ಮುಲ್ಕಿ: ಅಂಗಾರಗುಡ್ಡೆಯಲ್ಲಿ ಸುಲಿಗೆ ಯತ್ನ – ಆರೋಪಿಗಳಿಂದ ಹಲ್ಲೆ
ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾರಗುಡ್ಡೆ ಪ್ರದೇಶದಲ್ಲಿ ಸುಲಿಗೆ ಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗಾರಗುಡ್ಡೆ ನಿವಾಸಿ ಅಬೂಬಕ್ಕರ್ ಅವರಿಂದ ಸುಲಿಗೆ ಪಡೆಯುವ ಉದ್ದೇಶದಿಂದ ಮೂವರು ಆರೋಪಿಗಳು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಬೂಬಕ್ಕರ್ ಅವರ ಬಳಿ ಮೂರು ಜೋಡಿ ಎಮ್ಮೆ, ಐದು ಹಾಲು ಹಸುಗಳು ಹಾಗೂ ಇನ್ನಿತರ ಎತ್ತು–ಎಮ್ಮೆಗಳನ್ನು ಹೊಂದಿದ್ದು, ಇತ್ತೀಚೆಗೆ ಅವರ ಎಮ್ಮೆಗಳು ಕಂಬಳ ಸ್ಪರ್ಧೆಯಲ್ಲಿ ಬಹುಮಾನ ಗೆದ್ದಿದ್ದವು. ಇದನ್ನೇ ಗುರಿಯಾಗಿಸಿಕೊಂಡು, ಪಕ್ಕದ ಗ್ರಾಮದ ಮೂವರು ಆರೋಪಿಗಳು ಸುಲಿಗೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ….

