9 ತಿಂಗಳ ಅಂತರಿಕ್ಷ ವಾಸದ ಬಳಿಕ ಭೂಮಿ ತಾಯಿಯ ಮಡಿಲಿಗೆ ಸುನಿತಾ ವಿಲ್ಲಿಯಮ್ಸ್
ಫ್ಲೋರಿಡಾ: ಭಾರತೀಯ ಸಂಜಾತೆ ಗಗನಯಾತ್ರಿ ಸುನಿತಾ ವಿಲ್ಲಿಯಮ್ಸ್ ಬರೋಬ್ಬರಿ 9 ತಿಂಗಳ ಕಾಲ ಅಂತರಿಕ್ಷ ವಾಸ ಮುಗಿಸಿ ಇಂದು ಮುಂಜಾನೆ ವೇಳೆ ಭೂಸ್ಪರ್ಶ ಮಾಡಿದ್ದಾರೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 286 ದಿನ ಬಾಕಿಯಾಗಿದ್ದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಕರೆತರುವ ಮಿಷನ್ ಯಶಸ್ವಿಯಾಗಿದೆ ಎಂದು ನಾಸಾ ಘೋಷಿಸಿದೆ. ಇಬ್ಬರನ್ನು ಸುರಕ್ಷಿತರವಾಗಿ ಭೂಮಿಗೆ ಕರೆತರಲಾಗಿದೆ. ಸುನೀತಾ ವಿಲಿಯಮ್ಸ್, ಬುಚ್‌ವಿಲ್ಮೋರ್ ಸೇರಿ ನಾಲ್ವರು ಗಗನಯಾತ್ರಿಗಳನ್ನು ಹೊತ್ತಿದ್ದ ಸ್ಪೇಸ್ ಎಕ್ಸ್ ಕ್ರೂ ಡ್ರ್ಯಾಗನ್…

