ಎಕ್ಸಿಟ್ ಪೋಲ್ ನಲ್ಲಿ ಮತ್ತೆ ಮೋದಿ: ವರದಿಗಳ ಬೆನ್ನಲ್ಲೇ ಷೇರು ಮಾರುಕಟ್ಟೆ ಏರಿಕೆ ನಿರೀಕ್ಷೆ!
ಮುಂಬಯಿ: ಕಳೆದ ವಾರ ಸಾಕಷ್ಟು ಏರುಪೇರಿನಿಂದ ಕೂಡಿದ್ದ ಷೇರು ಮಾರುಕಟ್ಟೆ, ರೂಪಾಯಿ ಮೌಲ್ಯ ಮತ್ತು ಬಾಂಡ್ ಮೌಲ್ಯಗಳು ಸೋಮವಾರ ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಹುಟ್ಟಿದೆ. ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೇರಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರ ಉತ್ಸಾಹ ಹೆಚ್ಚಾಗಿದ್ದು, ಷೇರುಪೇಟೆ ಏರಿಕೆ ಹಾದಿಗೆ ಮರಳಬಹುದು ಎನ್ನಲಾಗಿದೆ. ಫಲಿತಾಂಶ ಬಾಕಿ ಇದ್ದ ಕಾರಣ ವಿದೇಶಿ ಹೂಡಿಕೆ ದಾರರು ಎಚ್ಚರಿಕೆಯಿಂದ ಹೂಡಿಕೆ ಮಾಡಿದ್ದರು. ಹೀಗಾಗಿ ಷೇರುಪೇಟೆ ಕುಸಿತ ಕಂಡಿತ್ತು. ಈಗ ಮತಗಟ್ಟೆ ಸಮೀಕ್ಷೆಗಳ…

