
ಆರ್ ಜೆ ಪ್ರೊಡಕ್ಷನ್ ನಿರ್ಮಾಣದ ನೂತನ ತುಳು ಚಲನಚಿತ್ರದ ಟೈಟಲ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ
ಕಳೆದ ಕೆಲ ದಿವಸಗಳಿಂದ ಜನಮಾನಸದಲ್ಲಿ ಕುತೂಹಲ ಕೆರಳಿಸಿದ್ದ, ಬಹು ನಿರೀಕ್ಷಿತ ಆರ್ ಜೆ ಪ್ರೊಡಕ್ಷನ್ ನಿರ್ಮಾಣದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ತುಳು ಚಲನಚಿತ್ರದ ಟೈಟಲ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಇಂದು ನಡೆಯಿತು. ಕೊನೆಗೂ ಚಿತ್ರದ ಹೆಸರನ್ನು ತುಳು ರಂಗಭೂಮಿ ಮತ್ತು ಚಲನಚಿತ್ರ ನಟ ಹಾಗೂ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಇವರು ಅಧಿಕೃತವಾಗಿ ಅನಾವರಣಗೊಳಿಸಿದರು. ಇಷ್ಟು ದಿವಸ ಕಲಾಭಿಮಾನಿಗಳ ಹಲವಾರು ಪ್ರಶ್ನೆಗಳಿಗೆ ಉತ್ತರ ಖುಷಿ ಟೈಲರ್ಸ್ ಎಂಬ ಚಿತ್ರದ ಹೆಸರು. ನಂತರ ಮಾತನಾಡಿದ ದೇವದಾಸ್…