ಮಂಗಳೂರು: ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ‘ಕುಲಾಲ ಭವನ’ ಉದ್ಘಾಟನೆ

ಸುಸಜ್ಜಿತ ಕುಲಾಲ ಭವನವನ್ನು ಸುಮಿತ್ರಾ ರಾಜು ಸಾಲಿಯಾನ್ ಸಭಾಂಗಣ, ಯಶೋಧಾ ಬಾಬು ಸಾಲಿಯಾನ್ ಬಂಟ್ವಾಳ ವೇದಿಕೆ, ಸರಸ್ವತಿ ವಿಶ್ವನಾಥ ಬಂಗೇರ ಕುಳಾಯಿ (ಬಾಲ್ಯನಿ), ನಮ್ರತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಸಾವಿತ್ರಿ ಪಿ.ಕೆ. ಸಾಲಿಯಾನ್ ವೇದಿಕೆ, ವಸಂತಿ ಸದಾಶಿವ ಬಂಜನ್ ಕಚೇರಿ ಹಾಗೂ ಡಾ|ಸುರೇಖಾ ರತನ್ ಕುಲಾಲ್ ಮುಂಬಯಿ ಆಡಳಿತ ಕಚೇರಿ ಉದ್ಘಾಟನೆ ನೆರವೇರಿಸಿದರು. ಮಂಗಳೂರು: ಕುಲಾಲಸಂಘ ಮುಂಬಯಿ ವತಿಯಿಂದ ಮಂಗಳಾದೇವಿ ದೇವಸ್ಥಾನದ ಸನಿಹ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯ ಹೊಂದಿದ ಬಹುಕೋಟಿ ವೆಚ್ಚದ ‘ಕುಲಾಲ ಭವನ ರವಿವಾರ…

Read More

ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರ್ ಶಾಲಾ ವಾರ್ಷಿಕೋತ್ಸವದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರಿಗೆ ಸನ್ಮಾನ

ಆನಂದಾಶ್ರಮ ಪ್ರೌಢಶಾಲೆ ಕೋಟೆಕಾರ್ ಸೋಮೇಶ್ವರ ಇದರ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್ ರವರನ್ನು ಶಾಲಾ ಆಡಳಿತ ವರ್ಗ ಹಾಗೂ ಮುಖ್ಯ ಅತಿಥಿಗಳು ಸನ್ಮಾನಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮತ್ತು ಶಾಲಾ ಮುಖ್ಯೋಪಾಧ್ಯಾಯರು, ಶ್ರೀ ಗುರು ಮೂರ್ತಿ, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಪೋಷಕರು, ಗಣ್ಯರು ಉಪಸ್ಥಿತರಿದ್ದರು.

Read More

ಸುರತ್ಕಲ್‌-ನಂತೂರು-ಬಿ.ಸಿ ರೋಡ್‌ ಹೆದ್ದಾರಿ ವ್ಯಾಪ್ತಿ NHAI ಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ

ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನಿರಂತರ ಪ್ರಯತ್ನದ ಫಲವಾಗಿ ನವ ಮಂಗಳೂರು ಬಂದರು ವ್ಯಾಪ್ತಿಗೆ ಸೇರಿದ ಸುರತ್ಕಲ್-ನಂತೂರು-ಬಿಸಿ ರೋಡ್ ಬಂದರು ಸಂಪರ್ಕ ರಸ್ತೆಯ ನಿರ್ವಹಣೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಅನುಮೋದನೆ ನೀಡಿದೆ. ಆ ಮೂಲಕ ಹಲವು ವರ್ಷಗಳಿಂದ ದಕ್ಷಿಣ ಕನ್ನಡದ ಸಂಪರ್ಕ ಜಾಲ ಸುಧಾರಿಸುವಲ್ಲಿ ಪ್ರಮುಖ ಬೇಡಿಕೆಯಾಗಿದ್ದ ಎನ್‌ಎಂಪಿಟಿ ವ್ಯಾಪ್ತಿಯ ಈ ಹೆದ್ದಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಕ್ಯಾ. ಚೌಟ…

Read More

ಬೆಳ್ತಂಗಡಿ: ದ್ವಿಚಕ್ರ ವಾಹನ ಕಳವು ಪ್ರಕರಣ- ಇಬ್ಬರು ಆರೋಪಿಗಳ ಬಂಧನ-ಬೈಕ್ ವಶ..!!

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಾನೂರು ಶ್ರೀ ಗುರು ನಾರಾಯಣ ವೃತ್ತದ ಬಳಿ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳವು ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದು ಬಂದಿದೆ ಕೇಡಿ ನಿವಾಸಿ ಸಂಪತ್ ಕುಮಾರ್ (28) ಅವರು ದಿನಾಂಕ 10.11.2025 ರಂದು ರಾತ್ರಿ KA 18-J-6348 ನಂಬರಿನ ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಬಳಿಕ ಬೈಕ್ ಕಳವುಗೊಂಡಿದ್ದು‌, ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಮೋ ಪ್ರಕರಣ ಸಂ 88/2025 ಕಲಂ 3೦3(2) ಬಿಎನ್‌…

Read More

ಮಂಗಳೂರು: ಕುಂಭ ಕಲಾವಳಿ – 2026 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ

ಮಂಗಳೂರು: ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ ಮತ್ತು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ಕುಂಭ ಕಲಾವಳಿ – 2026 ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ದೇವಿ ದೇವಸ್ಥಾನ ಪಾಂಡೇಶ್ವರದಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಮಾಡಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಕುಂಭ ಕಲಾವಳಿ ಕಾರ್ಯಕ್ರಮವು ದಿನಾಂಕ ಜನವರಿ 4 , 2026 ಆದಿತ್ಯ ವಾರ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಪದಗ್ರಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ…

Read More

ಬೆಳ್ತಂಗಡಿ : ಕಾರು – ಸ್ಕೂಟರ್ ನಡುವೆ ಅಪಘಾತ..! ವಿದ್ಯಾರ್ಥಿನಿ ಸಾವು

ಬೆಳ್ತಂಗಡಿ : ಕಾರು ಹಾಗೂ ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರೆ ಓರ್ವರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಎಂಬಲ್ಲಿ ಸಂಭವಿಸಿದೆ. ಸ್ಕೂಟರ್ ಸವಾರೆ, ಕಡಬ ನಿವಾಸಿ ಸುನಿಲ್ ಎಂಬವರ ಪುತ್ರಿ ಅನನ್ಯಾ (21) ಮೃತಪಟ್ಟವರು. ಸ್ಕೂಟರ್‌ನ ಇನ್ನೋರ್ವ ಸವಾರೆ, ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಪ್ರಣಮ್ಯ ಸ್ಟುಡಿಯೋ ಮಾಲಕರ ಪುತ್ರಿ ಪೃಥ್ವಿ ರಾವ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇಬ್ಬರೂ ಮಂಗಳೂರು ಕಾಲೇಜಿನ ಇಂಜಿನಿಯರಿಂಗ್ ಅಂತಿಮ…

Read More

ಉಡುಪಿ: ವೇಷ ಕಳಚುವ ಮುನ್ನವೇ ಮಹಿಷಾಸುರ ಕಲಾವಿದ ಹೃದಯಾಘಾತದಿಂದ ಮೃತ್ಯು!!

ಉಡುಪಿ: ಮಂದಾರ್ತಿ ಮೇಳದ ಬಣ್ಣದ ವೇಷಧಾರಿ ಈಶ್ವರ ಗೌಡ ನೆಮ್ಮಾರ್ ಮಹಿಷಾಸುರ ಪಾತ್ರ ನಿರ್ವಹಿಸಿದ ಬಳಿಕ ಬಣ್ಣ ತೆಗೆಯುವ ಮೊದಲೇ ಹೃದಯಾಘಾತದಿಂದ ಕುಸಿದು ನಿಧನ ಹೊಂದಿದ ಘಟನೆ ಬುಧವಾರ ಮಧ್ಯ ರಾತ್ರಿ ಕುಂದಾಪುರದ ಸೌಡ ಸಮೀಪ ನಡೆದಿದೆ. 2ನೇ ಮೇಳದ ಪ್ರತಿಭಾನ್ವಿತ ಕಲಾವಿದ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿದ್ದರು. ದೇವಿ ಮಾಹಾತ್ಮ ಪ್ರಸಂಗದಲ್ಲಿ ಮಹಿಷಾಸುರ ಪಾತ್ರ ಕೊನೆಯಾಗುತ್ತಿದ್ದಂತೆ ಸಂಪೂರ್ಣ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ಕುಸಿದಿದ್ದಾರೆ. ಸಹಕಲಾವಿದರು ಆಸ್ಪತ್ರೆಗೆ ಸಾಗಿಸುವ ಮುನ್ನವೇ ಇಹಲೋಕ ತ್ಯಜಿಸಿದ್ದರು. ಈಶ್ವರ ಗೌಡ…

Read More

 ಬಂಟ್ವಾಳ: ಬುರ್ಕಾ ಹಾಕಿ ಟೆಕ್ಸ್ ಟೈಲ್ಸ್ ಮಾಲಿಕನಿಗೆ ಪತ್ನಿಯಿಂದಲೇ ಚೂರಿ ಇರಿತ, ಪತಿ ಗಂಭೀರ‍..!!

ಬಂಟ್ವಾಳ : ಜವುಳಿ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡಿನಲ್ಲಿ ಬುಧವಾರ ರಾತ್ರಿ ನಡೆದಿದೆ. ಜವುಳಿ ಅಂಗಡಿ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಎಂಬವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸಮೀಪ ಇರುವ ಸೋಮಯಾಜಿ ಟೆಕ್ಸ್‌ಟೈಲ್ಸ್‌ ಮಳಿಗೆಗೆ ನುಗ್ಗಿದ ಜ್ಯೋತಿ ಕ್ಯಾಶ್ ಕೌಂಟರ್‌ನಲ್ಲಿ ಕುಳಿತಿದ್ದ ಗಂಡನಿಗೆ ಪತ್ನಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಗುರುತು ಸಿಗದಂತೆ…

Read More

ಮಂಗಳೂರು:19 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಸುಖಾನಂದ ಶೆಟ್ಟಿ ಕೊಲೆ ಆರೋಪಿ ಬಂಧನ

ಮಂಗಳೂರು: ಹೊರವಲಯ ಸುರತ್ಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಸುಖಾನಂದ್‌ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ಸಲಾಂ ಅದ್ದೂರ್ ನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 1, 2006 ರಂದು, ಸುರತ್ಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ ಶೆಟ್ಟಿಯನ್ನು ಕಬೀರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದರು, ನಂತರ ಅವರು ತಲೆಮರೆಸಿಕೊಂಡಿದ್ದರು. ಕಬೀರ್ ಅವರ ಸಹೋದರರಾದ ಲತೀಫ್ ಅಲಿಯಾಸ್ ಅದ್ದೂರ್ ಲತೀಫ್ ಮತ್ತು ಅಬ್ದುಲ್ ಸಲಾಂ…

Read More

ದೇಶದ ಟಾಪ್ 10 ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ ಮಂಗಳೂರಿನ ಜಯಶ್ರೀ ಉಳ್ಳಾಲ್

ಹುರುನ್ ರೀಸರ್ಚ್ ಪ್ರಕಟಿಸಿದ ಇಂಡಿಯಾ ರಿಚ್ ಲಿಸ್ಟ್ 2025 ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಮಂಗಳೂರಿನಲ್ಲಿ ಜನಿಸಿದ ಟೆಕ್ ಲೀಡರ್ ಜಯಶ್ರೀ ಉಳ್ಳಾಲ್ ಅವರು 50,170 ಕೋಟಿ ರೂ. ಸಂಪತ್ತಿನೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ. ಜಯಶ್ರೀ ಉಳ್ಳಾಲ್ 2008 ರಿಂದ ಕಂಪ್ಯೂಟರ್ ನೆಟ್‌ವರ್ಕಿಂಗ್ ಸಂಸ್ಥೆಯಾದ ಅರಿಸ್ಟಾ ನೆಟ್‌ವರ್ಕ್ಸ್‌ನ ಅಧ್ಯಕ್ಷೆ ಮತ್ತು ಸಿಇಒ ಆಗಿದ್ದಾರೆ. ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಯಾದ ಅರಿಸ್ಟಾ ನೆಟ್ವರ್ಕ್ಸ್ ಕಳೆದ ವರ್ಷ 7 ಬಿಲಿಯನ್ ಡಾಲರ್‌ಗಳ ಆದಾಯವನ್ನು ದಾಖಲಿಸಿದ್ದು, ಹಿಂದಿನ ವರ್ಷಕ್ಕಿಂತ…

Read More