‘ಮೈಕ್ರೋಸಾಫ್ಟ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 6000 ನೌಕರರ ವಜಾ

ನವದೆಹಲಿ: ಟೆಕ್ ದಿಗ್ಗಜ ಮೈಕ್ರೋಸಾಫ್ಟ್ 6,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ವಜಾಗೊಳಿಸುವಿಕೆಯು ಎಲ್ಲಾ ಹಂತಗಳು ಮತ್ತು ಭೌಗೋಳಿಕ ಪ್ರದೇಶಗಳ ಮೇಲೆ ಪರಿಣಾಮ ಬೀರುವ ನಿರೀಕ್ಷೆಯಿದೆ. ಆದರೆ ನಿರ್ವಹಣಾ ಮಟ್ಟವನ್ನು ಕಡಿಮೆ ಮಾಡುವತ್ತ ಗಮನಹರಿಸುತ್ತದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಮಂಗಳವಾರ ಸೂಚನೆಗಳನ್ನು ಹೊರಡಿಸಲಾಗಿದೆ. ಮೈಕ್ರೋಸಾಫ್ಟ್ ಎರಡು ವಾರಗಳ ಹಿಂದೆ ಜನವರಿಯಿಂದ ಮಾರ್ಚ್ ಅವಧಿಯ ದೃಢವಾದ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸಿತು. ಇದು ತನ್ನ ಕೌಡ್ ಕಂಪ್ಯೂಟಿಂಗ್ ಮತ್ತು ಕೃತಕ ಬುದ್ಧಿಮತ್ತೆ ವ್ಯವಹಾರಗಳಲ್ಲಿ ಬಲವಾದ ಕಾರ್ಯಕ್ಷಮತೆಯಿಂದ ಪ್ರೇರಿತವಾಗಿದೆ.

Read More

 ಪಾಕಿಸ್ತಾನದಲ್ಲಿರುವ ಉಗ್ರರನ್ನು ಸದೆಬಡೆಯಲು ಭಾರತ ‘ಲಕ್ಷ್ಮಣ ರೇಖೆ’ ಎಳೆದಿದೆ : ಪ್ರಧಾನಮಂತ್ರಿ ನರೇಂದ್ರ ಮೋದಿ

ಪಂಜಾಬ್ : ಆಪರೇಷನ್ ಸಿಂಧೂರ್ ಬಳಿಕ ಇಂದು ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಬೇಟಿ ನೀಡಿದ್ದಾರೆ. ಪಂಜಾಬಿನ ಆದಂಪುರ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೈನಿಕರನ್ನು ಉದ್ದೇಶಿಸಿ ಭಾಷಣ ಮಾಡಿದರು. ಮತ್ತೊಮ್ಮೆ ಉಗ್ರರು ಏನಾದರೂ ದಾಳಿ ಮಾಡಿದರೆ ಭಾರತದ ಪ್ರತಿ ದಾಳಿ ಇನ್ನೂ ಘೋರವಾಗಿರುತ್ತದೆ. ಪಾಕಿಸ್ತಾನದ ನ್ಯೂಕ್ಲಿಯರ್ ಬೆದರಿಕೆಗೆ ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಇಡೀ ವಿಶ್ವವೇ ಭಾರತದ ಬೆಂಬಲಕ್ಕೆ ನಿಂತಿದೆ. ಉಗ್ರರು ಪಾಕಿಸ್ತಾನದೊಳಗೆ ಅಡಗಿದರು ಸಹ ನುಗ್ಗಿ ಹೊಡೆಯುತ್ತೇವೆ…

Read More

ಆದಂಪುರ ಏರ್ ಬೇಸ್ ಗೆ ಪ್ರಧಾನಿ ಮೋದಿ ಭೇಟಿ : ಸೈನಿಕರೊಂದಿಗೆ ಸಂವಾದ

ಆದಂಪುರ : ಇಂದು ಬೆಳ್ಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ನ ಆದಂಪುರ ಏರ್ ಬೇಸ್ ಗೆ ಭೇಟಿ ನೀಡಿ, ಸೈನಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಅದಮ್ಪುರ ವಾಯುನೆಲೆಗೆ ತೆರಳಿದರು. ವಾಯುಪಡೆಯ ಸಿಬ್ಬಂದಿ ಅವರಿಗೆ ಮಾಹಿತಿ ನೀಡಿದರು ಮತ್ತು ಅವರು ಧೈರ್ಯಶಾಲಿ ಯೋಧರೊಂದಿಗೆ ಸಂವಾದ ನಡೆಸಿದರು. ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಇಂದು ಬೆಳಿಗ್ಗೆ, ನಾನು ಆದಂಪುರ ವಾಯುಪಡೆ ನಿಲ್ದಾಣಕ್ಕೆ ಹೋಗಿ ನಮ್ಮ ವೀರ…

Read More

14 ವರ್ಷದ ಟೆಸ್ಟ್ ಕ್ರಿಕೆಟ್ ಜರ್ನಿಗೆ ವಿರಾಟ್ ಕೊಹ್ಲಿ ವಿದಾಯ

ಮುಂಬೈ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ 14 ವರ್ಷಗಳ ಟೆಸ್ಟ್ ಕ್ರಿಕೆಟ್ ಜರ್ನಿಗೆ ಕೊಹ್ಲಿ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾ ಖಾತೆಯಲ್ಲಿ ಭಾವುಕ ಪೋಸ್ಟ್‌ವೊಂದನ್ನ ಹಂಚಿಕೊಂಡಿರುವ ಅವರು, “ನಾನು ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬ್ಯಾಗಿ ಬ್ಲೂ ಧರಿಸಿ 14 ವರ್ಷಗಳಾಗಿವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಪ್ರಯಾಣವು ನನ್ನನ್ನು ಇಷ್ಟು ದೊಡ್ಡ ಮಟ್ಟಕ್ಕೆ ತಂದು ನಿಲ್ಲಿಸುತ್ತದೆ ಅಂತ…

Read More

ಪಾಕಿಸ್ಥಾನ ಭಯೋತ್ಪಾದಕರನ್ನು ಹಸ್ತಾಂತರಿಸಿದರೆ ಮಾತ್ರ ಮಾತುಕತೆ

ನವದೆಹಲಿ: ಪಾಕಿಸ್ಥಾನ ಮತ್ತೆ ದಾಳಿ ನಡೆಸಿದರೆ ತಕ್ಕ ತಿರುಗೇಟು ನೀಡುತ್ತೇವೆ. ಆ ಕಡೆಯಿಂದ ಗುಂಡು ಹಾರಿಸಿದರೆ ಇಲ್ಲಿಂದಲೂ ಗುಂಡು ಸಿಡಿಯುತ್ತದೆ. ನಮಗೆ ಯಾರ ಮಧ್ಯಸ್ಥಿಕೆ ಕೂಡ ಬೇಕಾಗಿಲ್ಲ ಎಂದು ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್​ ಜೊತೆ ಪಾಕ್ ಕದನ ವಿರಾಮ ಉಲ್ಲಂಘಿಸಿದ ಬಳಿಕ ಮೋದಿ ಫೋನ್ ಮೂಲಕ ಮಾತುಕತೆ ನಡೆಸಿ ಭಾರತದ ನಿಲುವನ್ನು ತಿಳಿಸಿದ್ದಾರೆ. ಕಾಶ್ಮೀರದ ಬಗ್ಗೆ ಭಾರತ ಸ್ಪಷ್ಟವಾದ ನಿಲುವನ್ನು ಹೊಂದಿದೆ. ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮರಳಿ…

Read More

ಕೊನೆಗೂ ಪುಲ್ವಾಮಾ ಭಯೋತ್ಪಾದಕ ದಾಳಿ ತನ್ನದೇ ಎಂದು ಒಪ್ಪಿಕೊಂಡ ಪಾಕಿಸ್ತಾನ

ನವದೆಹಲಿ : ಪಹಲ್ಗಾಂ ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಈಗಾಗಲೇ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿ ಅನೇಕ ಉಗ್ರರನ್ನು ಹತ್ಯೆಗೈದಿದೆ. ಇದೀಗ ನಿನ್ನೆ ಸಂಜೆ 5 ಗಂಟೆಯಿಂದಲೇ ಪಾಕಿಸ್ತಾನ ಭಾರತಕ್ಕೆ ಕರೆ ಮಾಡಿ ಕದನ ವಿರಾಮಕ್ಕೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಇದರ ಮಧ್ಯ 2019ರಲ್ಲಿ ನಡೆದ ಪುಲ್ವಾಮ ದಾಳಿಯ ಕುರಿತು ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಪುಲ್ವಾಮಾ ಭಯೋತ್ಪಾದಕ ದಾಳಿ…

Read More

ಕೊನೆಗೂ ಕದನ ವಿರಾಮ ಘೋಷಿಸಿದ ಪಾಕಿಸ್ತಾನ : ವಿದೇಶಾಂಗ ಸಚಿವ ಇಶಾಕ್ ಧಾರ್ ಅಧಿಕೃತ ಮಾಹಿತಿ

ನವದೆಹಲಿ : ಕೊನೆಗೂ ಪಾಕಿಸ್ತಾನ ಕದನ ವಿರಾಮವನ್ನು ಘೋಷಿಸಿದೆ. ಪಲ್ಗಾಂ ನಲ್ಲಿ ನಡೆದ ಉಗ್ರರ ದಾಳಿಯ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ಮಾಡಿತ್ತು. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನದ ಮೇಲೆ ನಿರಂತರವಾಗಿ ಭಾರತ ದಾಳಿ ನಡೆಸಿದ್ದು ಇದೀಗ ಪಾಕಿಸ್ತಾನ ಕೊನೆಗೂ ಕದನ ವಿರಾಮ ಘೋಷಿಸಿದೆ. ಈ ಕುರಿತು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಧಾರ್ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾವು ಕದನ ವಿರಾಮಕ್ಕೆ ಸಿದ್ದರಿದ್ದೇವೆ ಎಂದು…

Read More

‘ಭಾರತೀಯ ಸೇನೆಗೆ ಸೆಲ್ಯೂಟ್, ನಾವು ಒಗ್ಗಟ್ಟಿನಿಂದ ಇರುತ್ತೇವೆ’- ವಿರಾಟ್ ಕೊಹ್ಲಿ

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಗಮನಿಸಿದ ಬಿಸಿಸಿಐ 2025 ರ ಐಪಿಎಲ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಬೆನ್ನಲ್ಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಭಾರತೀಯ ಸೇನೆ ಪರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ”ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿರುವುದಕ್ಕಾಗಿ ಭಾರತೀಯ ಸೇನೆಗೆ ಸೆಲ್ಯೂಟ್. ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮ ವೀರ ಯೋಧರ ಅಚಲ ಧೈರ್ಯ, ಅವರು ಮತ್ತು ಅವರ ಕುಟುಂಬದವರು ನಮ್ಮ ದೇಶಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ಸದಾ…

Read More

ಪಾಕಿಸ್ತಾನದ JF-17 ಜೆಟ್ ವಿಮಾನವನ್ನು ಹೊಡೆದುರುಳಿಸಿದೆ ಭಾರತದ ಆಕಾಶ್ ಮಿಸೈಲ್

ನವದೆಹಲಿ: ಪಹಲ್ಗಾಮ್‌ನಲ್ಲಿ ಇಸ್ಲಾಮಿಕ್ ಉಗ್ರರು ನಡೆಸಿದ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಆಪರೇಷನ್ ಸಿಂದೂರ್‌ ನಡೆಸಿ 9 ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಸದೆಬಡಿದಿತ್ತು. ಇದರ ಬೆನ್ನಲ್ಲೇ ಪುನಃ ಭಾರತದ ಹಲವು ನಗರಗಳ ಮೇಲೆ ದಾಳಿಗೆ ವಿಫಲ ಯತ್ನ ಮಾಡಿತ್ತು. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಪಾಕಿಸ್ತಾನದ ಮೇಲೆ ಭಾರತ ದಾಳಿ ಮುಂದುವರಿಸಿದ್ದು ಇದೀಗ ಜಮ್ಮು ಕಾಶ್ಮೀರದ ಪಠಾಣ್ ಕೋಟ್ ನಲ್ಲಿ ಪಾಕಿಸ್ತಾನದ JF-17 ಜೆಟ್ ವಿಮಾನವನ್ನು ಭಾರತದ ಆಕಾಶ್…

Read More

ಪಾಕ್ ಪರ ವಿಜಯಪುರದ ವಿದ್ಯಾರ್ಥಿನಿಯಿಂದ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್; ದೂರು ದಾಖಲು

ವಿಜಯಪುರ: ಪೆಹಲ್ಗಾಮ್‌ ಭಯೋತ್ಪಾದಕ ದಾಳಿ ಮೂಲಕ ಭಾರತವನ್ನು ಕೆಣಕಿದ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.35 ನಿಮಿಷ ಡ್ರೋನ್ ದಾಳಿ ನಡೆಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನೆ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದ ಮಿಸೈಲ್ಗಳನ್ನು S-400 ಮಿಸೈಲ್ ಜೆಟ್ ಹೊಡೆದುರುಳಿಸಿದೆ. ಆದರೆ ಇಲ್ಲೊಬ್ಬಳು ಪಾಕ್ ಪರ ಬ್ಯಾಟ್ ಬಿಸಿದ್ದಾಳೆ.ಕರ್ನಾಟದಲ್ಲಿ ಪಾಕ್ ಪ್ರೇಮಿಗಳು ಕೂಡ ಬಾಲ ಬಿಚ್ಚಿದ್ದಾರೆ. ವಿಜಯಪುರದ ಅಲ್ ಅಮೀನ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಪಾಕಿಸ್ತಾನದ ಜನರ ಪರ ಹಾಗೂ ಅವರ ಸುರಕ್ಷತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೇಶ ವಿರೋಧಿ ಪೋಸ್ಟ್…

Read More