ಮಂಗಳೂರು: ಸೈಬರ್ ವಂಚಕರಿಂದ ʼರ್ಯಾಟ್ʼ ವಂಚನೆ – ಮೊಬೈಲ್ ಗೆ ಲಿಂಕ್ ಕಳುಹಿಸಿ ಹಣ ವರ್ಗಾವಣೆ
ಮಂಗಳೂರು: ಸೈಬರ್ ವಂಚಕರು ರಿಮೋಟ್ ಆಕ್ಸೆಸ್ ಟೂಲ್‌ಗಳನ್ನು ಬಳಸಿಕೊಂಡು ಎಪಿಕೆ ಫೈಲ್ ಅಥವಾ ಆಂಡ್ರಾಯ್ಡ್ ಆಪ್ ಸಿದ್ಧಪಡಿಸುತ್ತಾರೆ. ಬಳಿಕ ವಾಟ್ಸಾಪ್ ಮೆಸೇಜ್ ಮುಖಾಂತರ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಕಳುಹಿಸಿ ಬ್ಯಾಂಕ್ ಖಾತೆಯಲ್ಲಿರುವ ಎಲ್ಲಾ ಹಣವನ್ನು ದೋಚುತ್ತಿದ್ದಾರೆ. ವಂಚಕರು ವಾಟ್ಸಾಪ್ ನಲ್ಲಿ ಕಳುಹಿಸಿದ ಎಪಿಕೆ ಫೈಲ್ ಮೆಸೇಜ್ ಅನ್ನು ಓಪನ್ ಮಾಡಿದಲ್ಲಿ ನಮ್ಮ ಮೊಬೈಲ್ ಗೆ ಬರುವ ಎಲ್ಲಾ ಮೆಸೇಜ್ ಗಳು ವಂಚಕರ ಮೊಬೈಲ್ ಗಳಿಗೆ ತಾನಾಗಿಯೇ ಹೋಗುತ್ತವೆ. ಆ ಮೂಲಕ ವಂಚಕರು ನಮ್ಮ…

