ಮಂಗಳೂರು: ದೈವಗಳ ಮೂರ್ತಿ, ಪೂಜಾ ಸಾಮಗ್ರಿ ಕಳ್ಳತನ ಪ್ರಕರಣ; ಇಬ್ಬರ ಬಂಧನ, ಸ್ವತ್ತು ವಶ

ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಯಶೋದ ಕ್ಲಿನಿಕ್ ಸಮೀಪದ ಮನೆಯೊಂದರಲ್ಲಿ ನಡೆದ ದೈವಗಳ ಮೂರ್ತಿ ಹಾಗೂ ಪೂಜಾ ಪರಿಕರಗಳ ಕಳ್ಳತನ ಪ್ರಕರಣವನ್ನು ಭೇದಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಳಾಯಿ ಗ್ರಾಮದ ಅಮಿತಾ ಅವರ ದೂರಿನಂತೆ ತಾಯಿ ಮನೆಯಲ್ಲಿ ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು ಆ ಮನೆಯಲ್ಲಿ ಯಾರೂ ವಾಸವಿರದೇ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು ಎನ್ನಲಾಗಿದೆ. ದಿನಾಂಕ: 26-12-2025 ರಂದು…

Read More

ಮಂಗಳೂರು: ಬೌನ್ಸರ್ ಗಳಿದ್ದ ಕಾರು ಕೊಟ್ಟಾಯಂನಲ್ಲಿ ಅಪಘಾತ- ಓರ್ವ ಸಾವು..!!

ಮಂಗಳೂರು: ಕೇರಳದ ಕೊಟ್ಟಾಯಂನಲ್ಲಿ ಕಾರೊಂದು ಅಪಘಾತಕ್ಕೀಡಾಗಿ ಸುರತ್ಕಲ್ ಕಾನ ನಿವಾಸಿ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿರುವುದು ವರದಿಯಾಗಿದೆ. ಮೂಲತಃ ಮುಲ್ಕಿ ತಾಲೂಕಿನ ಅಂಗರಗುಡ್ಡೆ ನಿವಾಸಿ, ಪ್ರಸಕ್ತ ಕಾನದ ಚಿರಾಗ್ ಫ್ಲ್ಯಾಟ್ ನಲ್ಲಿ ವಾಸವಿದ್ದ ಶಾನವಾಝ್ ಯಾನೆ ಶಮೀಮ್(32) ಮೃತಪಟ್ಟವರು. ಇವರ ಜೊತೆ ಕಾರಿನಲ್ಲಿದ್ದ ಕಾಟಿಪಳ್ಳದ ಸಿರಾಜ್, ಕಾನ ನಿವಾಸಿ ಅಶ್ಫಾಕ್, ಸೂರಿಂಜೆ ನಿವಾಸಿ ಶಬೀರ್ ಹಾಗೂ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಸಿರಾಜ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಶಮೀಮ್…

Read More

ಬೃಹತ್ ಡ್ರಗ್ಸ್‌ ಜಾಲ ಭೇದಿಸಿದ ಪುತ್ತೂರು ಪೊಲೀಸರು : 6.50 ಲ.ರೂ. ಮೌಲ್ಯದ ಮಾದಕ ವಸ್ತು ವಶ

ಪುತ್ತೂರು : ಬೆಟ್ಟಂಪಾಡಿ, ಇರ್ದೆ, ರೆಂಜ ಹಾಗೂ ಅರ್ಲಪದವು ಪರಿಸರದಲ್ಲಿ ಎಂಡಿಎಂಎ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಪುತ್ತೂರಿನ ಮೊಹಮ್ಮದ್ ಹರ್ಷದ್, ಮಹಮ್ಮದ್ ಆರೀಶ್, ಇಬ್ರಾಹಿಂ ಅಶ್ರಫ್ ಹಾಗೂ ಅವರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಬಂಟ್ವಾಳದ ಮುಸ್ತಾಫ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 50,000 ರೂ. ಮೌಲ್ಯದ 6.39 ಗ್ರಾಂ ಎಂಡಿಎಂಎ ಹಾಗೂ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ಡ್ರಗ್ಸ್ ಮಾಫಿಯಾದ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ವಶಪಡಿಸಿಕೊಂಡ…

Read More

ರಾಜೀವ್‌ ಗೌಡಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ ಮಂಗಳೂರಿನ ಉದ್ಯಮಿ ಅರೆಸ್ಟ್‌..!!

ಮಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜೀವ್ ಗೌಡ ಬಂಧಿಸಲಾಗಿದೆ. ಈ ಬೆನ್ನಲ್ಲೇ ಅವರು ತಲೆ ಮರೆಸಿಕೊಳ್ಳೋದಕ್ಕೆ ಸಹಾಯ ಮಾಡಿದ ಆರೋಪದಡಿ ಮಂಗಳೂರಿನ ಉದ್ಯಮಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರಿಗೆ ತಲೆ ಮರೆಸಿಕೊಳ್ಳೋದಕ್ಕೆ ಸಹಾಯ ಮಾಡಿದ ಆರೋಪದಡಿ ಉದ್ಯಮಿ ಮೈಕಲ್ ಜೊಸೇಫ್ ರೆಗೋ ಅವರನ್ನು ಬಂಧಿಸಲಾಗಿದೆ. ಪಚ್ಚನಾಡಿ ಬಳಿಯ ಈತನಿಗೆ ಸೇರಿದ್ದ ಜೆ.ಕೆ ಫಾರ್ಮ್ ಹೌಸ್ ನಲ್ಲಿ ರಾಜೀವ್ ಗೌಡ ಅವರನ್ನು ತಲೆಮರೆಸಿಕೊಳ್ಳೋದಕ್ಕೆ ನೆರವಾಗಿದ್ದರು. ಇದಲ್ಲದೇ ಮಂಗಳೂರಿನ…

Read More

ಮಂಗಳೂರು: ಕೆಲಸ ಸಿಗದ ಕಾರಣ ಆತ್ಮಹತ್ಯೆ ಮಾಡಲು ಮರವೇರಿದ ಯುವಕ..!

ಮಂಗಳೂರು: ಕೆಲಸ ಸಿಗದ ಹಿನ್ನೆಲೆಯಲ್ಲಿ ಯುವಕನೊಬ್ಬ ಮರವೇರಿ ಕುಳಿತು, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಾ ಕೆಲಹೊತ್ತು ಆತಂಕ ಸೃಷ್ಟಿಸಿರುವ ಘಟನೆ ನಗರದ ಕರಂಗಲ್ಪಾಡಿಯಲ್ಲಿ ಸೋಮವಾರ ಸಂಜೆ ನಡೆದಿದೆ. ಬಾಗಲಕೋಟೆಯ ಭೀಮಪ್ಪ(24) ಮರ ಏರಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ತಿಳಿದು ಬಂದಿದೆ. ಪೊಲೀಸರು, ಅಗ್ನಿಶಾಮಕ ದಳದವರು, ಸ್ಥಳೀಯರ ನೆರವಿನಿಂದ ಆತನನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಉದ್ಯೋಗ ಹುಡುಕಿಕೊಂಡು ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಈತ ಕೆಲಸ ಸಿಗದ ಕಾರಣಕ್ಕಾಗಿ ಮನನೊಂದು ಮರವೇರಿ ಆತ್ಮಹತ್ಯೆ ಮಾಡುವ ಯೋಚನೆ ಮಾಡಿದ್ದ ಎನ್ನಲಾಗಿದೆ. ಮರದಿಂದ ಇಳಿದ ಮೇಲೆ…

Read More

ಕಾಪು: ಕುಲಾಲ ಕ್ರೀಡೋತ್ಸವ-2026 – ಲ| ಅನಿಲ್ ದಾಸ್ ಭಾಗಿ

ಕುಲಾಲ ಸಂಘ (ರಿ.) ಕಾಪು ವಲಯ ಇವರ ಆಶ್ರಯದಲ್ಲಿ ಉಡುಪಿ ಹಾಗೂ ದ‌.ಕ ಜಿಲ್ಲಾ ಮಟ್ಟದ ಕುಲಾಲ ಸಮಾಜದ ಭಾಂಧವರಿಗಾಗಿ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಕೂಟವು ದಿನಾಂಕ ಡಿ.25ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಕಾಪು ಕುಲಾಲ ಸಂಘದವರು ನಡೆಸಿದಂತಹ ಜಿಲ್ಲಾ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಕುಲಾಲ/ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ.ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳಾ ಮಣಿಗಳು ಪಡಕೊಂಡಿದ್ದಾರೆ . .ಕಾರ್ಯಕ್ರಮದಲ್ಲಿ ಕಾಪು…

Read More

ಗಂಭೀರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಎಚ್ಚರ ಇರಲಿ : ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಜಾಮೀನು ಸಂದರ್ಭ ಭದ್ರತೆ (ಶ್ಯೂರಿಟಿ)ಯನ್ನು ಒದಗಿಸುವವರು ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾ ಗಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ, ನಗರದಲ್ಲಿ ಕಳೆದ 6 ತಿಂಗಳಿನಿಂದ ದೀರ್ಘಾವಧಿಯ ಗಂಭೀರ ಪ್ರಕರಣಗಳಾದ ಕೊಲೆ, ಮತೀಯ ಗಲಭೆ ವೇಳೆ ಕಲ್ಲು ತೂರಾಟ, ಮತೀಯ ಕೊಲೆ ಯತ್ನ, ಅತ್ಯಾಚಾರ, ಗುಂಪು ಅತ್ಯಾಚಾರ ಮೊದಲಾದ…

Read More

ಕಡಬ: ತಂದೆಗೆ ಚೂರಿಯಿಂದ ಇರಿದು ಮಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ..!!

ಕಡಬ: ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ ಮಗನೊಬ್ಬ, ತಂದೆಗೆ ಚೂರಿಯಿಂದ ಇರಿದು ಬಳಿಕ ತಾನೂ ಕೋವಿಯಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಶನಿವಾರ ಸಂಜೆ ನಡೆದಿದೆ. ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಅವರ ಪುತ್ರ, ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಮೋಕ್ಷ ಮೃತಪಟ್ಟ ದುರ್ದೈವಿ. ಘಟನೆಯಲ್ಲಿ ತಂದೆ ವಸಂತ ಅಮೀನ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ವಿವರ: ಮೂಲತಃ…

Read More

ಕನ್ಯಾನ ಗ್ರಾಮದಲ್ಲಿ ಮನೆಗೆ ಬೆಂಕಿ ಬಿದ್ದ ಬಡ ಕುಟುಂಬಕ್ಕೆ ನಿವೇಶನ ಖರೀದಿಗೆ ಸಹಾಯಧನ ಹಸ್ತಾಂತರ

ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದಕನ್ಯಾನ ಗ್ರಾಮದಲ್ಲಿ ಬೆಂಕಿಗೆ ಅಹುತಿಯಾಗಿ ಮನೆ ನಷ್ಟಗೊಂಡ ಕುಟುಂಬದವರಿಗೆ ಜಾಗ ಮತ್ತು ಮನೆ ಖರೀದಿಗೆ ಈಗಾಗಲೇ ಸಮಾಜದ ಬಂದುಗಳಲ್ಲಿ ವಿನಂತಿ ಮಾಡಿ ಬಂದಿರುವ ನಗದು ಹಾಗೂ ಕುಟುಂಬದವರಿಂದ ಸಂಗ್ರಹಣೆ ಆಗಿರುವ ಹಣವನ್ನು ಒಟ್ಟು ಸೇರಿಸಿ ₹. 1’64, 000 ( ಒಂದು ಲಕ್ಷ ಅರುವತ್ತ ನಾಲ್ಕು ಸಾವಿರ ) ಮೊತ್ತವನ್ನು ಸೂಕ್ತ ಕರಾರು ಪತ್ರವನ್ನು ಮಾಡಿ. ಜಾಗ ಮತ್ತು…

Read More

ಬಂಟ್ವಾಳ: ವಾಹನಕ್ಕೆ ಪಡೆದ ಸಾಲ ಸಂದಾಯವಾಗಿದೆ ಎಂದು ನಕಲಿ ಪತ್ರ ತಯಾರಿಸಿದ ಖದೀಮರು ..!!

ಬಂಟ್ವಾಳ : ವಾಹನವೊಂದಕ್ಕೆ ಬ್ಯಾಂಕ್‌ನಿಂದ ತೆಗೆದ ಲಕ್ಷಾಂತರ ರೂ. ಸಾಲ ಮರುಪಾವತಿಸದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಫೋರ್ಜರಿ ಸಹಿಯನ್ನು ಲೆಟರ್ ಹೆಡ್‌ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ. ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವನ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನ್ವೀರ್ ಅಶೋಕ್ ಲೇಲ್ಯಾಂಡ್‌…

Read More