ಪುತ್ತೂರು: ನಿರ್ಮಾಣ ಹಂತದ ಕಿರು ಸೇತುವೆ ಕುಸಿತ

ಪುತ್ತೂರು: ನಿರ್ಮಾಣಹಂತದ ಕಿರುಸೇತುವೆಯೊಂದು ಕುಸಿದು ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಸಮೀಪದ‌ ಎಂಜಿರ ಎಂಬಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ‌ ಹಿನ್ನಲೆಯಲ್ಲಿ ಈ ಸೇತುವೆ ನಿರ್ಮಾಣವಾಗುತ್ತಿದ್ದು, ಈ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನೀರು ಹರಿದು ಕುಸಿದು ಬಿದ್ದಿರುವ ಸಾಧ್ಯತೆ ಎಂದು ಹೇಳಲಾಗಿದೆ. ಆದರೆ ಸಾರ್ವಜನಿಕರು ಈ ಕಾಮಗಾರಿ ಕಳಪೆಯಾಗಿತ್ತು ಎಂದು ಆರೋಪಿಸಿದ್ದು, ಈ ಕಾರಣದಿಂದಾಗಿಯೇ ಸೇತುವೆ ಕುಸಿದಿದೆ ಎಂದು ಆರೋಪಿಸಿದ್ದಾರೆ.

Read More

ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀರಾಮ ಸೇನೆಯಿಂದ ಸಹಾಯವಾಣಿ ಆರಂಭ

ಮಂಗಳೂರು: ಲವ್‌ ಜಿಹಾದ್‌ ತಡೆಯಲು ಶ್ರೀ ರಾಮ ಸೇನೆಯು ಸಹಾಯವಾಣಿ ಆರಂಭಿಸಿದೆ. ದಿನದ 24 ಗಂಟೆ ಕಾರ್ಯನಿರ್ವಹಣೆ ನಡೆಸಲಾಗುವುದು, ಕಾನೂನು ಸಲಹೆ ಲಭ್ಯವಿರುತ್ತದೆ ಎಂದು ಶ್ರೀರಾಮ ಸೇನೆ ಮಾಹಿತಿ ನೀಡಿದೆ. 9090443444 ದೂರವಾಣಿ ಸಂಖ್ಯೆಯ ಸಹಾಯವಾಣಿ ಅರಂಭಿಸಲಾಗಿದೆ. ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದು, ಲವ್‌ ಜಿಹಾದ್‌ ಕರೆಗಳನ್ನು ಮಾತ್ರ ಸ್ವೀಕಾರ ಮಾಡಲಾಗುತ್ತದೆ. ಸಹಾಯವಾಣಿ ತಂಡದಲ್ಲಿ ನುರಿತ ವಕೀಲರು, ಹಿರಿಯ ಪೊಲೀಸ್‌ ಅಧಿಕಾರಿಗಳು ಇರುತ್ತಾರೆ. ಕರೆ ಮಾಡಿದವರ ಮಾಹಿತಿ ಗೌಪ್ಯವಾಗಿಡಲಾಗುವುದು ಎಂದು ಮಂಗಳೂರಿನಲ್ಲಿ ಸಹಾಯವಾಣಿ ಉದ್ಘಾಟಿಸಿ ಶ್ರೀರಾಮ…

Read More

ಮಂಗಳೂರು- ಧರ್ಮಸ್ಥಳ ಸೂಪರ್‌ಫಾಸ್ಟ್ ಬಸ್ಸು ಆರಂಭ..!

ಮಂಗಳೂರು:ಕೆಎಸ್‌ಆರ್‌ಟಿಸಿ – | ಮಂಗಳೂರು ವಿಭಾಗ ಮಂಗಳೂರು ಮತ್ತು ಧರ್ಮಸ್ಥಳ ನಡುವೆ ನಾಲ್ಕು ‘ಸೂಪರ್‌ಫಾಸ್ಟ್’ – ಬಸ್ಸುಗಳನ್ನು ಪ್ರಾರಂಭಿಸಿದೆ. ಬಿಜೈಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಿಂದ ಕಾರ್ಯನಿರ್ವಹಿಸಲಿರುವ ಬಸ್ಸುಗಳು ಬಂಟ್ವಾಳ, ಕಾರಿಂಜ ಕ್ರಾಸ್, ಪುಂಜಾಲಕಟ್ಟೆ ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ನಿಲ್ಲಲಿದೆ. ಕೆಎಸ್‌ಆರ್‌ಟಿಸಿ ಬಸ್ಸುಗಳು ಬಿಜೈ ನಿಲ್ದಾಣದಿಂದ ಬೆಳಗ್ಗೆ 6.15, 6.40,7.15, 10, 10.45, 11.35, ಮಧ್ಯಾಹ್ನ12.15, 4.30,ಸಂಜೆ 5.15 ಮತ್ತು ಸಂಜೆ 6 ಗಂಟೆಗೆ ಹೊರಡಲಿದೆ. ಧರ್ಮಸ್ಥಳದಿಂದ ಬೆಳಗ್ಗೆ 7.45, 8.15, 8.45, 9.10ಕ್ಕೆ ಮಧ್ಯಾಹ್ನ1,2…

Read More

ಮಂಗಳೂರು : ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅಂತಾರಾಷ್ಟ್ರೀಯ‌ ಆರ್ಯಭಟ ಪ್ರಶಸ್ತಿಗೆ ಆಯ್ಕೆ

ಮಂಗಳೂರು : ಯಕ್ಷಗಾನ ಕಲಾವಿದ ದಿನೇಶ್ ಕೋಡಪದವು ಅವರು ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ-2024ಗೆ ಆಯ್ಕೆಯಾಗಿದ್ದಾರೆ. ಯಕ್ಷಗಾನ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜೂನ್ 6ರಂದು ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ.

Read More

ಗಮನಿಸಿ: ಮಂಗಳೂರಿನಲ್ಲಿ ಮೇ 30 – 31ರವರೆಗೆ ಈ ಪ್ರದೇಶಗಳಿಗೆ ನೀರಿಲ್ಲ..!

ಮಂಗಳೂರು: ನೀರು ಸರಬರಾಜು ಆಗುವ ಕೊಳವೆ ಮರುಜೋಡಣೆ ಮಾಡುವ ಹಿನ್ನಲೆಯಲ್ಲಿ ಮೇ 30ರ ಬೆಳಗ್ಗೆ 6ರಿಂದ ಮೇ 31ರ ಬೆಳಗ್ಗೆ 6ರವರೆಗೆ ಮಂಗಳೂರಿನ ಈ ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಳ್ಳಲಿದೆ. ಮಂಗಳೂರು ಮನಪಾ ನೀರು ಸರಬರಾಜು ವ್ಯವಸ್ಥೆಯ ತುಂಬೆ HLPS-1 18 MGD ರೇಚಕ ಸ್ಥಾವರದ ಪಂಪಿಂಗ್ ಮಾಡುವ ಕೊಟ್ಟಾರ ಚೌಕಿಯಿಂದ ಗೊಲ್ಡ್ ಪಿಂಚ್ ಗ್ರೌಂಡ್‌ವರೆಗೆ ಕೆಯುಐಡಿಎಫ್‌ಸಿ ವತಿಯಿಂದ 900 ಎಂ.ಎಂ ವ್ಯಾಸದ ಕೊಳವೆ ಮರುಜೋಡಣೆ ಕಾಮಗಾರಿ ಮಾಡುವ ಕಾಮಗಾರಿ ನಡೆಯಲಿದೆ. ಆದ್ದರಿಂದ ಮೇ 30 –…

Read More

ಮಂಗಳೂರು: ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ- ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಮಂಗಳೂರು: ರಸ್ತೆಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಸಾಮೂಹಿಕ ಹನುಮಾನ್ ಚಾಲೀಸಾ ಪಠಣದ ಮೂಲಕ ತಡೆಯುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ಕೆಲವು ಕಡೆ ರಸ್ತೆ ಮತ್ತು ಸಾರ್ವಜನಿಕ ಜಾಗದಲ್ಲಿ ನಮಾಜ್ ಮಾಡುತ್ತಿರುವ ಘಟನೆಗಳು ನಡೆಯುತ್ತಿರುವುದು ಜಿಲ್ಲೆಯಲ್ಲಿ ಅಶಾಂತಿ ನಿರ್ಮಿಸಲು ಸಂಚು ರೂಪಿಸುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಇವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸಿದರೆ ಅದೇ ಸ್ಥಳದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ ಮಾಡುವುದರ ಮೂಲಕ ತಡೆಯುತ್ತೇವೆ ಎಂದು…

Read More

ಉಳ್ಳಾಲ: ಬಿಲ್ಡರ್‌ಗೆ 86 ಲಕ್ಷ ರೂ ವಂಚನೆ..! ಬ್ಯಾಂಕ್‌ ಮ್ಯಾನೇಜರ್‌ ಸೇರಿ 4 ಜನರ ವಿರುದ್ದ ಪ್ರಕರಣ ದಾಖಲು

ಮಂಗಳೂರು : ಬಿಲ್ಡರ್‌ ಓರ್ವರಿಂದ ರೂ. 86 ಲಕ್ಷ ಹಣವನ್ನು ಪಡೆದು ವಂಚಿಸಿ, ಅವರ ಲೇಔಟ್‌ ವ್ಯವಹಾರಕ್ಕೆ ಅಡ್ಡಿಪಡಿಸಿ, ಜೀವಬೆದರಿಕೆಯೊಡ್ಡಿರುವ ಬ್ಯಾಂಕ್‌ ಮ್ಯಾನೇಜರ್‌ ಸಹಿತ ಬ್ರೋಕರ್‌ , ಸಿವಿಲ್‌ ಗುತ್ತಿಗೆದಾರ ಹಾಗೂ ಅವರ ಸಹಚರನ ವಿರುದ್ಧ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಐಪಿಸಿ 1860 ರ ಅಡಿ ಸೆಕ್ಷನ್‌ 341, 447, 323, 504,506,420, 34 ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಾಗಿದೆ.ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್‌ ಜೆಪ್ಪಿನಮೊಗರುವಿನ ಪವನ್‌ ಕುಮಾರ್‌, ಬಾಕಿಮಾರು ನಿವಾಸಿ ಬ್ರೋಕರ್‌ ಆಗಿರುವ ಗುರುರಾಜ್‌, ಸಿವಿಲ್‌ ಗುತ್ತಿಗೆದಾರ…

Read More

ಕೊಂಕಣ ರೈಲ್ವೆ ಮಾರ್ಗದಲ್ಲಿ ತಪ್ಪಿದ ರೈಲು ದುರಂತ: ಉಡುಪಿ, ಸುರತ್ಕಲ್‌ನಲ್ಲಿ ನಿಂತ ರೈಲುಗಳು

ಉಡುಪಿ: ಜಾಗೃತ ಹಳಿ ನಿರ್ವಾಹಕ (ಟಿಎಂ) ಪ್ರದೀಪ್ ಶೆಟ್ಟಿ ಮಧ್ಯರಾತ್ರಿ 2:25ರ ಸುಮಾರಿಗೆ ಕೊಂಕಣ ರೈಲು ಮಾರ್ಗದ ಇನ್ನಂಜೆ ಹಾಗೂ ಪಡುಬದ್ರಿ ನಡುವೆ ರೈಲ್ವೆ ಹಳಿಯಲ್ಲಿ ಹಳಿ ಜಾಯಿಂಟ್ ಜಾರಿರುವುದನ್ನು ಪತ್ತೆ ಹಚ್ಚುವ ಮೂಲಕ ಸಂಭಾವ್ಯ ರೈಲು ದುರಂತವನ್ನು ತಪ್ಪಿಸಿದ್ದಾರೆ. ಘಟನೆ ಶನಿವಾರ ಮಧ್ಯರಾತ್ರಿಯ ಬಳಿಕ ನಡೆದಿದೆ. ಟ್ರ್ಯಾಕ್ ಜಾಯಿಂಟ್ ತಪ್ಪಿರುವುದನ್ನು ಕತ್ತಲಲ್ಲೇ ಪತ್ತೆ ಹಚ್ಚಿದ ಪ್ರದೀಪ್ ಶೆಟ್ಟಿ ತಕ್ಷಣ ಅದನ್ನು ಉಡುಪಿಯಲ್ಲಿದ್ದ ಮೇಲಾಧಿಕಾರಿಗಳ ಗಮನಕ್ಕೆ ತಂದರು. ಹಿರಿಯ ಅಧಿಕಾರಿಗಳು ತಕ್ಷಣ ಆರ್‌ಎಂಇ (ದುರಸ್ಥಿ ಸಲಕರಣೆಗಳಿರುವ ವಾಹನ)ದೊಂದಿಗೆ…

Read More

ಧರ್ಮಸ್ಥಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು, ಪ್ರಕರಣ‌ ದಾಖಲು

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಬೈಕ್ ನಿಲ್ಲಿಸಿ ದೇವರ ದರ್ಶನ ಪಡೆದು ಹಿಂತಿರುಗುವ ವೇಳೆಗೆ ಕಳ್ಳರು ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ‌ಸಂಭವಿಸಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ. ಬೈಂದೂರು ನಿವಾಸಿ ಮುತ್ತಯ್ಯ ಆಚಾರಿ ಎಂಬವರು ಈಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಮೇ 24ರಂದು ತನ್ನ ಮೋಟಾರ್ ಸೈಕಲ್ k.A 20EJ 3502 ರಲ್ಲಿ ಮಗ ದಿನೇಶ ನೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದಾರೆ. ಇವರೊಂದಿಗೆ ಇನ್ನೂ ಹಲವರು ಬೈಕ್ ಗಳಲ್ಲಿಯೇ ಬಂದಿದ್ದು ಎಲ್ಲರೂ ಬೈಕ್ ಗಳನ್ನು…

Read More

ಕೊಲ್ಯ ಕುಲಾಲ ಸಂಘ (ರಿ.) : 2024 ನೇ ವಾರ್ಷಿಕ ಕ್ರೀಡಾ ಕೂಟ

ಕೊಲ್ಯ ಕುಲಾಲ ಸಂಘ (ರಿ ) ಇದರ 2024 ನೇ ವಾರ್ಷಿಕ ಕ್ರೀಡಾ ಕೂಟ ಶ್ರೀ ರಾಮ ಕ್ರೀಡಾಂಗಣ ಕೊಲ್ಯ ದಲ್ಲಿ ನಡೆಯಿತು. ಕಾರ್ಯಕ್ರಮ ವನ್ನು ಉಳ್ಳಾಲ ಮುನ್ನೂರು ಪಂಚಾಯತ್ ಉಪಾಧ್ಯಕ್ಷರು ಶ್ರೀ ಮಹಾಬಲ ದೆಪ್ಪಲಿ ಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು.. ಕ್ರೀಡಾಕೂಟ ವನ್ನು ಉದ್ಯಮಿ ಶ್ರೀ ಭರತ್ ರಾಜ್ ಮುಂಡೋಲಿ ಮಾಲಕರು ಭಾರತ್ ಕಾರ್ಪೋರೇಶನ್ ಅತಿಥಿ ಗಳಾಗಿ ಶ್ರೀ ವಿಶ್ವಥ್ ಕೊಲ್ಯ, ಕಾರ್ಯದರ್ಶಿ ಯೂತ್ ಇಂಟಕ್ ಮಂಗಳೂರು ಹಾಗೂ ಸಂಘದ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಕ್ರೀಡಾ…

Read More