ಮಂಗಳೂರು: ಬಿ.ಜೆ.ಪಿ ವತಿಯಿಂದ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ 2024 ಮತದಾರರ ಸಂವಾದ ಕಾರ್ಯಕ್ರಮ
ಮಂಗಳೂರು ಮಂಡಲ ಬಿ.ಜೆ.ಪಿ ವತಿಯಿಂದ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ 2024 ಮತದಾರರ ಸಂವಾದ ಕಾರ್ಯಕ್ರಮ ಅಸೈಗೋಳಿ ಬಂಟರ ಭವನದಲ್ಲಿ ಆದಿತ್ಯವಾರ ನಡೆಯಿತು. ಉಳ್ಳಾಲದ ಮಾಜಿ ಶಾಸಕ ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಮಾತನಾಡಿ ಪದವೀಧರರು ಅನುಭವಿಸುತ್ತಿರುವ ತೊಂದರೆ ನನಗೆ ತಿಳಿದಿದೆ ಅವರ ಧ್ವನಿಯಾಗಿ ಕೆಲಸಮಾಡುತ್ತೇನೆ, 85 ಸಾವಿರ ಮತದಾರರಿದ್ದು ಅವರೆಲ್ಲರನ್ನೂ ಸಂಪರ್ಕಿಸಿಸಲು ಸಾಧ್ಯವಿಲ್ಲ ಆದ್ದರಿಂದ ಕಾರ್ಯಕರ್ತರಾದ ನೀವೆಲ್ಲರೂ ಸಂಪರ್ಕಿಸಿ ಮತಯಾಚಿಸಬೇಕು,ನನ್ನಲ್ಲಿರುವ ಶಕ್ತಿ…

