ಮೋದಿ ಹ್ಯಾಟ್ರಿಕ್ ಗ್ಯಾರಂಟಿ – ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಟ
ಮುಂಬೈ : ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನವು ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಹಾಗಾಗಿ, ಎಲ್ಲರ ಗಮನವೀಗ ಚುನಾವಣೆ ಫಲಿತಾಂಶದ ಮೇಲಿದೆ. ಇದರ ಮಧ್ಯೆಯೇ, ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಟಿಸಿದ್ದು, ಮೋದಿ ಹ್ಯಾಟ್ರಿಕ್ ಬಾರಿಸುವುದು ನಿಶ್ಚಿತ ಎಂದು ತಿಳಿಸಿದೆ. ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ…

