ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ‘ವಿ.ಸೋಮಣ್ಣ’

ನವದೆಹಲಿ: ನಿನ್ನೆ ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ, ತನ್ನ ಸಂಪುಟದ ಸಚಿವರಿಗೆ ಮೋದಿ ಖಾತೆ ಹಂಚಿಕೆ ಮಾಡಿದ್ದರು. ಕರ್ನಾಟಕದ ವಿ.ಸೋಮಣ್ಣ ಅವರಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವಸ್ಥಾನ ನೀಡಲಾಗಿತ್ತು. ಇಂತಹ ಖಾತೆಯ ಅಧಿಕಾರವನ್ನು ಇಂದು ವಹಿಸಿಕೊಂಡರು. ಮೋದಿ 3.0 ಸಚಿವ ಸಂಪುಟ ಸೇರಿದಂತೆ ಕರ್ನಾಟಕದ ಐವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಹೆಚ್.ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಿದ್ದರೇ, ನಿರ್ಮಲಾ ಸೀತಾರಾಮನ್ ಗೆ ಹಣಕಾಸು ಖಾತೆ, ಶೋಭಾ ಕರಂದ್ಲಾಜೆಗೆ ಸೂಕ್ಷ್ಮ, ಸಣ್ಣ…

Read More

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕರೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಮೂರನೇ ಬಾರಿ ದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೂನ್ 9ರಂದು ನಡೆದ ಪ್ರಮಾಣವಚನ ಕಾರ್ಯಕ್ರಮದ ಅದ್ದೂರಿ ಸಮಾರಂಭಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಅನಾರೋಗ್ಯ ಕಾರಣದಿಂದ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಹೆಚ್.ಡಿ.ದೇವೇಗೌಡರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪದಗ್ರಹಣ ಕಾರ್ಯಕ್ರಮಕ್ಕೆ ಗೈರಾಗಿದ್ದರ ಬಗ್ಗೆ ವಿಚಾರಿಸಿದ್ದಾರೆ. ಇದೇ…

Read More

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಗುಡ್‌ ನ್ಯೂಸ್‌ : 5,096 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ

ನವದೆಹಲಿ : ಹೊಸ ಸರ್ಕಾರ ರಚನೆಯಾದ ಬೆನ್ನಲ್ಲೇ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಕೇಂದ್ರವು ಜೂನ್ ತಿಂಗಳಲ್ಲಿ ರಾಜ್ಯಗಳಿಗೆ 1,39,750 ಕೋಟಿ ತೆರಿಗೆ ಹಂಚಿಕೆಯ ಕಂತನ್ನು ಬಿಡುಗಡೆ ಮಾಡಿದೆ. ಹಣಕಾಸು ಸಚಿವಾಲಯವು ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, “2024 ರ ಜೂನ್ ತಿಂಗಳಿಗೆ ವಿಕೇಂದ್ರೀಕರಣ (ರಾಜ್ಯಗಳ ತೆರಿಗೆ ಪಾಲು) ಮೊತ್ತವನ್ನು ನಿಯಮಿತವಾಗಿ ಬಿಡುಗಡೆ ಮಾಡುವುದರ ಜೊತೆಗೆ , ಒಂದು ಹೆಚ್ಚುವರಿ ಕಂತನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಪಾಲಿನ ಕಂತಿನ…

Read More

ನಿಮ್ಮ ಮನೆ ಬಾಡಿಗೆಗೆ ಕೊಡ್ತೀರಾ: ಪೊಲೀಸ್‌ ಇಲಾಖೆ ಸಂದೇಶ ನೋಡಿ 

ಬೆಂಗಳೂರು : ನೀವು ನಿಮ್ಮ ಮನೆ ಅಥವಾ ವಾಣಿಜ್ಯ ಕಟ್ಟಡ ಬಾಡಿಗೆ/ಲೀಜ್​​​ಗೆ ಕೊಟ್ಟಿದ್ದೀರಾ..ಇಲ್ಲವೇ ಕೊಡಲು ಇಚ್ಚಿಸಿದರೆ ರಾಜ್ಯ ಪೊಲೀಸ್ ಇಲಾಖೆಯ ಈ ಸಲಹೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಬಾಡಿಗೆ ಪಡೆಯುವವರ ಬಾಡಿಗೆದಾರರ ಸ್ವಂತ ಊರು ಪೂರ್ವಪರವನ್ನು ಮಾಲೀಕರು ತಿಳಿಯಬೇಕು. ಬಾಡಿಗದಾರರ ಆಧಾರ್ ಕಾರ್ಡ್, ಯಾವುದಾದರೂ ಸರ್ಕಾರಿ ಗುರಿತಿನ ಚೀಟಿ ಝೆರಾಕ್ಸ್ ಮತ್ತು ಮೊಬೈಲ್ ಸಂಖ್ಯೆಯನ್ನು ಮಾಲೀಕರು ಪಡೆದುಕೊಳ್ಳಬೇಕು. ಬಾಡಿಗೆದಾರರು ಬಾಡಿಗೆ ಮನೆಯಲ್ಲಿ ಎಷ್ಟು ಜನ ಮತ್ತು ಯಾರು-ಯಾರು ವಾಸಿಸುತ್ತಾರೆ ಮತ್ತು ಅವರು ವಾಹಗಳನ್ನು ಬಳಸುತ್ತಿದ್ದಲ್ಲಿ ಆ ಎಲ್ಲಾ ವಾಹನಗಳ…

Read More

ನನಗೆ ಸಚಿವ ಸ್ಥಾನ ಬೇಡ ಎಂದ ಕೇರಳದ ಮೊದಲ ಸಂಸದ ಸುರೇಶ್ ಗೋಪಿ..! ಕಾರಣ ಇಲ್ಲಿದೆ

ನವದೆಹಲಿ: ನಿನ್ನೆಯಷ್ಟೇ ಮೂರನೇ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿ ಸರಕಾರ ರಚನೆ ಮಾಡಿದ್ದಾರೆ. ಈ ವೇಳೆ 72 ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡಿರುವ ಪ್ರಧಾನಿ ಮೋದಲ ಬಾರಿ ಸಂಸದರಾದ ನಟ ಸುರೇಶ್ ಗೋಪಿ ಅವರಿಗೂ ರಾಜ್ಯ ಖಾತೆ ನೀಡಿದ್ದಾರೆ. ಆದರೆ ಇದೀಗ ನನಗೆ ಸಚಿವ ಸ್ಥಾನ ಬೇಡ ಎಂದು ಸುರೇಶ್ ಗೋಪಿ ತಿಳಿಸಿದ್ದಾರೆ. ಕೇಂದ್ರದ ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಸುರೇಶ್‌ ಗೋಪಿ, ನಾನು ಸಂಸದನಾಗಿ ಕಾರ್ಯನಿರ್ವಹಿಸಲು…

Read More

ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಹಣ ಬಿಡುಗಡೆ ಮಾಡಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ಪಿಎಂ ಕಿಸಾನ್ ನಿಧಿಯ 17 ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಇದು 9.3 ಕೋಟಿ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಸುಮಾರು 20,000 ಕೋಟಿ ರೂ.ಗಳನ್ನು ವಿತರಿಸುತ್ತದೆ. ಕಡತಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಪ್ರಧಾನಿ ಮೋದಿ, “ನಮ್ಮದು ಕಿಸಾನ್ ಕಲ್ಯಾಣಕ್ಕೆ ಸಂಪೂರ್ಣವಾಗಿ ಬದ್ಧವಾಗಿರುವ ಸರ್ಕಾರ. ಆದ್ದರಿಂದ ಅಧಿಕಾರ ವಹಿಸಿಕೊಂಡ ನಂತರ ಸಹಿ ಮಾಡಿದ ಮೊದಲ…

Read More

ಕರ್ನಾಟಕದ ಐವರು ಸೇರಿ 72 ಸಚಿವರ ಕೇಂದ್ರ ಸಂಪುಟ ಅಸ್ವಿತ್ವಕ್ಕೆ : ಇಲ್ಲಿದೆ ಸಂಪೂರ್ಣ ಪಟ್ಟಿ

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೊದಲ ಹಂತದಲ್ಲಿ 24 ರಾಜ್ಯಗಳ 72 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಏಳು ಮಾಜಿ ಮುಖ್ಯಮಂತ್ರಿಗಳು, ಏಳು ಮಹಿಳೆಯರು, 33 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ. ಇಲ್ಲಿದೆ ಕೇಂದ್ರ…

Read More

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ

ರಾಷ್ಟ್ರಪತಿ ಭವನದಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದರು ರಾಷ್ಟ್ರಪತಿ ದೌಪ್ರದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಬೋಧಿದರು. ಇಂದಿನಿಂದ ದೇಶದಲ್ಲಿ ಶುರುವಾಯ್ತು ನವೋದಯ.. ತ್ರಿವಿಕ್ರಮನಂತೆ ಮೂರನೇ ಬಾರಿಗೆ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ . ಇನ್ನು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್​ ಮಂತ್ರಿಯಾಗಿ ರಾಜನಾಥ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರನ ಹೆಸರಿನಲ್ಲಿ ರಾಜನಾಥ್ ಸಿಂಗ್ ಅವರು ಪ್ರಮಾಣವಚನ ಸ್ವೀಕರಿಸಿದರು.

Read More

BREAKING: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ‘ಜೆ.ಪಿ ನಡ್ಡಾ’ ರಾಜೀನಾಮೆ

ನವದೆಹಲಿ: ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಇಂದು ಬರಲಿದೆ. ಮೋದಿ 3ನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದೇ ಹೊತ್ತಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಜೆ.ಪಿ ನಡ್ಡಾ ರಾಜೀನಾಮೆ ನೀಡಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಜೆ.ಪಿ ನಡ್ಡಾ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಯಿಂದ ತೆರವಾದಂತ ಸ್ಥಾನಕ್ಕೆ ಯಾರನ್ನು ನೇಮಕ ಮಾಡುತ್ತಾರೆ ಎಂಬುದೇ ತೀವ್ರ ಕುತೂಹಲ ಮೂಡಿಸಿದೆ. ನವದೆಹಲಿ: ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ಇದೇ…

Read More

ಕಿಸಾನ್‌ ಸಮ್ಮಾನ್‌ ನಿಧಿ 2,000 ರೂ. ಹೆಚ್ಚಳ: ಇನ್ನು ಸಿಗೋದು 8,000 ರೂ

ರಾಜಸ್ಥಾನದ ರೈತರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಅಡಿಯಲ್ಲಿ ವಾರ್ಷಿಕವಾಗಿ ರೈತರಿಗೆ ನೀಡುವ 6 ಸಾವಿರ ರೂ.ವನ್ನು ರಾಜ್ಯ ಸರ್ಕಾರವು8  ಸಾವಿರ ರೂ.ಗೆ ಏರಿಕೆ ಮಾಡಿದೆ. ಈ ಮೂಲಕ ರಾಜ್ಯದ ರೈತರು ವರ್ಷಕ್ಕೆ 8 ಸಾವಿರ ರೂ. ಪಡೆಯಲಿದ್ದಾರೆ. ಈ ಕುರಿತು ತಮ್ಮ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ ಘೋಷಣೆ ಮಾಡಿದ್ದಾರೆ.

Read More