ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಜಿಲ್ಲೆಯ ಎಲ್ಲ ವೈದ್ಯಕೀಯ ಕಾಲೇಜುಗಳಿಗೂ ಸೂಚನೆ ನೀಡಲಾಗಿದ್ದು, ಈ ರೋಗಕ್ಕೆ ಸಂಬಂಧಪಟ್ಟ ಲಕ್ಷಣ ಹೊಂದಿದ ರೋಗಿಗಳು ಚಿಕಿತ್ಸೆಗೆ ಬಂದರೆ ಮಾಹಿತಿ ನೀಡಲು ಸೂಚಿಸಲಾಗಿದೆ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ರೋಗ ಪತ್ತೆಯಾಗದಿದ್ದರೂ ಗಡಿಭಾಗದಲ್ಲೂ ಎಚ್ಚರ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆಯ ಸಿಬಂದಿಗೆ ಮೇ 20ರಿಂದ ಕೆಲವು ದಿನಗಳ ಕಾಲ ತರಬೇತಿ ನಡೆಸಲು…

Read More

ನಿಷ್ಠಾವಂತ ಕಾರ್ಯಕರ್ತರನ್ನು ಬಿಜೆಪಿ ಕಡೆಗಣಿಸುತ್ತಿದೆ:ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಆಕ್ರೋಶ

ಮಂಗಳೂರು: ‘ವಿಧಾನ ಪರಿಷತ್‌ ಟಿಕೆಟ್‌ ಹಂಚಿಕೆ ಸಂದರ್ಭದಲ್ಲಿ ಬಿಜೆಪಿ ಪ್ರಾದೇಶಿಕ ನ್ಯಾಯ ಮರೆತಿದೆ. ಬಿಜೆಪಿಗೂ ಕಾಂಗ್ರೆಸ್‌ ಮಾದರಿಯ ಗಾಡ್‌ ಫಾದರ್‌ ಸಂಸ್ಕೃತಿ ಅಂಟಿಕೊಂಡಿದ್ದು,ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ನೈರುತ್ಯ ಪಧವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್‌ ಕಿಡಿಕಾರಿದ್ದಾರೆ.ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕರಾವಳಿಯ ಜನರು ತಾವು ಹೇಳಿದ್ದೆಲ್ಲವನ್ನೂ ಕೇಳಿ ಸುಮ್ಮನಿರುತ್ತಾರೆ ಎಂಬ ಭಾವನೆ ಬಿಜೆಪಿ ನಾಯಕರಲ್ಲಿದೆ. ಅನ್ಯಾಯವಾದರೆ ಕರಾವಳಿಯ ಜನರೂ ಪ್ರತಿಭಟಿಸುತ್ತಾರೆ ಎಂಬುದನ್ನು ತೋರಿಸಿಕೊಡಲು ಚುನಾವಣೆಗೆ ನಿಂತಿದ್ದೇನೆ ಎಂದು ಪಕ್ಷದ ವರಿಷ್ಠರಿಗೆ…

Read More

ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಇದರ ವತಿಯಿಂದ ಪುಸ್ತಕ ವಿತರಣೆ

ಶ್ರೀ ರಕ್ತೇಶ್ವರಿ ಯುವಕ ಸಂಘ ನೇರಂಬೋಳು ಇದರ ವತಿಯಿಂದ ತಾರೀಕು 19/ 5/ 2024 ರಂದು ಪುಸ್ತಕ ವಿತರಣೆ ಕಾರ್ಯಕ್ರಮವು ಸಂಘದ ಸಭಾಂಗಣದಲ್ಲಿ ನಡೆಯಿತು. ಸ್ಥಳೀಯರಾದ ರಾಜೀವ ಸಾಲಿಯಾನ್ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷರಾದ ಹರೀಶ್ ಕುಲಾಲ್ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮನೋಹರ್ ಕುಲಾಲ್ ನೆರಂಬೋಳು ನಿಕಟ ಪೂರ್ವ ಅಧ್ಯಕ್ಷರಾದ ಹರಿಶ್ಚಂದ್ರ ಪೂಜಾರಿ ಸಾಂಸ್ಕೃತಿಕ ಕಾರ್ಯದರ್ಶಿ ಗಣೇಶ್ ಪೂಜಾರಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 73 ಮಂದಿಗೆ ಪುಸ್ತಕ ವಿತರಣೆ…

Read More

ಕುಲಾಲ ಸಂಘ (ರಿ.) ಕೊಲ್ಯ: ಕುಲಾಲ ಕ್ರೀಡೋತ್ಸವ -2024

ಕುಲಾಲ ಸಂಘ (ರಿ.) ಕೊಲ್ಯ, ಸೇವಾ ದಳ ಮತ್ತು ಮಹಿಳಾ ಘಟಕ ಕೊಲ್ಯ ಇದರ ಸಹಯೋಗದೊಂದಿಗೆ ಸಂಘದ ವ್ಯಾಪ್ತಿಗೆ ಒಳಪಟ್ಟ 14 ಗ್ರಾಮದ ಸಮಾಜ ಬಾಂಧವರಿಗಾಗಿ ಕುಲಾಲ ಕ್ರೀಡೋತ್ಸವ -2024 ಕಾರ್ಯಕ್ರಮವು ದಿನಾಂಕ ಮೇ19 ರಂದು ಅದ್ದೂರಿಯಾಗಿ ನಡೆಯಿತು.ಒಳಾಂಗಣ ಕ್ರೀಡಾಂಗಣದ ಉದ್ಘಾಟನೆಯನ್ನು ಶ್ರೀಮತಿ ಆಶಾಲತಾ ಅನಿಲ್ ದಾಸ್ ಅಂಬಿಕಾರೋಡ್ ನೇರವೆರಿಸಿದರು. ದಿನಾಂಕ ಮೇ 26 ರಂದು ಶ್ರೀ ರಾಮ ಫ್ರೆಂಡ್ಸ್ ಕ್ರೀಡಾಂಗಣ ಕೊಲ್ಯ ಇಲ್ಲಿ ಹೊರಾಂಗಣ ಕ್ರೀಡಾಕೂಟ ನಡೆಯಲಿದೆ.

Read More

ಬಂಟ್ವಾಳ: ಖೋಟಾ ನೋಟು ವಿನಿಮಯ : ಕೇರಳ ಮೂಲದ ಇಬ್ಬರು ಅಂದರ್..!

ಬಂಟ್ವಾಳ : ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿದ್ದ ಕೇರಳ ಮೂಲದ ತಂಡವನ್ನು ಭೇದಿಸಿದ್ದ ಬಂಟ್ವಾಳ ನಗರ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಬಳಿಕ ಪೊಲೀಸ್‌ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಕೇರಳದಲ್ಲಿ ಸ್ವಾಧೀನದಲ್ಲಿಟ್ಟು ಕೊಂಡಿದ್ದ ಒಟ್ಟು 506 ನೋಟುಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 10 ರಂದು ಬಿ.ಸಿ.ರೋಡಿನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ಮಾಹಿತಿಯಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೋಲೀಸ್ ನಿರೀಕ್ಷಕ ಆನಂತಪದ್ಮನಾಭ ನೇತೃತ್ವದ ಪೋಲೀಸರ…

Read More

ತುಳುನಾಡಿನಲ್ಲಿ ಮತ್ತೊಮ್ಮೆ ಕಾರಣಿಕ ಮೆರೆದ ಕಲ್ಲುರ್ಟಿ..!

ತುಳುನಾಡಿನಲ್ಲಿ ಅದೆಷ್ಟೋ ಸಾವಿರ ವರ್ಷಗಳಿಂದ ದೈವಾರಾಧನೆ ಎನ್ನುವುದು ಅವೈದಿಕ ಮೂಲದ ಪದ್ಧತಿಯ ಆಧಾರದ ಮೇಲೆ ನಡೆದುಕೊಂಡು ಬರುತ್ತಿದ್ದೆ. ಕಾಲ ಕ್ರಮೇಣ ಮೂಲ ಪದ್ಧತಿಗಳು ಮರೆಯಾಗುತ ಬರುತ್ತಿದ್ದೆ. ಕೊಂಬು ತೆಂಬರೆ ತಾಸೆ ಡೋಲು ನುಡಿಸುವಲ್ಲಿ ಚೆಂಡೆ ಶಬ್ದ ಕಿವಿಗೆ ಕೇಳುತ್ತಿದೆ! ಕೋಳಿ ಬಲಿ ನೀಡುವ ಜಾಗಕ್ಕೆ ಕುಂಬಳಕಾಯಿ ಕುಯ್ಯುತಿದ್ದಾರೆ , ಧೂಪದ ಜಾಗಕ್ಕೆ ಆರತಿ ಬಟ್ಟಲು ಬಂದಿದೆ , ಅವಲಕ್ಕಿ ಪನಿಯಾರ ಬಡಿಸುವಲ್ಲಿ ಪಂಚ ಕಜ್ಜಾಯ ಸಿಗುತ್ತಿದೆ , ಸಂಧಿ ಪಾರ್ಧನ ಕೇಳುವಲ್ಲಿ ಮಂತ್ರ ಶ್ಲೋಕಗಳ ಉಚ್ಛಾರಣೆ ನಡೆಯುತ್ತಿದೆ!…

Read More

ಮಂಗಳೂರು: ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವತಿಯಿಂದ ಪ್ರಸಿದ್ಧ ತಂಡದಿಂದ ಕುಣಿತ ಭಜನೆ

ಮಂಗಳೂರು: ಕಳೆದ 25 ವರ್ಷದಲ್ಲಿಧಾರ್ಮಿಕ ಸಾಮಾಜಿಕ ಸೇವೆಯನ್ನು ಮಾಡಿಕೊಂಡು ಬರುತ್ತಿರುವ ಮಂಗಳೂರಿನ ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ವತಿಯಿಂದ ಶ್ರೀ ರಾಮ ಸನಾತನ ಭಜಕರ ಒಕ್ಕೂಟದ ಸಹಕಾರದಲ್ಲಿ ಪ್ರಸಿದ್ಧ ತಂಡದ ಕುಣಿತ ಭಜನೆಯ ವಿಶೇಷ ಕಾರ್ಯಕ್ರಮ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರತಿಷ್ಠಾ ದಿನದ ಅಂಗವಾಗಿ ಶುಕ್ರವಾರ ಸಂಜೆ ದೇವಸ್ಥಾನದ ವಠಾರದಲ್ಲಿ ನಡೆಯಿತು.ಮಂಗಳಾ ದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಎಮ್ ಅರುಣ್ ಕುಮಾರ್ ದೀಪ ಬೆಳಗಿಸಿ ಕುಣಿತ ಭಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮಂಗಳೂರಿನಿ ಪ್ತಸಿದ್ಧ…

Read More

ಮಂಗಳೂರು: ಬಿ.ಜೆ.ಪಿ ವತಿಯಿಂದ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ 2024 ಮತದಾರರ ಸಂವಾದ ಕಾರ್ಯಕ್ರಮ

ಮಂಗಳೂರು ಮಂಡಲ ಬಿ.ಜೆ.ಪಿ ವತಿಯಿಂದ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣೆ 2024 ಮತದಾರರ ಸಂವಾದ ಕಾರ್ಯಕ್ರಮ ಅಸೈಗೋಳಿ ಬಂಟರ ಭವನದಲ್ಲಿ ಆದಿತ್ಯವಾರ ನಡೆಯಿತು. ಉಳ್ಳಾಲದ ಮಾಜಿ ಶಾಸಕ ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ನೈಋತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಮಾತನಾಡಿ ಪದವೀಧರರು ಅನುಭವಿಸುತ್ತಿರುವ ತೊಂದರೆ ನನಗೆ ತಿಳಿದಿದೆ ಅವರ ಧ್ವನಿಯಾಗಿ ಕೆಲಸಮಾಡುತ್ತೇನೆ, 85 ಸಾವಿರ ಮತದಾರರಿದ್ದು ಅವರೆಲ್ಲರನ್ನೂ ಸಂಪರ್ಕಿಸಿಸಲು ಸಾಧ್ಯವಿಲ್ಲ ಆದ್ದರಿಂದ ಕಾರ್ಯಕರ್ತರಾದ ನೀವೆಲ್ಲರೂ ಸಂಪರ್ಕಿಸಿ ಮತಯಾಚಿಸಬೇಕು,ನನ್ನಲ್ಲಿರುವ ಶಕ್ತಿ…

Read More

ಬೆಳ್ತಂಗಡಿ: ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಅರೆಸ್ಟ್- ಪೊಲೀಸ್ ಠಾಣೆಯಲ್ಲಿ ಧರಣಿ ಕುಳಿತ ಶಾಸಕ ಹರೀಶ್ ಪೂಂಜಾ

ಬೆಳ್ತಂಗಡಿ: ಅಕ್ರಮವಾಗಿ ಕಲ್ಲುಕೋರೆ ಗಣಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸರು ಬಿಜೆಪಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿಯನ್ನು ಅರೆಸ್ಟ್ ಮಾಡಿದ್ದರು. ಈ ಹಿನ್ನಲೆ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರೋರಾತ್ರಿ ಧರಣಿ ನಡೆಸಿದ್ದು, ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳ್ತಂಗಡಿಯ ಮೆಲಂತಬೆಟ್ಟು ಎಂಬಲ್ಲಿ ಕಲ್ಲಿನ ಕೋರೆ ನಡೆಯುತ್ತಿದ್ದಲ್ಲಿಗೆ ಶನಿವಾರ ಸಂಜೆ ತಹಶೀಲ್ದಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಕೋರೆಯನ್ನು ಬಿಜೆಪಿ ಯುವಮೋರ್ಚಾ…

Read More

ಪುತ್ತೂರು : ಹೆಲ್ಮೆಟ್ ಇಲ್ಲದೆ ರಾಂಗ್ ಸೈಡ್ ನಲ್ಲಿ ವಿದ್ಯಾರ್ಥಿಗಳ ತ್ರಿಬಲ್ ರೈಡ್ : ಕಾರುಗಳಿಗೆ ಡಿಕ್ಕಿ!

ಪುತ್ತೂರು : ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ದ್ವಿಚಕ್ರ ವಾಹನದಲ್ಲಿ ರಾಂಗ್ ಸೈಡ್ ನಿಂದ ಬಂದು ಕಾರುಗಳಿಗೆ ಡಿಕ್ಕಿ ಹೊಡೆದ ಘಟನೆ ದರ್ಬೆ ಸಮೀಪ ನಡೆದಿದೆ. ಆಕ್ಟಿವಾದಲ್ಲಿ ಮೂವರು ವಿದ್ಯಾರ್ಥಿಗಳು ಹೆಲ್ಮೆಟ್ ಕೂಡ ಧರಿಸದೆ ರಾಂಗ್ ಸೈಡ್ ನಿಂದ ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಘಟನೆಯಿಂದಾಗಿ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

Read More