ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂದು ದೃಢ- ತಿನ್ನಲು ಸಂಪೂರ್ಣ ಸುರಕ್ಷಿತ

ಮೊಟ್ಟೆಯಿಂದ ಅನಾರೋಗ್ಯ ಉಂಟಾಗುತ್ತದೆ ಎಂಬುದು ಸುಳ್ಳು. ಮೊಟ್ಟೆ ಪೌಷ್ಟಿಕಾಂಶಯುಕ್ತವಾಗಿದ್ದು, ಇದು ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ನಾಡಿನ ಸಮಸ್ತ ಜನರೇ, ಕಳೆದ ನಾಲ್ಕೈದು ದಿನಗಳ ಹಿಂದಿದ್ದ ನಿಮ್ಮೆಲ್ಲರ ಆತಂಕವನ್ನು ದೂರ ಮಾಡುವಂತಹ ವರದಿ ಬಂದಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂಬುದು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಮೊಟ್ಟೆಯಲ್ಲಿ ಕ್ಯಾನ್ಸರ್‌ ಉಂಟುಮಾಡುವ ಅಂಶಗಳಿವೆ ಎಂಬ ಚರ್ಚೆ-ವದಂತಿ ಬಂದ ಹಿನ್ನೆಲೆಯಲ್ಲಿ ಹಲವು ಮೊಟ್ಟೆಗಳನ್ನು…

Read More

ಆದಾಯ ಮಿತಿ ಪರಿಷ್ಕರಣೆಗೆ ಹಿನ್ನೆಲೆ, ಯಾವುದೇ ‘BPL’ ಕಾರ್ಡ್ ರದ್ದು ಮಾಡಲ್ಲ : ಸಚಿವ ಕೆ.ಹೆಚ್.ಮುನಿಯಪ್ಪ

ರಾಜ್ಯ ಸರ್ಕಾರ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿಪಿಎಲ್ ಕಾರ್ಡ್​​ಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಸಿ.ಎನ್. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್‍ದಾರರ ಆದಾಯ ಮಿತಿಯನ್ನು 1.20 ಲಕ್ಷ ರೂ.ಗಳಿಗೆ ಮಿತಿಗೊಳಿಸಿದೆ. ಆದರೆ, ಕೂಲಿ ಕೆಲಸಗಾರರಿಗೂ ನಿತ್ಯ 500 ರೂ. ಕೂಲಿ…

Read More

ಕರ್ನಾಟಕದಲ್ಲೂ 15 ವರ್ಷ ಮೀರಿದ ವಾಹನಗಳು ಗುಜುರಿಗೆ..!ಸರ್ಕಾರದಿಂದ ಅನುಮೋದನೆ

ಬೆಳಗಾವಿ: ರಾಜ್ಯದಲ್ಲಿನ ಎಲ್ಲಾ ಸರಕಾರಿ ಇಲಾಖೆ, ನಿಗಮ, ಮಂಡಳಿ, ನಗರಸಭೆ ಹಾಗೂ ಸರಕಾರದ ಅಧೀನ ಸಂಸ್ಥೆಗಳಿಗೆ ಸೇರಿದ 15 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಸ್ಕ್ರ್ಯಾಪ್ ಮಾಡುವುದಕ್ಕೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಡಿಸೆಂಬರ್ 17ರಂದು ವಿಧಾನಪರಿಷತ್ತಿನಲ್ಲಿ ಸದಸ್ಯ ಗೋವಿಂದ ರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೆಪ್ಟೆಂಬರ್ 12ರಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದರು. ಹದಿನೈದು ವರ್ಷ ಮೀರಿದ ಎಲ್ಲಾ ಸರಕಾರಿ ವಾಹನಗಳನ್ನು…

Read More

ಜಿಪಿಎಸ್ ಟ್ರ್ಯಾಕರ್ ಹೊಂದಿದ ಹಕ್ಕಿ ಪತ್ತೆ..!! ಚೀನಾ ಗೂಢಚರ್ಯೆ ಶಂಕೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ವಲಸಿಗ ಸಿಗಲ್ ಪಕ್ಷಿಯಲ್ಲಿ ಚೀನಾದ ಜಿಪಿಎಸ್ ಟ್ರಾಕರ್ ಪತ್ತೆಯಾಗಿದೆ. ಟ್ರಾಕರ್ ಹೊಂದಿದ ಸಿಗಲ್ ಪಕ್ಷಿಯನ್ನು ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕದಂಬ ನೌಕಾನೆಲ್ಲಿ ಪ್ರದೇಶದಲ್ಲಿ ನಿನ್ನೆ ಸಿಗಲ್ ಹಕ್ಕಿ ಕಾಣಿಸಿಕೊಂಡಿತ್ತು ಉತ್ತರ ಕನ್ನಡ ಜಿಲ್ಲೆಯ ಕದಂಬ ನೌಕಾನೆಲೆ ಪ್ರದೇಶದಲ್ಲಿ ಹಕ್ಕಿ ಕಾಣಿಸಿಕೊಂಡಿತು. ಟ್ರ್ಯಾಕರ್ ಹೊಂದಿದೆ ಸೀಗಲ್ ಹಕ್ಕಿ ಕಂಡು ಪೊಲೀಸರು ಆತಂಕಗೊಂಡಿದ್ದಾರೆ ಈ ಟ್ರಾಕ್ಟರ್ ಬಗ್ಗೆ ಕಾರವಾರ ಪೊಲೀಸರು ಸದ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ. ಜಿಪಿಎಸ್ ಟ್ರಾಕರ್ ನಲ್ಲಿ…

Read More

ರಾಜ್ಯದಲ್ಲಿ 3 ವರ್ಷಗಳಲ್ಲಿ 16866 ಡ್ರಗ್ಸ್ ಕೇಸ್ ದಾಖಲು : 8133 ಮಂದಿ ಡ್ರಗ್ ಪೆಡ್ಲರ್’ಗಳು ಅರೆಸ್ಟ್.!

 ರಾಜ್ಯದಲ್ಲಿ ಕಳೆದ 3 ವರ್ಷಗಳಲ್ಲಿ 16866 ಡ್ರಗ್ಸ್ ಪ್ರಕರಣಗಳು ದಾಖಲಾಗಿದ್ದು, ಇವುಗಳ ಪೈಕಿ 8133 ಮಂದಿ ಡ್ರಗ್ ಪೆಡ್ಲರ್ ಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ದಾಖಲಾಗಿರುವ ಡ್ರಗ್ಸ್ ಮತ್ತು ಗಾಂಜಾ ಪ್ರಕರಣಗಳ ಸಂಖ್ಯೆ ಎಷ್ಟು? ಈ ಪೈಕಿ ಎಷ್ಟು ಪೆಡ್ಡರ್‌ಗಳನ್ನು ಬಂಧಿಸಲಾಗಿದೆ? ಅವರ ವಿರುದ್ಧ ಕೈಗೊಂಡ ಕ್ರಮಗಳೇನು? ಎಷ್ಟು ಪ್ರಮಾಣದ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿಧಾನಸಭೆಯಲ್ಲಿ ಅಬ್ಬಯ್ಯಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಪರಮೇಶ್ವರ್, ರಾಜ್ಯದಲ್ಲಿ…

Read More

ರಾಜ್ಯದಲ್ಲಿ ಕಳೆದ 3 ವರ್ಷದಲ್ಲಿ 2,320 ಅಪ್ರಾಪ್ತೆಯರು ಗರ್ಭಧಾರಣೆ : ಬೆಚ್ಚಿ ಬೀಳಿಸಿದ ಅಂಕಿ ಅಂಶ!

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದೀಗ ಬೆಚ್ಚಿ ಬೀಳಿಸುವ ವರದಿಯೊಂದು ಹೊರಬಂದಿದ್ದು, ರಾಜ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ 2,320 ಅಪ್ರಾಪ್ತೆಯರು ಗರ್ಭಧಾರಣೆ ಆಗಿರುವುದು ಕಳವಳಕಾರಿ ಸಂಗತಿಯಾಗಿದೆ. ಹೌದು ಕಳೆದ ಮೂರು ವರ್ಷಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಗರ್ಭಧಾರಣೆ ಪ್ರಕರಣ ಸಂಬಂಧ ಮಕ್ಕಳ ಕಲ್ಯಾಣ ಸಮಿತಿಯಲ್ಲಿ 2,320 ಕೇಸ್​ಗಳು ದಾಖಲಾಗಿವೆ. ಬೆಂಗಳೂರು, ಮೈಸೂರು, ಚಿತ್ರದುರ್ಗ, ಗದಗ, ಕೋಲಾರ ಸೇರಿದಂತೆ 729 ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಬೆಳಕಿಗೆ…

Read More

ಕುಂದಾಪುರ: ಕುಲಾಲ ಕ್ರೀಡೋತ್ಸವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲ. ಅನಿಲ್‌ದಾಸ್ ರವರಿಗೆ ಸನ್ಮಾನ ಕಾರ್ಯಕ್ರಮ

ಕುಂದಾಪುರ: ಕುಲಾಲ ಸಮಾಜ ಸುಧಾರಕ ಸಂಘ (ರಿ.) ಕುಂದಾಪುರ ಮತ್ತು ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ಮಂಗಳೂರು ಇದರ ಕುಂದಾಪುರ & ಬೈಂದೂರು ವಿಧಾನಸಭಾ ಘಟಕಗಳ ನೇತೃತ್ವದಲ್ಲಿ ದ್ಕಲ್ ಕಟ್ಟೆ ಕಾಲೇಜು ಮೈದಾನದಲ್ಲಿ ಅದ್ದೂರಿ ಕುಲಾಲ ಕ್ರೀಡೋತ್ಸವ ದಿನಾಂಕ 14-12-2025 ರಂದು ನಡೆಯಿತು . ಕ್ರೀಡೋತ್ಸವದ ಉದ್ಘಾಟನೆಯನ್ನು ಜಯರತ್ನ ಟ್ರಸ್ಟ್ ಪ್ರವರ್ತಕರು ಹಾಗೂ ಕುಂದಾಪುರ ಕಾಂಗ್ರೆಸ್ ಮುಖಂಡರಾದ ಶ್ರೀ ದಿನೇಶ್ ಹೆಗ್ಡೆಯವರು ನೆರವೇರಿಸಿದರು . ಸಭೆಯ ಅಧ್ಯಕ್ಷತೆಯನ್ನು ರಾಘವೇಂದ್ರ ಕುಲಾಲ…

Read More

ನನ್ನ CM ಮಾಡ್ತೀನಿ ಅಂದ್ರೆ ಬಿಜೆಪಿಗೆ ವಾಪಸ್ ಹೋಗ್ತೀನಿ : ಶಾಸಕ ಯತ್ನಾಳ್ ಸ್ಪೋಟಕ ಹೇಳಿಕೆ

ಬೆಳಗಾವಿ : ರಾಜ್ಯದಲ್ಲಿ ಕುರ್ಚಿ ಕದನದ ನಡುವೆ ಡಿನ್ನರ್ ಪಾಲಿಟಿಕ್ಸ್ ಬ್ರೇಕ್ ಫಾಸ್ಟ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದ್ದು, ಇದರ ಮಧ್ಯ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಪದೇಪದೇ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನನ್ನ ಸಿಎಂ ಮಾಡ್ತೀನಿ ಅಂದ್ರೆ ಬಿಜೆಪಿಗೆ ವಾಪಸ್ ಹೋಗ್ತೀನಿ ವಾಪಸ್ ಬಿಜೆಪಿಗೆ ಬನ್ನಿ ಅಂತ ವಿಪಕ್ಷ ನಾಯಕ ಆರ್.ಅಶೋಕ್ ಕರೆದಿದ್ದಾರೆ. ಅಮಿತ್ ಶಾ ಬಳಿ ನಿಯೋಗ ಹೋಗುವ ಬಗ್ಗೆ…

Read More

ಬೆತ್ತಲೆ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆ:ಎಂಬಿಎ ವಿದ್ಯಾರ್ಥಿ ಆತ್ಮಹತ್ಯೆ

ಬೆತ್ತಲೆ ಫೋಟೋ, ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆಗೆ ನೊಂದು ಎಂಬಿಎ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಶಾಂತಿನಗರದಲ್ಲಿ ನಡೆದಿದೆ. ಕೇರಳ ಮೂಲದ ಜಗನ್ ಮೋಹನ್ (25) ಮೃತ ವಿದ್ಯಾರ್ಥಿ. ಮೋಹನ್ ಖಾಸಗಿ ಕಾಲೇಜಿನಲ್ಲಿ ಎಂಬಿಎ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ. ಕಾಲೇಜು ಸಮೀಪದಲ್ಲಿರುವ ಶಾಂತಿನಗರದಲ್ಲಿ ರೂಂ ಬಾಡಿಗೆ ಪಡೆದು ವಾಸವಿದ್ದ ಮೋಹನ್ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಮೋಹನ್…

Read More

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ : ಸಿಎಂ ಸಿದ್ದರಾಮಯ್ಯ ಘೋಷಣೆ

ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ಇದೀಗ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಎಲ್ಲಾ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ 2% ಉದ್ಯೋಗ ಮೀಸಲಾತಿ ನೀಡಲಾಗುತ್ತದೆ ಅಂತ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ‌ಸದಸ್ಯ ಐವಾನ್ ಡಿಸೋಜ ಪ್ರಶ್ನೆ ಕೇಳಿದ್ರು. ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲು ಇಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು…

Read More