
ಅಕ್ಷಯ ತೃತೀಯ ಬೆನ್ನಲ್ಲೇ ಬಂಗಾರ ಬೆಲೆಯಲ್ಲಿ ಇಳಿಕೆ
ಅಕ್ಷಯ ತೃತೀಯ ದಿನದ ಕರ್ನಾಟಕ ಸೇರಿದಂತೆ ದೇಶದಲ್ಲಿ ದಾಖಲೆ ಮೊತ್ತದ ಚಿನ್ನಾಭರಣ ಮಾರಾಟವಾಗಿದೆ. ಕರ್ನಾಟಕದಲ್ಲಿ ಅಕ್ಷಯ ತೃತೀಯ ದಿನ ಬರೋಬ್ಬರಿ 3000 ಕೋಟಿ ರೂಪಾಯಿ ವಹಿವಾಟು ನಡೆದಿದೆ. ಈ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಇದೀಗ ಅಕ್ಷಯ ತೃತೀಯ ದಿನ ಬಳಿಕ ಅಂದರೆ ಮೇ.01 ರಂದು ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆಯಾಗಿದೆ. ಇದು ಹಲವರ ನೆಮ್ಮದಿಗೆ ಕಾರಣವಾಗಿದೆ.