಾಧ್ಯಮಗಳನ್ನು ನಿರ್ಬಂಧಿಸಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ಪ್ರತಿಬಂಧಕಾದೇಶ ಪ್ರಶ್ನಿಸಿ ದಕ್ಷಿಣ ಕನ್ನಡದ ‘ಕುಡ್ಲ ರ‍್ಯಾಂಪೇಜ್‌’ ಯೂಟ್ಯೂಬ್ ಚಾನಲ್‌ನ ಪ್ರಧಾನ ಸಂಪಾದಕ ಅಜಯ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ. ಕುಡ್ಲ ರ‍್ಯಾಂಪೇಜ್‌ ಪ್ರಧಾನ…

Read More

ಧರ್ಮಸ್ಥಳದಲ್ಲಿ‌ ಎಂಬಿಬಿಎಸ್ ವಿದ್ಯಾರ್ಥಿನಿ ನಾಪತ್ತೆ; 2 ದಶಕಗಳ ಬಳಿಕ ಎಸ್ಪಿಗೆ ದೂರು ನೀಡಿದ ತಾಯಿ 

ಧರ್ಮಸ್ಥಳದಲ್ಲಿ 2003ರಲ್ಲಿ ನಾಪತ್ತೆಯಾಗಿದ್ದಾಳೆ ಎನ್ನಲಾದ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್, ವಿಚಾರವಾಗಿ ಎರಡು ದಶಕಗಳ ನಂತರ ಆಕೆಯ ತಾಯಿ ಸುಜಾತಾ ಭಟ್ ಎಂಬುವರು ಎಸ್ಪಿ ಕಚೇರಿಗೆ ದೂರು ನೀಡಿದ್ದಾರೆ. ತಮ್ಮ ವಕೀಲರೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಅವರು, ಎಸ್ಪಿ ಡಾ . ಅರುಣ್ ಅವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೂರುದಾರರ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ಅರ್ಜಿ ದಾಖಲಿಸಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ…

Read More

“ನೀನು ಸುಂದರಿಯಲ್ಲ” ಎಂದಿದ್ದಕ್ಕೆ ಗಂಡನಿಗೆ ಪತ್ನಿ ಪೆಟ್ರೋಲ್ ಸುರಿದು ಬೆಂಕಿ: ತಿರುಪತಿಯಲ್ಲಿ ಬಂಧನ

ತಮಿಳುನಾಡು, ಜೂನ್ 14: ತಾನು ಸುಂದರವಾಗಿಲ್ಲ ಎಂದು ಹೇಳಿ ಕಿರುಕುಳ ನೀಡಿದ್ದರಿಂದ ಪತಿಯನ್ನು ಮಹಿಳೆ ಕೊಂದಿದ್ದಾಳೆ. ಕೃಷ್ಣಗಿರಿಯಲ್ಲಿ ಈ ಘಟನೆ ನಡೆದಿದೆ. ಕೃಷ್ಣಗಿರಿ ಜಿಲ್ಲೆಯ ರಂಗಸಾಮಿ (47), ಕವಿತಾ (44) ದಂಪತಿಗೆ ಮದುವೆಯಾಗಿ 22 ವರ್ಷಗಳಾಗಿವೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದಾರೆ. ಒಬ್ಬ ಹೆಣ್ಣು ಮಗಳು ವಿವಾಹವಾಗಿದ್ದರೆ, ಇನ್ನೊಬ್ಬ ಮಗಳು ಮತ್ತು ಮಗ ಕಾಲೇಜಿನಲ್ಲಿ ಓದುತ್ತಿದ್ದಾರೆ. ಜೂನ್ 9, 2025 ರ ರಾತ್ರಿ, ರಂಗಸಾಮಿಯನ್ನು ಅವರ ಪತ್ನಿ ಕವಿತಾ ಅವರ ಪತಿ ಮೇಲೆ ಪೆಟ್ರೋಲ್…

Read More

ಯೋಗೀಶ್ ಗೌಡ ಕೊಲೆ ಕೇಸ್: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ಬೆಂಗಳೂರು, ಜೂನ್​ 13: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ ವಿನಯ್​​ ಕುಲಕರ್ಣಿ ಇಂದು (ಶುಕ್ರವಾರ) ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಪಡಿಸಿ, ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿತ್ತು. ಈ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಹಾಜರಾಗಿದ್ದು, ಕೋರ್ಟ್ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. 2016 ರ ಜೂ. 15 ರಂದು ಧಾರವಾಡ ತಾಲೂಕಿನ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ…

Read More

ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ

ಅಕ್ಷಯ ತೃತೀಯ ದಿನದ ಕರ್ನಾಟಕ ಸೇರಿದಂತೆ ದೇಶದಲ್ಲಿ ದಾಖಲೆ ಮೊತ್ತದ ಚಿನ್ನಾಭರಣ ಮಾರಾಟವಾಗಿದೆ. ಕರ್ನಾಟಕದಲ್ಲಿ ಅಕ್ಷಯ ತೃತೀಯ ದಿನ ಬರೋಬ್ಬರಿ 3000 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದೀಗ ಅಕ್ಷಯ ತೃತೀಯ ದಿನ ಬಳಿಕ ಅಂದರೆ ಮೇ.01 ರಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇದು ಹಲವರ ನೆಮ್ಮದಿಗೆ ಕಾರಣವಾಗಿದೆ.

Read More

ಟಿಕ್​ಟಾಕ್​ ಖರೀದಿ ತಲೆನೋವು: ಮತ್ತೆ ಗಡುವು ವಿಸ್ತರಿಸಿದ ಅಮೆರಿಕ ಅಧ್ಯಕ್ಷ!

ಅಮೆರಿಕದಲ್ಲಿ ಶಾರ್ಟ್​ ವಿಡಿಯೋ ಅಪ್ಲಿಕೇಶನ್ ಟಿಕ್‌ಟಾಕ್ ಅನ್ನು ನಿಷೇಧಿಸುವ ಗಡುವು ಪೂರ್ಣಗೊಳ್ಳುವ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಅಮೆರಿಕದ ಖರೀದಿದಾರರನ್ನು ಹುಡುಕಲು ಡೊನಾಲ್ಡ್ ಟ್ರಂಪ್ ಟಿಕ್‌ಟಾಕ್‌ಗೆ 75 ದಿನಗಳ ಕಾಲಾವಕಾಶ ನೀಡಿದ್ದಾರೆ. ಈ ಸಂಬಂಧ ಟ್ರಂಪ್ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಟಿಕ್‌ಟಾಕ್ ಖರೀದಿಸಲು ಅಮೆಜಾನ್ ಪ್ರಯತ್ನಿಸಿತ್ತು ಎಂಬುದು ಗಮನಾರ್ಹ. ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿ, ”ಟಿಕ್‌ಟಾಕ್ ಉಳಿಸಲು ನನ್ನ ಆಡಳಿತವು…

Read More

ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಅಣ್ಣಾಮಲೈಗೆ ಗೇಟ್ ಪಾಸ್ ಸಾಧ್ಯತೆ…?

ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿ ಪಕ್ಷಕ್ಕೆ ಒಂದು ಇಮೇಜ್ ತಂದು ಕೊಟ್ಟಿದ್ದ ಮಾಜಿ ಐಪಿಎಸ್ ಅಧಿಕಾರಿ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾದ್ಯತೆ ಇದೆ ಎಂದು ವರದಿಯಾಗಿದೆ. 2026ರಲ್ಲಿ ತಮಿಳು ನಾಡಿನಲ್ಲಿ ಚುನಾವಣೆ ಹಿನ್ನಲೆ ಜಾತಿ ಲೆಕ್ಕಾಚಾರದ ವಿಚಾರವಾಗಿ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 2026ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತು ಎಐಎಡಿಎಂಕೆ ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುವ ಸಾಧ್ಯತೆ ಹಿನ್ನಲೆ ಬಿಜೆಪಿ…

Read More